ಬಿಗ್ ಬಾಸ್‌ನಿಂದ ಎರಡ್ಮೂರು ಸಲ ಆಫರ್ ಬಂದರೂ ʻರಾಮಾಚಾರಿʼ ನಟ ರಿತ್ವಿಕ್ ಹೋಗದಿರಲು ಕಾರಣವೇನು?
'ರಾಮಾಚಾರಿ' ಖ್ಯಾತಿಯ ನಟ ರಿತ್ವಿಕ್ ಕೃಪಾಕರ್ ಅವರು ಬಿಗ್ ಬಾಸ್ ಕನ್ನಡದಿಂದ ಬಂದ ಆಫರ್‌ಗಳನ್ನು ತಿರಸ್ಕರಿಸಿದ್ದ ಬಗ್ಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎರಡ್ಮೂರು ಸೀಸನ್‌ನಿಂದಲೂ ತಮಗೆ ಆಹ್ವಾನವಿತ್ತು, ಆದರೆ 'ರಾಮಾಚಾರಿ' ಧಾರಾವಾಹಿಗಾಗಿ ತಾವು ಹೋಗಲಿಲ್ಲ ಎಂದು ತಿಳಿಸಿದ್ದಾರೆ.
-
ʻರಾಮಾಚಾರಿʼ ಸೀರಿಯಲ್ ಮೂಲಕ ದೊಡ್ಡಮಟ್ಟದಲ್ಲಿ ಹೆಸರು ಸಂಪಾದಿಸಿರುವ ನಟ ರಿತ್ವಿಕ್ ಕೃಪಾಕರ್. ಸದ್ಯ ರಾಮಾಚಾರಿ ಸೀರಿಯಲ್ ಮುಕ್ತಾಯವಾಗಿದ್ದು, ಅವರೀಗ ಹೊಸ ಹೊಸ ಪ್ರಾಜೆಕ್ಟ್‌ಗಳತ್ತ ಮುಖ ಮಾಡಿದ್ದಾರೆ. ಶೀಘ್ರದಲ್ಲೇ ಅವರ ಹೊಸ ಧಾರಾವಾಹಿಯೊಂದು ಲಾಂಚ್ ಆಗಲಿದೆ. ಜೊತೆಗೆ ಸ್ಯಾಂಡಲ್‌ವುಡ್‌ಗೆ ಕಾಲಿಡುವುದಕ್ಕೂ ರೆಡಿಯಾಗಿದ್ದಾರೆ. ವಿಶ್ವವಾಣಿ ಟಿವಿ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ರಿತ್ವಿಕ್, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಬಗ್ಗೆಯೂ ಮಾತನಾಡಿದ್ದಾರೆ.
ಅಭಿಮಾನಿಗಳಿಗೆ ಬೇಜಾರು ಆಗ್ತಿತ್ತು
"ನನಗೆ ಸೀಸನ್ 10-11ರಲ್ಲಿಯೂ ಕರೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧನುಷ್ ಜೊತೆಗೆ ನಾನು ಹೋಗಬೇಕಿತ್ತು. ನನ್ನ ವೈಯಕ್ತಿಕ ಕಾರಣಗಳಿಂದ ಹೋಗೋಕೆ ಆಗಲಿಲ್ಲ. ಅಲ್ಲದೆ, ನಮ್ಮ ರಾಮಾಚಾರಿ ಧಾರಾವಾಹಿ ಕೂಡ ರನ್ನಿಂಗ್ ಇತ್ತು. ನಾನು ಬಿಗ್ ಬಾಸ್‌ಗೆ ಹೋಗಬೇಕೆಂದರೆ, ರಾಮಾಚಾರಿ ಸೀರಿಯಲ್‌ನ ನಿಲ್ಲಿಸಬೇಕಿತ್ತು. ಇದರಿಂದ ನಮ್ಮ ಸೀರಿಯಲ್ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುತ್ತಾರೆ. ಹಾಗಾಗಿ, ಇದೆಲ್ಲ ಇದ್ದಿದ್ದರಿಂದ ನಾನು ಬಿಗ್ ಬಾಸ್‌ಗೆ ಹೋಗೋಕೆ ಆಗಲಿಲ್ಲ" ಎಂದು ರಿತ್ವಿಕ್ ಕೃಪಾಕರ್ ಹೇಳಿದ್ದಾರೆ.
ʻಹುಚ್ಚʼ ಸಿನಿಮಾ ಹೀರೋ ಥರ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾದ ʻರಾಮಾಚಾರಿʼ ನಟ ರಿತ್ವಿಕ್ ಕೃಪಾಕರ್
ಭವಿಷ್ಯದಲ್ಲಿ ನೋಡೋಣ
"ಬಹುಶಃ ಮುಂದೆ ಯಾವಾಗ ಅವರು ನನಗೆ ಕರೆಯುತ್ತಾರೋ ನೋಡೋಣ. ಅಲ್ಲದೆ, ನನಗೆ ವೈಯಕ್ತಿಕವಾಗಿ ಇದು ತುಂಬಾ ಬೇಗ ಅನ್ನಿಸುತ್ತಿದೆ. ನಾನು ಐದಾರು ಪ್ರಾಜೆಕ್ಟ್ ಮಾಡಿದಮೇಲೆ ನಾನು ಆ ಶೋಗೆ ಹೋಗೋದಕ್ಕೆ ಯೋಚನೆ ಮಾಡಬಹುದೇನೋ? ಗೊತ್ತಿಲ್ಲ. ಇನ್ನೂ, ಒಂದು ಸೀರಿಯಲ್ ಮಾಡಿರುವ ನಾನು ಬಿಗ್ ಬಾಸ್‌ನಂತಹ ದೊಡ್ಡ ವೇದಿಕೆ ನಾನು ಹೋಗಬೇಕು, ಅಲ್ಲಿಗೆ ನಾನು ಅರ್ಹ ಅಂತ ನನಗೆ ಅನ್ನಿಸೋದಿಲ್ಲ. ಮುಂದೆ ಯಾವಾಗಾದರೂ ಅವರು ಕರೆಮಾಡಿದರೆ, ನಾನು ಯೋಚಿಸಬಹುದು" ಎಂದು ರಿತ್ವಿಕ್ ಕೃಪಾಕರ್ ತಿಳಿಸಿದ್ದಾರೆ.
ರಿತ್ವಿಕ್ ಕೃಪಾಕರ್ ಸಂದರ್ಶನ
ಗಿಲ್ಲಿ ನಟನ ಬಗ್ಗೆ ರಾಮಾಚಾರಿ ಹೇಳಿದ್ದೇನು?
"ಗಿಲ್ಲಿ ನಟ ಆರಂಭದಿಂದಲೂ ತುಂಬಾ ಚೆನ್ನಾಗಿ ಆಡಿಕೊಂಡು ಬಂದರು. ಅವರೊಬ್ಬ ಉತ್ತಮ ಸ್ಪರ್ಧಿ. ತಮಾಷೆ ಅನ್ನೋದು ಅವರ ದೇಹದಲ್ಲೇ ಹೊಕ್ಕಿಬಿಟ್ಟಿದೆ. ಅವರು ನೀಡುತ್ತಿದ್ದ ಮನರಂಜನೆ ಎಲ್ಲರಿಗೂ ಇಷ್ಟವಾಯ್ತು. ಗಿಲ್ಲಿ ನಟ ಜೊತೆಗೆ ಇತರೆ ಸ್ಪರ್ಧಿಗಳು ಕೂಡ ತುಂಬಾ ಚೆನ್ನಾಗಿ ಆಡಿದ್ದಾರೆ. ನಮ್ಮ ಧನುಷ್ ಕೂಡ ಟಾಸ್ಕ್ ಮಾಸ್ಟರ್ ಅಂತ ಹೆಸರು ಪಡೆದರು. ಗಿಲ್ಲಿ ನಟ ಗೆದ್ದಿರೋದು ನನಗೆ ಖುಷಿ ನೀಡಿದೆ. ಕಲಾವಿದರಿಗೆ ಅಷ್ಟೊಂದು ದೊಡ್ಡಮಟ್ಟದ ಜನಪ್ರಿಯತೆ ಸಿಗುವುದು ನಿಜಕ್ಕೂ ಒಳ್ಳೆಯ ವಿಚಾರ" ಎಂದು ರಿತ್ವಿಕ್ ಕೃಪಾಕರ್ ಹೇಳಿದ್ದಾರೆ.