ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kataka 2: ಮತ್ತೊಂದು ಸಾಹಸಕ್ಕೆ ಕೈ ಹಾಕಿದ ರವಿ ಬಸ್ರೂರು; 'ಕಟಕ 2' ಚಿತ್ರದ ತಂದೆ-ಮಗಳ ಎಮೋಷನಲ್ ಹಾಡು ರಿಲೀಸ್‌

ರವಿ ಬಸ್ರೂರು ನಿರ್ದೇಶಿಸಿದ ಮೊದಲ ಹಾರರ್ ಸಿನಿಮಾ ʼಕಟಕʼ. 2017ರಲ್ಲಿ ಈ ಚಿತ್ರ ತೆರೆ ಕಂಡಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ʼಕಟಕʼ ಸಿನಿಮಾದ ಮುಂದುವರಿದ ಭಾಗ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರವಿ ಬಸ್ರೂರು ತಂಡ ʼಕಟಕ 2ʼ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದೆ. ಇದೊಂದು ತಂದೆ ಮಗಳ ಎಮೋಷನಲ್ ಸಾಂಗ್ ಆಗಿದ್ದು, ಗಾಯಕಿ ಐರಾ ಉಡುಪಿ ಹಾಡಿದ್ದಾರೆ.

ʼಕಟಕ 2ʼ ಚಿತ್ರದ ಹೊಸ ಹಾಡು ಬಿಡುಗಡೆ

Kataka Part 2

Profile Pushpa Kumari Aug 12, 2025 6:36 PM

ಬೆಂಗಳೂರು: ರವಿ ಬಸ್ರೂರು (Ravi Basrur) ನಿರ್ದೇಶಿಸಿದ ಮೊದಲ ಹಾರರ್ ಸಿನಿಮಾ ಕಟಕ (Kataka). 2017ರಲ್ಲಿ ಈ ಚಿತ್ರ ತೆರೆ ಕಂಡಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ʼಕಟಕʼ ಸಿನಿಮಾದ ಮುಂದುವರಿದ ಭಾಗ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರವಿ ಬಸ್ರೂರು ತಂಡ ಕಟಕ 2 ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದೆ. ಇದೊಂದು ತಂದೆ ಮಗಳ ಎಮೋಷನಲ್ ಸಾಂಗ್ ಆಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಐರಾ ಉಡುಪಿ ಹಾಡಿದ್ದಾರೆ.‌ ಈ ಹಾಡಿಗೆ ಶಿವಕುಮಾರ್ ಜಯರಾಂ ಸಂಯೋಜನೆ ಮಾಡಿದ್ದಾರೆ.

ಇದನ್ನು ಓದಿ:Coolie Movie: ರಜನಿಕಾಂತ್‌ ಅಭಿನಯದ ʼಕೂಲಿʼ ಚಿತ್ರ ನೋಡಲು ಸುಳ್ಳು ಸಿಕ್‌ ಲೀವ್‌ ಹಾಕಬೇಕಿಲ್ಲ; ಕಂಪೆನಿಯೇ ರಜೆ ಜತೆ ಟಿಕೆಟ್ ಕೂಡ ನೀಡುತ್ತಿದೆ!

ಇನ್ನು ಕರಾವಳಿ ಭಾಗದಲ್ಲಿ ನಡೆದಿದ್ದ ನೈಜ ಕಥೆಯನ್ನ ʼಕಟಕʼ ಸಿನಿಮಾ ಹೊಂದಿದೆ. ಮೊದಲ ಭಾಗದಲ್ಲಿ ತಂದೆಯು ಮಗಳನ್ನ ದುಷ್ಟ ಶಕ್ತಿಯಿಂದ ಹೇಗೆ ಉಳಿಸಿಕೊಳ್ಳುತ್ತಾನೆ, ಮಗಳಿಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾರೆ ಎಂಬುದನ್ನ ತೋರಿಸಲಾಗಿದೆ. ಇನ್ನು ʼಕಟಕ 2ʼ ಸಿನಿಮಾದಲ್ಲಿ ಹೋಗಿದ್ದ ಆತ್ಮ ಮತ್ತೆ ಬಾಲಕಿ ಮೇಲೆ ಬರೋದು ಯಾಕೆ? ಅನ್ನೋದನ್ನೇ ಥ್ರಿಲ್ಲಿಂಗ್ ಆಗಿ ಹೇಳಲಾಗಿದೆ. ವಿಶೇಷ ಅಂದ್ರೆ ಕಟಕ ಸಿನಿಮಾ 2017ರಲ್ಲಿ ತೆರೆಕಂಡಿದ್ದು, ಇಂಗ್ಲಿಷ್ ಭಾಷೆಗೆ ಡಬ್ ಆಗಿತ್ತು. 15 ಭಾಷೆಗಳಲ್ಲಿ ʼಕಟಕʼ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು.

ಅಶೋಕ್ ರಾಜ್, ಸ್ಪಂದನಾ ಪ್ರಸಾದ್, ಉಗ್ರ ಮಂಜು, ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ʼಕಟಕʼ ಮೊದಲ ಭಾಗದಲ್ಲಿ ಸಿಂಪಲ್ ಆಗಿ ಒಂದು ಹಳ್ಳಿಯಲ್ಲಿ ನಡೆಯುವ ಕಥೆಯಲ್ಲಿ ಹಾರರ್ ಹಾಗೂ ಸಸ್ಪೆನ್ಸ್ ಅಂಶಗಳೇ ಹೈಲೈಟ್ ಆಗಿದ್ದವು. ಇದೀಗ ʼಕಟಕ 2ʼ ಚಿತ್ರದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ.