ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆʼ ಎಂದ ರಣಬೀರ್;‌ ʻರಾವಣʼ ಯಶ್‌ ಬಗ್ಗೆ ಕಪೂರ್‌ ಕುಡಿ ಹೇಳಿದ್ದೇನು?

ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಟ ರಣಬೀರ್ ಕಪೂರ್ ಅವರು ತಮ್ಮ ಸಹನಟರಾದ ಸಾಯಿ ಪಲ್ಲವಿ ಮತ್ತು ಯಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ ಎಂದು ಬಣ್ಣಿಸಿದ ಅವರು, ರಾವಣನ ಪಾತ್ರಕ್ಕೆ ಬೇಕಾದ ಪ್ರಭಾವಶಾಲಿ ವ್ಯಕ್ತಿತ್ವ ಯಶ್ ಅವರಲ್ಲಿದೆ ಎಂದು ಹೊಗಳಿದ್ದಾರೆ.

Ramayana: ಸಾಯಿ ಪಲ್ಲವಿ - ಯಶ್‌ರನ್ನು ಮನಸಾರೆ ಹೊಗಳಿದ ನಟ ರಣಬೀರ್ ಕಪೂರ್

-

Avinash GR
Avinash GR Apr 3, 2026 2:58 PM

ರಣಬೀರ್ ಕಪೂರ್ ನಟನೆಯ 'ರಾಮಾಯಣ ಭಾಗ 1' ಸಿನಿಮಾದ ಟೀಸರ್‌ ಈಚೆಗೆ ರಿಲೀಸ್‌ ಆಗಿತ್ತು. ನಟ ರಣಬೀರ್‌ ಕಪೂರ್‌ ರಾಮನಾಗಿ ಕಂಗೊಳಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿರುವ ಈ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಈಚೆಗೆ ಈ ಚಿತ್ರದ ಟೀಸರ್‌ ರಿಲೀಸ್‌ ಕಾರ್ಯಕ್ರಮವನ್ನು ಲಾಸ್ ಏಂಜಲೀಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಗೆ ನಟ ರಣಬೀರ್ ಕಪೂರ್, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೋಗಿದ್ದರು. ಈ ವೇಳೆ ನಟ ರಣಬೀರ್‌ ಕಪೂರ್‌ ಅವರು ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿದ್ದರ ಬಗ್ಗೆ ತಿಳಿಸಿದ್ದಾರೆ.

ಸಾಯಿ ಪಲ್ಲವಿ ಅದ್ಭುತ ನಟಿ

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅವರನ್ನು ಮನಸಾರೆ ಹೊಗಳಿರುವ ನಟ ರಣಬೀರ್‌ ಕಪೂರ್‌, "ಸಾಯಿ ಪಲ್ಲವಿ ಅವರು ಅದ್ಭುತ ನಟಿ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ. ಮೊದಲ ದಿನ ನಾನು ಅವರನ್ನು 'ಸೀತೆ'ಯ ಲುಕ್‌ನಲ್ಲಿ ನೋಡಿದಾಗ ನನಗೆ ಖುಷಿ ಆಯಿತು. ಆ ಕ್ಷಣವೇ ನಾನು ನಿರ್ದೇಶಕ ನಿತೇಶ್ ಸರ್ ಕಡೆ ನೋಡಿದೆ. ಅವರು ನನ್ನನ್ನೇ ನೋಡುತ್ತಿದ್ದರು. ಸಾಯಿ ಪಲ್ಲವಿಗಿಂತ ಉತ್ತಮವಾಗಿ ಈ ಪಾತ್ರಕ್ಕೆ ಮತ್ಯಾರನ್ನೂ ಆಯ್ಕೆ ಮಾಡಲು ಸಾಧ್ಯವಿರಲಿಲ್ಲ ಎಂಬುದು ನಮ್ಮಿಬ್ಬರಿಗೂ ಆಗಲೇ ಮನವರಿಕೆ ಯಿತು" ಎಂದು ಹೇಳಿದ್ದಾರೆ.

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

ರಾಕಿ ಭಾಯ್‌ಗೆ ರಣಬೀರ್‌ ಮೆಚ್ಚುಗೆ

"ಈ ಸಿನಿಮಾದಲ್ಲಿ ರಾವಣ ಪಾತ್ರ ಮಾಡಿರುವ ಯಶ್ ಬಗ್ಗೆ ಹೇಳಬೇಕೆಂದರೆ, ಅವರಿಗೆ ದೊಡ್ಡ ಸ್ಟಾರ್‌ಡಮ್ ಇದೆ. ರಾವಣನ ಪಾತ್ರವನ್ನು ನಿರ್ವಹಿಸಲು ಅಂತಹ ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಪರದೆಯ ಮೇಲೆ ಮಿಂಚುವ ಗುಣವಿರುವ ನಟನ ಅಗತ್ಯವಿತ್ತು. ಅದು ಯಶ್‌ ಅವರಿಂದ ಸಾಧ್ಯವಾಗಿದೆ" ಎಂದು ರಣಬೀರ್‌ ಕಪೂರ್‌ ಅವರಿಂದ ಸಾಧ್ಯವಾಗಿದೆ.

Ramayana Rama glimpse : ‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು? ವಿಡಿಯೋ ವೈರಲ್‌

ರಾಮಾಯಣ ಟೀಸರ್‌ ಹೇಗಿತ್ತು?

ಏಪ್ರಿಲ್‌ 2ರಂದು ಹನುಮ ಜಯಂತಿಯಂದು ರಿಲೀಸ್‌ ಆಗಿರುವ 2 ನಿಮಿಷ 38 ಸೆಕೆಂಡ್‌ಗಳ ರಾಮಾಯಣ ಟೀಸರ್‌ನಲ್ಲಿ ರಣಬೀರ್ ಕಪೂರ್ ಅವರು ಪ್ರಭು ಶ್ರೀರಾಮನ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್ಷಸ ಸಂಹಾರದಿಂದ ಹಿಡಿದು ವನವಾಸದವರೆಗೆ, ಶ್ರೀರಾಮನ ಗಾಂಭೀರ್ಯ ಮತ್ತು ರಾಜವೈಭೋಗವನ್ನು ತೋರಿಸಲಾಗಿದೆ.

`ರಾಮಾಯಣ' ಚಿತ್ರವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲಾಗುತ್ತಿದ್ದು, ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆಯಂತೆ. 2027ರ ದೀಪಾವಳಿ ಹಬ್ಬಕ್ಕೆ ರಾಮಾಯಣ ಪಾರ್ಟ್‌ 2 ಬರಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್‌ ಜೊತೆಗೆ ಸನ್ನಿ ಡಿಯೋಲ್, ರವಿ ದುಬೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.