Kannada Serial Actress: ವಂಚನೆ ಪ್ರಕರಣ ; ಕಿರುತೆರೆ ನಟಿ ವನಿತಾ ಬಂಧನ
Kannada Serial Actress: ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ನಟಿ ವನಿತಾ -
ಸಾಮಾಜಿಕ ಜಾಲತಾಣಗಳ (Social Media) ಮೂಲಕ ಶ್ರೀಮಂತರನ್ನು ಪರಿಚಯ ಮಾಡಿಕೊಂಡು, ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿಬಂಧಿತ ನಟಿ ವನಿತಾಳ ವಂಚನೆಯ ಜಾಲ ಅತ್ಯಂತ ಚಾಣಾಕ್ಷತನದಿಂದ ಕೂಡಿರುತ್ತಿತ್ತು. ಮೊದಲಿಗೆ ತಾನು ಸೀರಿಯಲ್ ನಟಿ (Serial Actress) ಎಂದು ಶ್ರೀಮಂತರಿಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಈಕೆ, ಬಳಿಕ ನಿರಂತರವಾಗಿ ಮಾತನಾಡಿ ನಯವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ರೀಲ್ಸ್ ಮಾಡಿಕೊಂಡು ಶ್ರೀಮಂತರನ್ನೇ ಹುಡುಕಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದ ವನಿತಾ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು, ಸೋಷಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಹಣವಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು (Actress Vanitha) ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ.
ಇದನ್ನೂ ಓದಿ: sanjay leela bhansali: Love & War ಸೆಟ್‌ನಲ್ಲಿ ದುರಂತ; ಕಾರ್ಮಿಕ ಸಾವು
ಪರಿಚಯಸ್ಥರ ಬಳಿ ತಾನು ತೀವ್ರ ಕಷ್ಟದಲ್ಲಿದ್ದೇನೆ ಎಂದು ನಂಬಿಸುತ್ತಿದ್ದ ನಟಿ ವನಿತಾ, ‘ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ನೀಡುತ್ತೇನೆ’ ಎಂದು ನಂಬಿಸಿ ಹಣ ಪಡೆಯುತ್ತಿದ್ದಳು. ಅತ್ಯಂತ ಚಾಲಾಕಿಯಾಗಿದ್ದ ಈಕೆ, ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಂಡು ನಗದು ಪಡೆದು ಪರಾರಿಯಾಗುತ್ತಿದ್ದಳು.
ಸದ್ಯ, ನಟಿ ವನಿತಾಳನ್ನು ನಂಬಿ ಒಂದು ಲಕ್ಷ ರೂಪಾಯಿ ಕಳೆದುಕೊಂಡ ಯುವಕನೊಬ್ಬ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದೇ ರೀತಿ, ಗೋವಿಂದ ರಾಜನಗರ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲಿಯೂ ವನಿತಾ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಎಲ್ಲಾ ದೂರುಗಳನ್ನು ಆಧರಿಸಿ, ಸೋಷಿಯಲ್ ಮೀಡಿಯಾ ಮೂಲಕ ಹಣವಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: maa inti bangaram: ಅದ್ಭುತ ಕಲೆಕ್ಷನ್ ಮಾಡ್ತಿದೆ ಸಮಂತಾ ಮೂವಿ! ಭಾನುವಾರ ಗಳಿಸಿದ್ದೆಷ್ಟು?
ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಈಕೆಯ ವಿರುದ್ಧ ಈ ಹಿಂದೆ ದೂರುಗಳು ದಾಖಲಾಗಿದ್ದವು.