Rakshith Shetty Birthday: ರಕ್ಷಿತ್ ಕಡೆಯಿಂದ ಬಿಗ್ ಅಪ್‌ಡೇಟ್ ಕೊಟ್ಟ ರಿಷಬ್! ಪೋಸ್ಟ್‌ನಲ್ಲಿ ಏನಿದೆ?
Rakshith Shetty Birthday: ರಕ್ಷಿತ್ ಶೆಟ್ಟಿ ಇಂದು (ಜೂನ್.6) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಹಾಗೂ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮಾಡಿರುವ ವಿಶಿಷ್ಟ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ನೇಹಿತ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.
ರಕ್ಷಿತ್ ಶೆಟ್ಟಿ -
ಸ್ಯಾಂಡಲ್‌ವುಡ್‌ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ (rakshith shetty ) ಇಂದು (ಜೂನ್.6) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಹಾಗೂ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಮಾಡಿರುವ ವಿಶಿಷ್ಟ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಸ್ನೇಹಿತ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ಕುತೂಹಲವನ್ನು ಸೃಷ್ಟಿಸಿದೆ.
‘ಕಿರಿಕ್ ಪಾರ್ಟಿ’ ಚಿತ್ರದ ಚಿತ್ರೀಕರಣದ ವೇಳೆ ಸೆರೆಹಿಡಿದ ಹಳೆಯ ಫೋಟೋವನ್ನು ಹಂಚಿಕೊಂಡಿರುವ ರಿಷಬ್, 'ಬಂದು ಹೋಗುವ ಜನರ ಮಧ್ಯೆ ಈ ಗೆಳೆಯ ಶಾಶ್ವತ ಅಧ್ಯಾಯವಾಗಿದ್ದಾನೆ.
ಹ್ಯಾಪಿ ಬರ್ತ್‌ಡೇ ಮಗ ರಕ್ಷಿತ್ ಶೆಟ್ಟಿ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಸಾಲುಗಳು ಇಬ್ಬರ ನಡುವಿನ ಗಾಢ ಸ್ನೇಹವನ್ನು ಮತ್ತೊಮ್ಮೆ ಅಭಿಮಾನಿಗಳ ಮುಂದೆ ಅನಾವರಣಗೊಳಿಸಿವೆ.
ಇದನ್ನೂ ಓದಿ: Amruthadhare Serial: ಮಗಳು ಮಿಂಚುನ ಕಾಪಾಡೋಕೆ ಭದ್ರಕಾಳಿಯಾದ್ಲು ಭೂಮಿಕಾ! ಅನಿರೀಕ್ಷಿತ ತಿರುವಿನಲ್ಲಿ ಅಮೃತಧಾರೆ
'ಮೊನ್ನೆ ತಾನೇ ಭೇಟಿ ಮಾಡಿ ಬಂದೆ. ಅವನು ಸದ್ಯದಲ್ಲೇ ಮರಳಿ ಬರಲಿದ್ದಾನೆ' ಎಂದು ಕಾಮೆಂಟ್ ಮಾಡಿರುವ ರಿಷಬ್, ರಕ್ಷಿತ್ ಅವರ ಮುಂದಿನ ಸಿನಿಮಾ ಅಪ್‌ಡೇಟ್ ಶೀಘ್ರದಲ್ಲೇ ಬರಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ರಕ್ಷಿತ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಪ್ರಗತಿ ಶೆಟ್ಟಿ ಭಾವನಾತ್ಮಕ ಪೋಸ್ಟ್
“ಕೆಲವು ಬಂಧಗಳು ಪದಗಳಿಗೆ ಮೀರಿದ ಸಂಬಂಧಗಳಾಗಿರುತ್ತವೆ , ಮತ್ತು ನೀವು ಯಾವಾಗಲೂ ಆ ವ್ಯಕ್ತಿಯಾಗಿದ್ದೀರಿ. ಸಹೋದರ, ರಕ್ಷಕ ಮತ್ತು ನಿಜವಾದ ಸ್ಫೂರ್ತಿ ನೀವು. ನಿಮ್ಮ ಉತ್ಸಾಹ, ಸೃಜನಶೀಲತೆ ಮತ್ತು ಸಮರ್ಪಣೆ ಯಾವಾಗಲೂ ನಿಮ್ಮನ್ನು ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲಿಸಿದೆ. ಯಶಸ್ಸು ಮತ್ತು ಸಾಧನೆಗಳನ್ನು ಮೀರಿ, ನಿಮ್ಮ ನಮ್ರತೆ, ಶಕ್ತಿ ಮತ್ತು ದಯೆ ನಿಮ್ಮನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ.
ಇದನ್ನೂ ಓದಿ: Athiradi OTT Release: ಕಾಲೇಜು ದಿನಗಳನ್ನು ನೆನಪಿಸುವ ಕಥೆ; ಈ ಮಲಯಾಳಂ ಮೂವಿ ಸ್ಟ್ರೀಮಿಂಗ್ ಎಲ್ಲಿ?
ಈ ವರ್ಷ ನಿಮಗೆ ಹೆಚ್ಚಿನ ಯಶಸ್ಸು, ಸುಂದರ ನೆನಪುಗಳು ಮತ್ತು ನಗಲು ಅಂತ್ಯವಿಲ್ಲದ ಕಾರಣಗಳನ್ನು ತರಲಿ. Happy Birthday Chintu Anna @rakshitshetty ಈ ಹೊಸ ವರ್ಷ ನಿಮಗಷ್ಟೇ ಅಲ್ಲ, ನಿಮ್ಮ ಎಲ್ಲಾ ಕನಸುಗಳಿಗೂ ದೊಡ್ಡ ಯಶಸ್ಸು ತರಲಿ. ಹುಟ್ಟುಹಬ್ಬದ ಶುಭಾಶಯಗಳು ಚಿಂಟು ಅಣ್ಣ” ಎಂದು ಪ್ರಗತಿ ಶೆಟ್ಟಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.