Actor Vishal: ನನಗೆ ಪ್ರಶಸ್ತಿ ಬಂದರೆ ಕಸದ ಬುಟ್ಟಿಗೆ ಎಸೆಯುತ್ತೇನೆ: ನಟ ವಿಶಾಲ್ ಶಾಕಿಂಗ್ ಹೇಳಿಕೆ
ಭಾರತೀಯ ಚಿತ್ರಗಳಲ್ಲ ಅತ್ಯುನ್ನತ ಪ್ರದರ್ಶನ ತೋರಿದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಇದೀಗ ಇದೇ ಪ್ರಶಸ್ತಿಯ ಕುರಿತು ತಮಿಳು ನಟ ವಿಶಾಲ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಟ ನಟಿಯರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ನೀಡಲಾಗುವ ಪ್ರಶಸ್ತಿಗಳ ಕುರಿತು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅವರು ಮಾತನಾಡಿದ್ದಾರೆ.

Actor Vishal -

ಚೆನ್ನೈ: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ನೀಡಲಾಗುತ್ತದೆ. ನಟನೆ, ನಿರ್ದೇಶನ, ಸಾಹಿತ್ಯ, ಸಂಗೀತ, ಗಾಯಕ/ಗಾಯಕಿ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ. ಇದೀಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕುರಿತು ತಮಿಳು ನಟ ವಿಶಾಲ್ (Vishal) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಟನಾಗಿ ಅಭಿನಯಿಸುವ ಜತೆಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗಮನ ಸೆಳೆದ ವಿಶಾಲ್, ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಕಲಾವಿದರಿಗೆ ನೀಡಲಾಗುವ ಪ್ರಶಸ್ತಿಗಳ ಕುರಿತು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಅವರು ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು ಸಿನಿಮಾ ಇಂಡಸ್ಟ್ರಿಯ ಪ್ರಶಸ್ತಿಗಳ ಬಗ್ಗೆ ಮಾತನಾಡಿ, ನನಗೆ ಯಾವ ಪ್ರಶಸ್ತಿಗಳ ಮೇಲೆಯೂ ನಂಬಿಕೆ ಇಲ್ಲ. ಅದೆಲ್ಲ ಹುಚ್ಚುತನವಷ್ಟೇ. 4-5 ಜನ ಕೂತು ಕೋಟ್ಯಂತರ ಜನರಿಗೆ ಯಾವ ಸಿನಿಮಾ ಇಷ್ಟವಾಗುತ್ತದೆ, ಯಾವ ನಟ ಅಥವಾ ನಟಿ ಇಷ್ಟವಾಗುತ್ತಾರೆ ಎಂದು ಹೇಗೆ ತೀರ್ಮಾನಿಸುತ್ತಾರೆ. ರಾಷ್ಟ್ರ ಪ್ರಶಸ್ತಿಯನ್ನು ಕೂಡ ಸೇರಿಸಿ ಯಾವ ಪ್ರಶಸ್ತಿಯ ಮೇಲೂ ನನಗೆ ನಂಬಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ನಟ ವಿಶಾಲ್ ಅವರ ವೈರಲ್ ಹೇಳಿಕೆ:
"I don't believe in awards🏆. Awards are Bull sh!t. 8 people can't decide what 8 Crore people will like❌. I'm saying including national Awards. Not because I don't get awards. If they give awards, I will just throw in Dustbin🚮"
— AmuthaBharathi (@CinemaWithAB) October 18, 2025
- #Vishal recent podcastpic.twitter.com/IjsO6CIoYL
ಬಳಿಕ ಮಾತನಾಡಿ, ʼʼರಾಷ್ಟ್ರಪ್ರಶಸ್ತಿಯನ್ನು ನೀಡಲು ಅನೇಕ ಮಾನದಂಡ ಇದೆ ಎಂದು ಹೇಳುತ್ತಾರೆ. ರಾಷ್ಟ್ರ ಪ್ರಶಸ್ತಿ ನೀಡಲು ಒಂದು ತಂಡ ಇರುತ್ತದೆ ಅಷ್ಟೇ. ಅದರ ಹೊರತು ಜನರ ಅಭಿಪ್ರಾಯವೇ ಮುಖ್ಯ ಎಂಬುದನ್ನೇ ಮರೆತು ಬಿಡುತ್ತಾರೆ. ಆ ತಂಡ ಅಷ್ಟೇ ಸಿನಿಮಾ ನೋಡಿ ಅತ್ಯುತ್ತಮ ನಟ, ನಟಿ ಎಂದು ನಿರ್ಧರಿಸುವುದು ಬಳಿಕ ಅಂತವರಿಗೆ ರಾಷ್ಟ್ರ ಪ್ರಶಸ್ತಿ ನೀಡುವುದನ್ನು ನಾನು ಒಪ್ಪಲ್ಲ. ನನಗೆ ಪ್ರಶಸ್ತಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ ಅಲ್ಲಿ ಅವರು ಅನುಸರಿಸುವ ಮಾನದಂಡದ ಬಗ್ಗೆ ನನಗೆ ಅಸಮಾಧಾನ ಇದೆʼʼ ಎಂದು ತಿಳಿಸಿದ್ದಾರೆ.
ಯಾವುದೇ ಸಿನಿಮಾ ಮಾಡುವಾಗ ಪ್ರಶಸ್ತಿ ಬರಬೇಕು ಎಂದು ಬಯಸುವುದಿಲ್ಲವೇ ಎನ್ನುವ ಪ್ರಶ್ನೆಗೆ "ಖಂಡಿತ ಇಲ್ಲ. ನಾನು ಮೊದ್ಲೆ ಹೇಳ್ತೀನಿ. ಒಂದು ವೇಳೆ ಪ್ರಶಸ್ತಿ ಕೊಟ್ರು ನಾನು ಹೋಗ್ತಾ ದಾರಿಯಲ್ಲಿ ಕಸದ ಡಬ್ಬಕ್ಕೆ ಹಾಕ್ತೀನಿ. ಚಿನ್ನದ ಪ್ರಶಸ್ತಿ ಆಗಿದ್ದರೆ ಅದನ್ನು ಮಾರಿ ಹಣವನ್ನು ಒಳ್ಳೆ ಕಾರ್ಯಕ್ಕೆ ಕೊಟ್ಟುಬಿಡ್ತೀನಿ. ಯಾರು ನಿಜಕ್ಕೂ ಅರ್ಹರು ಇರ್ತಾರೆ ಅವರಿಗೆ ಪ್ರಶಸ್ತಿ ಕೊಡಿ ಅಂತೀನಿ. ಬೇರೆಯವರಿಗೆ ಪ್ರಶಸ್ತಿ ಮೇಲೆ ನಂಬಿಕೆ ಇರಬಹುದು. ಆದರೆ ಏಳೆಂಟು ಜನ ಕೂತು ನಿರ್ಧರಿಸಿ ಪ್ರಶಸ್ತಿ ಕೊಡುವ ಆ ಕಾನ್ಸೆಪ್ಟ್ ಅನ್ನು ನಾನು ಒಪ್ಪಲ್ಲ" ನಟ ವಿಶಾಲ್ ವಿವರಿಸಿದ್ದಾರೆ.
ಇದನ್ನು ಓದಿ:Kannada New Movie: ವಿಭಿನ್ನ ಶೀರ್ಷಿಕೆಯ ‘4.30 - 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ’ ಚಿತ್ರಕ್ಕೆ ಮುಹೂರ್ತ
ʼʼನಾನು ಮಾಡುವ ಸಿನಿಮಾಗಳಿಗೆ ಪ್ರಶಸ್ತಿ ಬರಬೇಕು ಎಂಬ ಹಂಬಲ ಖಂಡಿತ ಇಲ್ಲ. ನಾನು ಸಿನಿಮಾದ ಕಥೆ, ಇತರ ಅಂಶವನ್ನು ಇಷ್ಟಪಟ್ಟು ಅದರಲ್ಲಿ ಕೆಲಸ ಮಾಡುತ್ತೇನೆ. ಒಂದು ವೇಳೆ ಪ್ರಶಸ್ತಿ ನನಗೆ ಕೊಟ್ಟರು ಅದನ್ನು ಕಸದ ಜತೆ ಎಸೆದು ಬಿಡ್ತೀನಿ. ಯಾಕೆಂದರೆ ಅದರ ಬಗ್ಗೆ ನನಗೆ ವ್ಯಾಮೋಹ ಇಲ್ಲʼʼ ಎಂದು ಹೇಳಿದ್ದಾರೆ.
ಇದರ ಜತೆ ವಿಶಾಲ್ ತಮ್ಮ ಸಿನಿಮಾ ಜರ್ನಿಯ ಅನೇಕ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ʼʼಸಿನಿಮಾ ಅವಕಾಶಕ್ಕಾಗಿ ಸಾಕಷ್ಟು ಕಾದಿದ್ದೇನೆ. ಬಳಿಕ ಅರ್ಜುನ್ ಸರ್ಜಾ ಸಿನಿಮಾದಲ್ಲಿ ಸಹಾಯಕನಾಗಿ ನನಗೆ ಕೆಲಸ ಸಿಕ್ಕಿತ್ತು. ಹೀಗಾಗಿ ಒಪ್ಪಿಕೊಂಡೆ. ಆಗ ನನಗೆ ಕೇವಲ 100 ರೂಪಾಯಿ ಸಂಭಾವನೆ ಸಿಕ್ಕಿತ್ತುʼʼ ಎಂದು ಬಹಿರಂಗ ಪಡಿಸಿದ್ದಾರೆ.