Koragajja Movie: 'ಕಾಂತಾರ ಚಾಪ್ಟರ್ 1' ಚಿತ್ರದ ಬಳಿಕ 'ಕೊರಗಜ್ಜ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆ!
Koragajja Movie to be released: ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ 'ಕೊರಗಜ್ಜ' ಸಿನಿಮಾ ತೆರೆಮೇಲೆ ಸದ್ಯ ದಲ್ಲೇ ಬರಲಿದೆ.ಈಗಾಗಲೇ ಕೊರಗಜ್ಜನ ಆರಾಧಕರು ಬಹಳಷ್ಟು ಮಂದಿ ಇದ್ದು ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಬಹುನಿರೀಕ್ಷಿತ ಸಿನಿಮಾವನ್ನು ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಲಿದ್ದಾರೆ. 'ಕೊರಗಜ್ಜ' ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ಮೋಷನ್ ಪೋಸ್ಟರ್ ಇತ್ತೀಚೆಗೆ ರಿಲೀಸ್ ಮಾಡಲಾಗಿದೆ.

ಕೊರಗಜ್ಜ ಸಿನಿಮಾ -

ಬೆಂಗಳೂರು: ಕಾಂತಾರ ಚಾಪ್ಟರ್ 1' (Kantara Chapter 1) ವಿಶ್ವದಾದ್ಯಂತ ಉತ್ತಮ ಕಲೆಕ್ಷನ್ ಮಾಡುತ್ತಿದೆ. ನಮ್ಮ ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಸಿನಿಮಾಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕರಾವಳಿಯ ಭಾಗದ ದೈವಗಳ ಕಥೆಯನ್ನು ರಿಷಬ್ ಶೆಟ್ಟಿ (Rishab Shetty) ನೀಡಿದ್ದಾರೆ. ಈ ಬಾರಿ ಕದಂಬರ ಕಾಲದ ಕಥೆಯನ್ನು ಚಿತ್ರದಲ್ಲಿ ತಿಳಿದಿದ್ದು ಶಿವ, ಗುಳಿಗ, ಚಾವುಂಡಿ ಹೀಗೆ ನಾನಾ ದೈವಗಳ ವಿಚಾರ ಗಳನ್ನು ಹೇಳಿದ್ದಾರೆ. ಇದೀಗ ಕಾಂತಾರ ಸಿನಿಮಾದಿಂದಾಗಿ ದೇಶ ದೆಲ್ಲೆಡೆ ತುಳುನಾಡಿನ ದೈವ ಶಕ್ತಿಯ ಭಕ್ತಿ ಅರಿವು ಮೂಡಿದೆ. ಈ ನಡುವೆಯೇ ತುಳುನಾಡಿನ ದೈವದ ಮಹಿಮೆಯನ್ನು ತಿಳಿಸಲು ಮತ್ತೊಂದು ಸಿನಿಮಾ ಮುಂದಾಗಿದೆ.
ಸುಧೀರ್ ಅತ್ತಾವರ್ ನಿರ್ದೇಶನ ಮಾಡಿರುವ 'ಕೊರಗಜ್ಜ' ಸಿನಿಮಾ ತೆರೆಮೇಲೆ ಸದ್ಯದಲ್ಲೇ ಬರಲಿದೆ. ಈಗಾಗಲೇ ಕೊರಗಜ್ಜನ ಆರಾಧಕರು ಬಹಳಷ್ಟು ಮಂದಿ ಇದ್ದು ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಬಹುನಿರೀಕ್ಷಿತ ಸಿನಿಮಾವನ್ನು ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಲಿದ್ದಾರೆ. 'ಕೊರಗಜ್ಜ' ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ಮೋಷನ್ ಪೋಸ್ಟರ್ ಇತ್ತೀಚೆಗೆ ರಿಲೀಸ್ ಮಾಡಲಾಗಿದೆ.
ಇದನ್ನು ಓದಿ: Rona Movie: 'ರೋಣ' ಚಿತ್ರದ 'ಅಬ್ಬಬ್ಬಾ ನಮ್ಮ ಊರ ಜಾತ್ರೆ ಬಂತು' ಹಾಡು ಬಿಡುಗಡೆ!
ಒಟ್ಟು ಆರು ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ದ ಗಾಯಕ ಗಾಯಕಿಯರು ಈ ಸಿನಿಮಾದಲ್ಲಿ ಹಾಡನ್ನು ಹಾಡಿದ್ದಾರೆ. ಸುಮಾರು 24 ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.
ಕೊರಗಜ್ಜ’ ಚಿತ್ರದಲ್ಲು ಶ್ರುತಿ, ಭವ್ಯ, ಕಬೀರ್ ಬೇಡಿ ಮುಂತಾದ ಖ್ಯಾತ ಕಲಾವಿದರು ಅಭಿನಯಿಸಿ ದ್ದಾರೆ. ನವೆಂಬರ್ ವೇಳೆಗೆ 6 ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಕೂಡ ಸಜ್ಜಾಗುತ್ತಿದೆ. ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈ ಸಿನಿಮಾ ಕೂಡ ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಆಗುತ್ತಾ ಎನ್ನುವುದನ್ನು ಕಾದು ನೋಡಬೇಕು.