Actor Yash; ನನ್ನ ಜತೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ; ರಾಧಿಕಾ ಪಂಡಿತ್ ಬಗ್ಗೆ ಯಶ್ ಓಪನ್ ಟಾಕ್
Yash Radhika: ಪತ್ನಿ ರಾಧಿಕಾ ಪಂಡಿತ್ (radhika Pandith) ಅವರಿಂದ ಪಡೆದ ಬೆಂಬಲದ ಬಗ್ಗೆ ಯಶ್ ಮಾತನಾಡಿದ್ದಾರೆ . ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ತಮ್ಮ ವೃತ್ತಿಜೀವನದ ಅತ್ಯಂತ ಬೇಡಿಕೆಯ ಯೋಜನೆಗಳಲ್ಲಿ ಒಂದು ಎಂದು ನಟ ಬಣ್ಣಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ, ಈ ಬಗ್ಗೆ ಮಾತನಾಡಿದರು.
ರಾಧಿಕಾ ಪಂಡಿತ್ -
ಟಾಕ್ಸಿಕ್ ಚಿತ್ರದಲ್ಲಿ (Toxic Movie) ಕೆಲಸ ಮಾಡುವಾಗ ತಮ್ಮ ಪತ್ನಿ ರಾಧಿಕಾ ಪಂಡಿತ್ (radhika Pandith) ಅವರಿಂದ ಪಡೆದ ಬೆಂಬಲದ ಬಗ್ಗೆ ಯಶ್ ಮಾತನಾಡಿದ್ದಾರೆ . ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ತಮ್ಮ ವೃತ್ತಿಜೀವನದ ಅತ್ಯಂತ ಬೇಡಿಕೆಯ ಯೋಜನೆಗಳಲ್ಲಿ ಒಂದು ಎಂದು ನಟ ಬಣ್ಣಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ (Cinema Trailer) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ, ಈ ಬಗ್ಗೆ ಮಾತನಾಡಿದರು.
ರಾಧಿಕಾಗೆ ಕೃತಜ್ಞತೆ
ಟಾಕ್ಸಿಕ್ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಯಶ್, ತನಗೆ ಬೆಂಬಲ ನೀಡಿದ್ದಕ್ಕಾಗಿ ರಾಧಿಕಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
"ನನ್ನ ಹೆಂಡತಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಪ್ರತಿ ಸಿನಿಮಾಕ್ಕೂ ನಾನು ನೂರರಷ್ಟು ಶ್ರಮ ಹಾಕುತ್ತೇನೆ. ಆದರೆ ಈ ಸಿನಿಮಾದ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರತಿದಿನವೂ ಹೋರಾಟದಂತೆ ಇರುತ್ತಿತ್ತು. ‘ನನ್ನಂಥಹ ವ್ಯಕ್ತಿಯ ಜೊತೆಗೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ. ನನ್ನೊಟ್ಟಿಗೆ ಗುರುತಿಸಿಕೊಳ್ಳುವುದು ಸಹ ಎಷ್ಟೋ ಜನರಿಗೆ ಕಷ್ಟ ಅಂಥಹುದರಲ್ಲಿ ನನ್ನೊಂದಿಗೆ ಅನುಕಾಲ ಇರುವುದು ಸಾಮಾನ್ಯವಾದ ಸ್ಟ್ರೆಸ್ ಅಲ್ಲ, ಆದರೆ ರಾಧಿಕಾ ಅದನ್ನು ಮಾಡುತ್ತಿದ್ದಾರೆ’ ಎಂದರು ಯಶ್.
ಇದನ್ನೂ ಓದಿ: Toxic movie Trailer: ಕನ್ನಡಿಗರು ತಲೆ ತಗ್ಗಿಸುವಂತೆ ನಾವು ಮಾಡಲ್ಲ; ಯಶ್
When the world is normalising separation I’m still dreaming of a love like Yash and Radhika Pandit’s. ❤️#Yash #ToxicTheMovie #ToxicTrailer pic.twitter.com/l6rLXaJVfz
— 𝑲𝒂𝒓𝒕𝒉𝒊𝒌 (@Karthik_gowda18) August 8, 2026
“ನನ್ನ ಪ್ರತಿ ಸಿನಿಮಾಕ್ಕೂ ನಾನು ನೂರರಷ್ಟು ಶ್ರಮ ಹಾಕುತ್ತೇನೆ. ಆದರೆ ಈ ಸಿನಿಮಾದ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರತಿದಿನವೂ ಹೋರಾಟದಂತಿತ್ತು. ಇದಕ್ಕಾಗಿ ನಾನು ಬಹಳಷ್ಟು ಸಮಯ ಕೊಡಬೇಕಾಯಿತು. ನನ್ನ ಗೈರುಹಾಜರಿಯಲ್ಲಿ ಅವರು ಎಲ್ಲವನ್ನೂ ಮ್ಯಾನೇಜ್ ಮಾಡಿದ್ದಾರೆ. ಸಾಕಷ್ಟು ತ್ಯಾಗ ಮಾಡಿದ್ದಾರೆ” ಎಂದು ಯಶ್ ಹೇಳಿದರು.
ನಿರ್ಮಾಪಕ ಕೆವಿಎನ್ ವೆಂಕಟ್ ಅವರು ಮೊದಲು ರಾಧಿಕಾ ಪಂಡಿತ್ ಅವರಿಗೆ ಧನ್ಯವಾದ ಹೇಳಿದರು. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ಅಂತೆ ವೆಂಕಟ್ ಅವರು ಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಆಗಿದ್ದು. ಆ ನಂತರ ನಟಿ ನಯನತಾರಾ, ರುಕ್ಮಿಣಿ ವಸಂತ್, ನಿರ್ದೇಶಕಿ ಗೀತು ಮೋಹನ್‌ದಾಸ್ ಕೊನೆಗೆ ನಟ ಯಶ್ ಸಹ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾದ ಧನ್ಯವಾದ ಹೇಳಿದರು.
ಟಾಕ್ಸಿಕ್ ಸಿನಿಮಾ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದೆ, ಅದರ ಟೀಸರ್ ಮತ್ತು ಹಾಡುಗಳು ಯಶ್ ಪಾತ್ರದ ಬಗ್ಗೆ ಸುಳಿವು ನೀಡುತ್ತಿವೆ.
ಇದನ್ನೂ ಓದಿ: Toxic trailer: ರಣ್ಬೀರ್ ಕಪೂರ್ ಜೊತೆ ʻಟಾಕ್ಸಿಕ್ʼ ಈ ಸೀನ್ ಹೋಲಿಕೆ ಏಕೆ?
ಟಾಕ್ಸಿಕ್ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿಯೂ ಬಿಡುಗಡೆಯಾಗಲಿದೆ. ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಕೂಡ ತಾರಾಗಣದ ಭಾಗವಾಗಿದ್ದಾರೆ. ಈ ಯೋಜನೆ ಆಗಸ್ಟ್ 26 ರಂದು ಸಿನಿಮಾ ತೆರೆಗೆ ಬರಲಿದೆ.