ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್‌. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ

P susheela: ಭಾರತೀಯ ಚಿತ್ರರಂಗದ ಇಬ್ಬರು ಅದ್ಭುತ ಗಾಯಕಿಯರು ಎಸ್‌. ಜಾನಕಿ ಹಾಗೂ ಪಿ. ಸುಶೀಲ. ಸಮಕಾಲೀನರಾದ ಇಬ್ಬರೂ ತಮ್ಮ ಕೋಗಿಲ ಕಂಠದಿಂದ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಪಿ. ಸುಶೀಲಾ ಎಸ್. ಜಾನಕಿ ಜೊತೆಗಿನ ಒಡನಾಟ, ಸ್ನೇಹ, ಭಿನ್ನಾಭಿಪ್ರಾಯ, ಎಲ್ಲದ್ದರ ಬಗ್ಗೆ ಮೆಲುಕು ಹಾಕಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼ ಎಸ್‌. ಜಾನಕಿ ನೆನೆದು ಪಿ. ಸುಶೀಲಾ ಭಾವುಕ

ಎಸ್‌ ಜಾನಕಿ -

Yashaswi Devadiga
Yashaswi Devadiga Jul 13, 2026 6:55 PM

ಖ್ಯಾತ ಗಾಯಕಿ ಎಸ್. ಜಾನಕಿ (S Janaki) ನಿಧನರಾಗಿದ್ದು, ಸಾಕಷ್ಟು ಅಭಿಮಾನಿಗಳು, ಗಣ್ಯರು ಎಸ್. ಜಾನಕಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗದ ಇಬ್ಬರು ಅದ್ಭುತ ಗಾಯಕಿಯರು ಎಸ್‌. ಜಾನಕಿ ಹಾಗೂ ಪಿ. ಸುಶೀಲ ( P Susheela ). ಸಮಕಾಲೀನರಾದ ಇಬ್ಬರೂ ತಮ್ಮ ಕೋಗಿಲ ಕಂಠದಿಂದ ಸಾವಿರಾರು ಗೀತೆಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ. ಪಿ. ಸುಶೀಲಾ ಎಸ್. ಜಾನಕಿ ಜೊತೆಗಿನ ಒಡನಾಟ, ಸ್ನೇಹ, ಭಿನ್ನಾಭಿಪ್ರಾಯ, ಎಲ್ಲದ್ದರ ಬಗ್ಗೆ ಮೆಲುಕು ಹಾಕಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ಎಸ್. ಜಾನಕಿಯವರ ನಷ್ಟವನ್ನು ವೈಯಕ್ತಿಕ ನಷ್ಟ ಎಂದು ಪಿ. ಸುಶೀಲಾ ಹೇಳಿದ್ದಾರೆ. "50 ವರ್ಷಗಳಿಗೂ ಹೆಚ್ಚು ಕಾಲ ನನ್ನೊಂದಿಗೆ ಒಡನಾಟ ಹೊಂದಿದ್ದ ನನ್ನ ಆತ್ಮೀಯ ಸ್ನೇಹಿತೆ ಜಾನಕಿಯವರ ಹಠಾತ್ ನಿಧನದ ಬಗ್ಗೆ ದುಃಖವಾಗುತ್ತಿದೆ. ಅವರು ಇನ್ನಿಲ್ಲ ಎಂದು ನಂಬುವುದು ತುಂಬಾ ಕಷ್ಟ" ಎಂದು ಪಿ. ಸುಶೀಲಾ ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Jodi No 1 Winner: ‘ಜೋಡಿ ನಂ 1’ ಗೆಲುವಿನ ಕಿರೀಟ ಪ್ರಭಾಕರ್ - ಮಾಲತಿ ಜೋಡಿಗೆ! ಗೆದ್ದವರಿಗೆ ಏನು ಬಹುಮಾನ?

ಸಹೋದರಿಯನ್ನು ಕಳೆದುಕೊಂಡಿದ್ದೇನೆ

ಮತ್ತೊಂದು ಸಂದೇಶದಲ್ಲಿ, ಸುಶೀಲಾ ಆ ದಿನವನ್ನು ತಮ್ಮ ಜೀವನದ ಅತ್ಯಂತ ದುಃಖಕರ ದಿನಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. "ನಾನು ಒಬ್ಬ ಪ್ರಸಿದ್ಧ ಸಹೋದ್ಯೋಗಿಯನ್ನು ಮಾತ್ರವಲ್ಲದೆ ನನ್ನ ನಿಜವಾದ ಸ್ನೇಹಿತ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ನಾವು ಸುಮಾರು ಐದು ದಶಕಗಳನ್ನು ಸಂಗೀತದಲ್ಲಿ ಒಟ್ಟಿಗೆ ಕಳೆದಿದ್ದೇವೆ, ಅನೇಕ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದೇವೆ" ಎಂದು ಅವರು ಹೇಳಿದರು.



"ಅವರಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ. ದುರದೃಷ್ಟವಶಾತ್, ಇಂದು ಅವರ ಸಾಮರ್ಥ್ಯದ ಗಾಯಕರು ನಮ್ಮಲ್ಲಿಲ್ಲ" ಎಂದು ಅವರು ಹೇಳಿದರು. , "'ಸಿಂಗಾರವಲೆ ದೇವ'ವನ್ನು ಅವರು ಹಾಡಿದ ರೀತಿಯಲ್ಲಿ ಬೇರೆ ಯಾರೂ ಹಾಡಲು ಸಾಧ್ಯವಿಲ್ಲ. ಆ ಹಾಡು ಅವರನ್ನು ಹಿನ್ನೆಲೆ ಗಾಯನದ ಉತ್ತುಂಗಕ್ಕೆ ಕೊಂಡೊಯ್ದಿತು" ಎಂದು ಸುಶೀಲಾ ಹೇಳಿದರು.

ನಮ್ಮ ಮಧ್ಯೆ ಜಗಳ ತಂದಿಟ್ರು

ಇದ್ದಷ್ಟು ದಿನ ನಮ್ಮನ್ನು ಅನೇಕರು ಟಾರ್ಗೆಟ್‌ ಮಾಡಿದ್ದರು. ನನ್ನ ಮೇಲೆ ಆಕೆಗೆ ಹೇಳಿ, ಆಕೆಯ ಮೇಲೆ ನನಗೆ ಹೇಳಿ ತಂದಿಟ್ಟು ತಮಾಷೆ ನೋಡಿದ್ರು. ಈಗ ಅವ್ರು ತಂಪಾಗಿರ್ಲಿ. ಇದೆಲ್ಲಾ ಮಾಡಿ ಅವರೆಲ್ಲ ಏನು ಸಾಧಿಸಿದ್ರು? ಆಕೆಗೆ ಸಾವೇ ಇಲ್ಲ. ದೇವರ ಬಳಿಗೆ ಹೋಗಿದ್ದಾಳೆ. ಯಾರಿಗೂ ಈ ಅದೃಷ್ಟ ಸಿಗಲ್ಲ. ಜನ ಪುಣ್ಯ ಮಾಡಿದ್ದಕ್ಕೆ ಆಕೆಯ ಸುಮಧುರ ದನಿ ಕೇಳುವ ಅವಕಾಶ ಸಿಕ್ತು" ಎಂದು ಪಿ. ಸುಶೀಲ ಮಾತನಾಡಿದ್ದಾರೆ.

ಎಸ್. ಜಾನಕಿ ಹಾಗೂ ಪಿ. ಸುಶೀಲ ಇಬ್ಬರೂ ಸೇರಿ ಒಂದೇ ಹಾಡು ಹಾಡಿರುವ ಉದಾಹರಣೆಗಳಿವೆ. ಕನ್ನಡದಲ್ಲಿ 'ಚದುರಂಗ' ಚಿತ್ರದ 'ಮಮತೆಯ ತೋಟದ ಮಲ್ಲಿಗೆಯೆ' ಹಾಡಿಗೆ ಇಬ್ಬರೂ ದನಿಯಾಗಿದ್ದರು.

ಇದನ್ನೂ ಓದಿ: Amruthadhaare Serial: ಮನದರಸಿ ಮುಚ್ಚಿಟ್ಟ ಸತ್ಯ ಗೌತಮ್ ಎದುರು! ಭೂಮಿಕಾ ಮನದ ಭಾರ ನಿವಾರಿಸ್ತಾರಾ ದಿವಾನ್ ಸರ್?

ಜಾನಕಿ ಇಲ್ಲದೆ ಸಂಗೀತ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದು ಹೇಳಿದರು. ಜಾನಕಮ್ಮನಂತಹ ಮಹಾನ್ ಗಾಯಕಿಯ ಧ್ವನಿಯನ್ನು ಕೇಳುವ ಭಾಗ್ಯವನ್ನು ಪಡೆಯುವ ಮೂಲಕ ಈ ಪೀಳಿಗೆಗೆ ಸಾಕಷ್ಟು ಪುಣ್ಯ ಸಿಕ್ಕಿದೆ ಎಂದು ಅವರು ಹೊಗಳಿದರು. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಅಮರ ಹಾಡುಗಳು ಹಾಗೇ ಇರುತ್ತದೆ ಎಂದು ಹೇಳಿದರು.