ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಯಸ್ಸು 65 ದಾಟಿದರೂ ಬಾಕ್ಸ್‌ ಆಫೀಸ್‌ನಲ್ಲಿ ಕುಗ್ಗಿಲ್ಲ ಇವರ ಹವಾ! ಚಿರಂಜೀವಿ, ರಜನಿಕಾಂತ್‌, ಸನ್ನಿ ಡಿಯೋಲ್‌ಗೆ ಏಜ್‌ ಈಸ್‌ ಎ ಜಸ್ಟ್‌ ನಂಬರ್!‌

2026ರಲ್ಲಿ ಬಾಕ್ಸ್‌ ಆಫೀಸ್ ಹೊಸ ಇತಿಹಾಸ ಬರೆಯುತ್ತಿದೆ. 70ರ ಹರೆಯದ ಚಿರಂಜೀವಿ ಅವರು 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಮೂಲಕ ದಾಖಲೆ ಬರೆದರೆ, 68ರ ಸನ್ನಿ ಡಿಯೋಲ್ ನಟನೆಯ 'ಬಾರ್ಡರ್ 2' ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಇವರ ಬೆನ್ನಲ್ಲೇ 75ರ ರಜನಿಕಾಂತ್ 'ಜೈಲರ್ 2' ಮೂಲಕ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

Rajinikanth: ಚಿತ್ರರಂಗದ ಹಳೇ ಹುಲಿಗಳ ಅಬ್ಬರ; ಬಾಕ್ಸ್ ಆಫೀಸ್ ಗಡಗಡ!

-

Avinash GR
Avinash GR Feb 15, 2026 6:43 PM

2026ರ ವರ್ಷ ಶುರುವಾಗಿ ಒಂದೂವರೆ ತಿಂಗಳು ಕಳೆದಿವೆಯಷ್ಟೇ! ಆಗಲೇ ಬಾಕ್ಸ್ ಆಫೀಸ್‌ನಲ್ಲಿ ಸೀನಿಯರ್‌ ಹೀರೋಗಳು ತಮ್ಮ ಪ್ರಭಾವಳಿಯನ್ನು ತೋರಿಸಲು ಆರಂಭಿಸಿದ್ದಾರೆ. ಹೌದು, ಟಾಲಿವುಡ್‌ ನಟ ಚಿರಂಜೀವಿ ಅವರ 'ಮನ ಶಂಕರ ವರ ಪ್ರಸಾದ್ ಗಾರು' ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಅತ್ತ ಬಾಲಿವುಡ್‌ನಲ್ಲಿ ಸನ್ನಿ ಡಿಯೋಲ್‌ ಅವರ ಬಾರ್ಡರ್‌ 2 ಈ ವರ್ಷ ಅತ್ಯಧಿಕ ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿಗೆ ಒಳಗಾಗಿದೆ. ಒಂದು ಕಾಮನ್‌ ಪಾಯಿಂಟ್‌ ಏನಪ್ಪ ಅಂದರೆ, ಇವರ ವಯಸ್ಸು.

ಚಿರಂಜೀವಿ ಅವರ ವಯಸ್ಸು ಈಗ 70ರ ಗಡಿ ದಾಟಿದೆ. ಸನ್ನಿ ಡಿಯೋಲ್‌ ಅವರಿಗೆ 68 ವರ್ಷ ವಯಸ್ಸು. ಹೀಗೆ ಇಬ್ಬರ ವಯಸ್ಸು 65 ದಾಟಿದರೂ ಅವರ ಹವಾ ಮಾತ್ರ ಒಂಚೂರು ಕಮ್ಮಿ ಆಗಿಲ್ಲ. ಈ ವರ್ಷದ ಆರಂಭದಲ್ಲೇ ತಮ್ಮ ತಾಕತ್ತನ್ನು ಇವರು ಪ್ರದರ್ಶಿಸಿದ್ದಾರೆ. ಈಗಿನ ಯಂಗ್‌ ಹೀರೋಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಈ ನಟರು ಮಾಡಿ ಬಿಸಾಕಿದ್ದಾರೆ. ಮುಂದೆ ಇವರ ಜೊತೆಗೆ 75ರ ಹರೆಯದ ರಜನಿಕಾಂತ್‌ ಕೂಡ ಸೇರಿಕೊಳ್ಳಲಿದ್ದಾರೆ ಎಂಬುದು ಮತ್ತೊಂದು ವಿಶೇಷ.

ʻಮೆಗಾ ಸ್ಟಾರ್ʼ ವಿರುದ್ಧದ ಟ್ವೀಟ್‌ಗೆ ಸೊಸೆ ಕೆಂಡ; ಚಿರಂಜೀವಿಯನ್ನ ಟೀಕಿಸಿದವರಿಗೆ ಲಾವಣ್ಯ ತ್ರಿಪಾಠಿ ಖಡಕ್ ವಾರ್ನಿಂಗ್!

ಕೊಳ್ಳೆ ಹೊಡೆದ ʻಮನ ಶಂಕರ ವರ ಪ್ರಸಾದ್ ಗಾರುʼ

ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬಂದ ಚಿರಂಜೀವಿ ಅವರ ʻಮನ ಶಂಕರ ವರ ಪ್ರಸಾದ್ ಗಾರುʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 375 ಕೋಟಿ ರೂ. ಬಾಚಿಕೊಂಡಿದೆ. ನಿರ್ಮಾಪಕರಿಗೆ ದೊಡ್ಡ ಲಾಭ ತಂದುಕೊಟ್ಟಿದ್ದಲ್ಲದೇ, ಚಿರು ಕರಿಯರ್‌ನಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹಣೆ ಪಟ್ಟಿಯನ್ನು ಈ ಸಿನಿಮಾ ಪಡೆದುಕೊಂಡಿದೆ. 70ನೇ ವಯಸ್ಸಿನಲ್ಲೂ ಚಿರು ಮಾಡಿದ ಮ್ಯಾಜಿಕ್‌ ಎಲ್ಲರನ್ನು ಮಂತ್ರಮುಗ್ಧಗೊಳಿಸಿದೆ. ʻಮನ ಶಂಕರ ವರ ಪ್ರಸಾದ್ ಗಾರುʼ ಚಿತ್ರವು ಚಿತ್ರಮಂದಿರಗಳ ಬಳಿಕ ಓಟಿಟಿಯಲ್ಲೂ ರೂಲ್‌ ಮಾಡುತ್ತಿದೆ.

Sunny Deol: ʼರಾಮಾಯಣʼ ಸಿನಿಮಾದ ಹನುಮಂತ ಪಾತ್ರದ ಬಗ್ಗೆ ಬಾಲಿವುಡ್ ನಟ ಸನ್ನಿ ಡಿಯೋಲ್ ಹೇಳಿದ್ದೇನು?

ಸನ್ನಿ ಡಿಯೋಲ್‌ ಹವಾ ನಿಂತಿಲ್ಲ

ಬಾಲಿವುಡ್‌ ನಟ, 68 ವರ್ಷದ ಸನ್ನಿ ಡಿಯೋಲ್‌ ಒಂದಷ್ಟು ಸಮಯದ ಹಿಂದೆ ಸೋಲುಗಳಿಂದ ಕಂಗೆಟ್ಟಿದ್ದರು. ಆದರೆ 2023ರಲ್ಲಿ ಬಂದ ಅವರ ಗದರ್‌ 2 ಸಿನಿಮಾ ಭವಿಷ್ಯವನ್ನೇ ಬದಲಿಸಿತು. ಬಾಕ್ಸ್‌ ಆಫೀಸ್‌ನಲ್ಲಿ 650 ಕೋಟಿ ರೂ. ಗಳಿಸಿತು. ಕಳೆದ ವರ್ಷ ಬಂದ ಜಾಟ್‌ ಸಿನಿಮಾದಿಂದಲೂ ಸನ್ನಿಗೆ ದೊಡ್ಡ ಟರ್ನ್‌ ಸಿಕ್ಕಿತ್ತು. ಈ ವರ್ಷದ ಆರಂಭದಲ್ಲೇ ಬಾರ್ಡರ್‌ 2 ಚಿತ್ರದ ಮೂಲಕ ಮತ್ತೊಂದು ಸಿಕ್ಸರ್‌ ಬಾರಿಸಿದ್ದಾರೆ ಸನ್ನಿ. ಬಾರ್ಡರ್‌ 2 ಚಿತ್ರವು 475 ಕೋಟಿ ರೂ. ಗಳಿಸಿದೆ. ಈ ವರ್ಷ ತೆರೆಕಂಡಿರುವ ಭಾರತೀಯ ಚಿತ್ರಗಳಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಸದ್ಯ ಬಾರ್ಡರ್‌ 2 ಚಿತ್ರಕ್ಕಿದೆ. ಆಗಸ್ಟ್‌ನಲ್ಲಿ ಇವರ ಲಾಹೋರ್‌ 1947 ಸಿನಿಮಾ ಬರಲಿದ್ದು, ಆ ಚಿತ್ರದ ಮೂಲಕ ಸನ್ನಿ ಪುನಃ ತಮ್ಮ ಹವಾ ಕಂಟಿನ್ಯೂ ಮಾಡಲಿದ್ದಾರೆ ಎನ್ನಲಾಗುತ್ತಿದೆ.

75 ದಾಟಿದರೂ ರಜನಿಕಾಂತ್‌ಗೆ ಯಾರೂ ಸಮ?

ಚಿರು, ಸನ್ನಿಯದ್ದೇ ಒಂದು ರೀತಿಯ ಗೆಲುವಾದರೆ, ರಜನಿಕಾಂತ್‌ ಅವರದ್ದು ಮತ್ತೊಂದು ರೀತಿ ಯಶಸ್ಸಿನ ಬೇಟೆ. ಕಳೆದ ವರ್ಷ ಮಿಶ್ರ ಪ್ರತಿಕ್ರಿಯೆ ಪಡೆದರೂ ಕೂಡ ಕೂಲಿ ಸಿನಿಮಾ 500+ ಕೋಟಿ ರೂ. ಬಾಚಿಕೊಳ್ಳಲು ರಜನಿಕಾಂತ್‌ ಅವರ ವರ್ಚಸ್ಸೇ ಪ್ರಮುಖ ಕಾರಣ. ಅದೇ ಈ ವರ್ಷ ರಜನಿಕಾಂತ್‌ ಅವರು ಜೈಲರ್‌ 2 ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾವು 2023ರಲ್ಲಿ 650+ ಕೋಟಿ ರೂ. ಗಳಿಸಿತ್ತು. ಜೈಲರ್‌ 2 ಚಿತ್ರವು ಕನಿಷ್ಠ ಎಂದರೂ 1000 ಕೋಟಿ ರೂ. ಬಾಚಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಷ್ಟೆಲ್ಲಾ ಲೆಕ್ಕಾಚಾರಗಳಿಗೆ ಕಾರಣ,‌ 75 ದಾಟಿದ ರಜನಿಕಾಂತ್ ಎಂಬ ಒಂದೇ ಒಂದು ಹೆಸರು!