ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ!

IND vs ENG 3rd ODI: ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ತಮ್ಮ ಒಡಿಐ ವೃತ್ತಿ ಜೀವನದ 34ನೇ ಶತಕವನ್ನು ಸಿಡಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾಗಿದ್ದ ರೋಹಿತ್‌ ಶರ್ಮಾ, ಲಾರ್ಡ್ಸ್‌ ಅಂಗಣದಲ್ಲಿ ತಮ್ಮ ಭರ್ಜರಿ ಬ್ಯಾಟ್‌ ಮಾಡಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಇಂಗ್ಲೆಂಡ್‌ನಲ್ಲಿ 8ನೇ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆಯನ್ನು ಹಿಟ್‌ಮ್ಯಾನ್‌ ಬರೆದಿದ್ದಾರೆ.

ಲಾರ್ಡ್ಸ್‌ನಲ್ಲಿ ಮೊದಲ ಶತಕ ಬಾರಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ!

ಲಾರ್ಡ್ಸ್‌ ಅಂಗಣದಲ್ಲಿ ಮೊದಲ ಶತಕ ಸಿಡಿಸಿದ ರೋಹಿತ್‌ ಶರ್ಮಾ. -

Profile
Ramesh Kote Jul 19, 2026 10:26 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (IND vs ENG) ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ತನ್ನ ಒಡಿಐ ವೃತ್ತಿ ಜೀವನದ 34ನೇ ಶತಕವನ್ನು ಬಾರಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಒಡಿಐ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ದೊಡ್ಡ ದಾಖಲೆಯನ್ನು ಬರೆದ ರೋಹಿತ್‌, ಇಂಗ್ಲೆಂಡ್‌ನಲ್ಲಿ ತಮ್ಮ 8ನೇ ಶತಕದ ಮೂಲಕ ಮತ್ತೊಂದು ನೂತನ ಮೈಲುಗಲ್ಲು ತಲುಪಿದ್ದಾರೆ.

ಭಾನುವಾರ ನಡೆದ ಈ ಪಂದ್ಯಕ್ಕೂ ಮುನ್ನ ರೋಹಿತ್‌ ಶರ್ಮಾ ಆರಂಭಿಕ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು. ಅವರು ಕಳೆದ ಎರಡು ಪಂದ್ಯಗಳಿಂದ ಕ್ರಮವಾಗಿ 11 ರನ್‌ ಹಾಗೂ 26 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇದಾದ ಬಳಿಕ ರೋಹಿತ್‌ ಶರ್ಮಾ ಅವರ ನಿವೃತ್ತಿ ಯ ಬಗ್ಗೆ ಸಾಕಷ್ಟು ವರದಿಗಳಾಗಿದ್ದವು. ಭಾನುವಾರ ಲಾರ್ಡ್ಸ್‌ ಅಂಗಣದಲ್ಲಿ ರೋಹಿತ್‌ ಶರ್ಮಾ ಪಾಲಿಗೆ ಭಾರತದ ಪರ ಕೊನೆಯ ಪಂದ್ಯ ಎಂದು ವರದಿಯಾಗಿತ್ತು. ಆ ಮೂಲಕ ಅವರಿಗೆ ಮುಂದಿನ ಸರಣಿಗೆ ತಂಡದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿತ್ತು.

IND vs ENG: 141 ರನ್‌ ಸಿಡಿಸಿ ವಿವಿಯನ್‌ ರಿಚರ್ಡ್ಸ್‌ರ 47 ವರ್ಷಗಳ ದಾಖಲೆ ಮುರಿದ ಬೆನ್‌ ಡಕೆಟ್‌!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ನಿಮಿತ್ತ ರೋಹಿತ್‌ ಬದಲು, ಯಶಸ್ವಿ ಜೈಸ್ವಾಲ್‌ ಅವರಂಥ ಯುವ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಅವರು ಮೂರನೇ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 34ನೇ ಶತಕವನ್ನು ಬಾರಿಸಿ ಭರ್ಜರಿ ಫಾರ್ಮ್‌ಗೆ ಮರಳಿದರು. ರೋಹಿತ್‌ ಶತಕ ಸಿಡಿಸುತ್ತಿದ್ದಂತೆ ಡಗ್‌ಔಟ್‌ನಲ್ಲಿ ಕುಳಿತಿದ್ದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವವನ್ನು ಸಲ್ಲಿಸಿದರು.



ಇಂಗ್ಲೆಂಡ್‌ ನೀಡಿದ್ದ 388 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ, ಮತ್ತೊಬ್ಬ ಆರಂಭಿಕ ಶುಭಮನ್‌ ಗಿಲ್‌ ಜೊತೆಗೆ ಬಹಳ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿದರು. ಅವರು 84 ಎಸೆತಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಟಿದರು. ಅಲ್ಲದೆ ಗಿಲ್‌ ಜೊತೆಗೆ ಮೊದಲನೇ ವಿಕೆಟ್‌ಗೆ 147 ರನ್‌ಗಳ ಜೊತೆಯಾಟವನ್ನು ಆಡಿದರು. ರೋಹಿತ್‌ಗೂ ಮುನ್ನ ಭರ್ಜರಿಯಾಗಿ ಬ್ಯಾಟ್‌ ಮಾಡಿದ್ದ ಗಿಲ್‌, 84 ಎಸೆತಗಳಲ್ಲಿ 77 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

IND vs ENG: ಲಾರ್ಡ್ಸ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ಏಕೆ ಆಡುತ್ತಿಲ್ಲ? ಕಾರಣ ತಿಳಿಸಿದ ಶುಭಮನ್‌ ಗಿಲ್‌!

ವಿಶ್ವ ದಾಖಲೆ ಬರೆದ ಹಿಟ್‌ಮ್ಯಾನ್‌

ವಿದೇಶಿ ನೆಲದಲ್ಲಿ ಅತಿ ಹೆಚ್ಚು ಏಕದಿನ ಕ್ರಿಕೆಟ್‌ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆಯನ್ನು ರೋಹಿತ್‌ ಶರ್ಮಾ ಬರೆದಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ 8 ಶತಕಗಳನ್ನು ಇಲ್ಲಿಯವರೆಗೂ ಸಿಡಿಸಿದ್ದಾರೆ. ಆ ಮೂಲಕ ಯುಎಇನಲ್ಲಿ 7 ಶತಕಗಳನ್ನು ಬಾರಿಸಿದ್ದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

ವಿದೇಶದಲ್ಲಿ ಅತಿ ಹೆಚ್ಚು ಒಡಿಐ ಶತಕ ಸಿಡಿಸಿದವರು

ಇಂಗ್ಲೆಂಡ್‌ನಲ್ಲಿ ರೋಹಿತ್‌ ಶರ್ಮಾ 8 ಶತಕಗಳು

ಯುಇಎನಲ್ಲಿ ಸಚಿನ್‌ ತೆಂಡೂಲ್ಕರ್‌ 7 ಶತಕ

ಸಹೀದ್‌ ಅನ್ವರ್‌ ಯುಎಇನಲ್ಲಿ 7 ಶತಕ

ಭಾರತದಲ್ಲಿ ಎಬಿ ಡಿ ವಿಲಿಯರ್ಸ್‌ 7 ಶತಕ

ಭಾರತದಲ್ಲಿ ಕ್ವಿಂಟನ್‌ ಡಿ ಕಾಕ್‌ 7 ಶತಕ

138 ರನ್‌ಗಳಿಗೆ ಔಟ್‌ ಆದ ಹಿಟ್‌ಮ್ಯಾನ್‌

ಶತಕ ಸಿಡಿಸಿದ ಬಳಿಕ ರೋಹಿತ್‌ ಶರ್ಮಾ ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದರು. ಅವರು ಆಡಿದ 110 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 138 ರನ್‌ ಗಳಿಸಿ. ಜೇಕಬ್‌ ಬೆಥೆಲ್‌ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಬೌಲ್ಡ್‌ ಆದರು.