ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ʻನೀವು ಬದ್ರರ್‌ ಇನ್‌ ಲಾ ಅಲ್ಲ, ನನ್ನ ನಿಜವಾದ ಬ್ರದರ್‌ʼ; ವಿಜಯ್‌ ದೇವರಕೊಂಡಗೆ ಅಣ್ಣನ ಸ್ಥಾನ ನೀಡಿದ ರಶ್ಮಿಕಾ ಸಹೋದರಿ ಶಿಮನ್‌

ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಸೆಮಣೆ ಏರುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅದ್ಧೂರಿ ಮುನ್ನುಡಿ ಬರೆದಿದ್ದಾರೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಈ ತಾರಾ ಜೋಡಿಯ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ಈ ಅದ್ಧೂರಿ ಮದುವೆಯು ರಾಜಸ್ಥಾನದ ಉದಯ್‌ಪುರದಲ್ಲಿ ನಡೆದಿದ್ದರೂ, ರಶ್ಮಿಕಾ ಅವರು ತಮ್ಮ ಮೂಲನೆಲೆಯಾದ ಕೊಡಗಿನ ಸಂಪ್ರದಾಯವನ್ನು ಮರೆತಿರಲಿಲ್ಲ. ಕೊಡವ ಸಂಪ್ರದಾಯದಂತೆ ಮದುವೆಯ ಶಾಸ್ತ್ರಗಳು ರಶ್ಮಿಕಾ ಅವರ ತವರಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದವು. ಸಂಗೀತ, ಹಳದಿ ಶಾಸ್ತ್ರ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕುಟುಂಬಸ್ಥರು ಮತ್ತು ಆತ್ಮೀಯರು ಸಂಭ್ರಮದಿಂದ ಭಾಗಿಯಾಗಿದ್ದರು. ಇದೀಗ ಈ ಮದುವೆಯ ಅಪರೂಪದ ಫೋಟೋಗಳನ್ನು ರಶ್ಮಿಕಾ ತಂಗಿ ಶಿಮನ್ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕ ಹಾಗೂ ಬಾವನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

'ನಂಗೆ ನಿಜವಾದ ಅಣ್ಣ ನೀವು' ; ವಿಜಯ್‌ ದೇವರಕೊಂಡ ನಗ್ಗೆ ರಶ್ಮಿಕಾ ತಂಗಿ ಮಾತು

-

Avinash GR
Avinash GR Apr 11, 2026 5:16 PM