ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಸೀಸನ್‌ 2ರ ಖ್ಯಾತಿಯ ಪದ್ದು ಗೌಡ ನಿಧನ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಸೀಸನ್‌ 2ರ ಖ್ಯಾತಿಯ ಪದ್ಮನಾಭ ಕೆ.ಎಂ (ಪದ್ದು ಗೌಡ) ಅವರು ಬ್ರೈನ್ ಟ್ಯೂಮರ್‌ನಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಕಳೆದ ಹಲವು ಸಮಯದಿಂದ ಅವರು ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬ್ರೈನ್‌ ಟ್ಯೂಮರ್‌ನಿಂದ  ಪದ್ದು ಗೌಡ ನಿಧನ

ಸಂಗ್ರಹ ಚಿತ್ರ -

ಬೆಂಗಳೂರು: ಮಾಡೆಲ್, ನಿರೂಪಕ, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ (Paate Mandi Kaadig Bandru Season 2) ಸರಣಿ 2ರ ಖ್ಯಾತಿಯ ಪದ್ಮನಾಭ ಕೆ.ಎಂ. (ಪದ್ದು ಗೌಡ) (Paddu Gowda passes away) ಅವರು ಬೆಂಗಳೂರಿನ (bengaluru) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. ಇದಕ್ಕಾಗಿ ಯಲಹಂಕದ (yelahanka) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ಪದ್ಮನಾಭ ಗೌಡ ಅವರು ಪತ್ನಿ ಅಶ್ವಿನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಪದ್ದು ಗೌಡ ಅವರು ಬ್ರೈನ್‌ ಟ್ಯೂಮರ್‌ ಕಾಯಿಲೆಯಿಂದ ಯಲಹಂಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

666 Operation Dream Theatre: ʻನಾನಿಲ್ಲಿ ಡಿಸೆಂಟ್‌ ಬಾಂಡ್‌ʼ ಎಂದ ಶಿವಣ್ಣ,‌ ʻಏಜೆಂಟ್‌ ಶಂಕರ್‌ʼ ಆಗಿ ಬಂದ ʻಡಾಲಿʼ ಧನಂಜಯ್‌!

ಕನ್ನಡ ಕಿರುತೆರೆ ವಾಹಿನಿಯಲ್ಲಿ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದ ಪದ್ದು ಗೌಡ ಅವರಿಗೆ ಬ್ರೈನ್‌ ಟ್ಯೂಮರ್‌ ಇರುವುದು ಕೆಲವು ತಿಂಗಳುಗಳ ಹಿಂದೆ ತಿಳಿದು ಬಂದಿತ್ತು. ಪ್ರಾಥಮಿಕ ಹಂತದಲ್ಲಿದ್ದ ಬ್ರೈನ್ ಟ್ಯೂಮರ್ ಪತ್ತೆಯಾದಾಗ ಪದ್ದುಗೌಡ ಅವರು ಧೈರ್ಯವಾಗಿ ಚಿಕಿತ್ಸೆ ಪಡೆದರೂ ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿತ್ತು.

ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಎಂದೇ ಗುರುತಿಸಲ್ಪಟ್ಟಿದ್ದ ಪದ್ದು ಗೌಡ ಅವರು ತಮ್ಮ ಮುಗ್ಧತೆ ಹಾಗೂ ಸ್ಪರ್ಧಾತ್ಮಕ ಗುಣದಿಂದಲೇ ಎಲ್ಲರ ಮನ ಸೆಳೆದಿದ್ದರು. ಕಿರುತೆರೆ, ಸಿನಿಮಾ ರಂಗದ ಹಲವು ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ತಮ್ಮ ಸ್ನೇಹ ಜೀವಿ ಎಂದೇ ಗುರುತಿಸಲ್ಪಟ್ಟಿದ್ದರು.

ಸದ್ದಿಲ್ಲದೇ ‘ಕಲ್ಯಾಣಿ’ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ ‘ಜಟ್ಟ’ ಗಿರಿರಾಜ್‌; ಇದು ಎರಡು ಸಂಸ್ಕೃತಿಗಳ ಮುಖಾಮುಖಿ

'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಒಂದು ಸಾಹಸ ಆಧಾರಿತ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿದ್ದು, ಇದರಲ್ಲಿ ನಗರದ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಹುಡುಗ- ಹುಡುಗಿಯರನ್ನು ಕಾಡಿಗೆ ಕರೆದೊಯ್ದು ಅಲ್ಲಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಬದುಕುಳಿಯುವ ಸವಾಲನ್ನು ನೀಡಲಾಗುತ್ತಿತ್ತು. ಇದರ ಎರಡನೇ ಸರಣಿಯಲ್ಲಿ ಪದ್ದುಗೌಡ ಭಾಗವಹಿಸಿ ಕನ್ನಡಿಗರ ಮನೆಮಾತಾಗಿದ್ದರು.