ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಶ್ಮಿಕಾ ಮಂದಣ್ಣ ನಟನೆಯ 'ಕಾಕ್‌ಟೇಲ್ 2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್!

ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ಅಭಿನಯದ 'ಕಾಕ್‌ಟೇಲ್ 2' ಸಿನಿಮಾ ಚಿತ್ರಕಥೆಯ ಕೊರತೆಯಿಂದಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 53.40 ಕೋಟಿ ರೂಪಾಯಿ ಬಾಚಿಕೊಂಡಿದೆ.

ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಕಾಕ್‌ಟೇಲ್ 2' ಚಿತ್ರಕ್ಕೆ ಭರ್ಜರಿ ಗಳಿಕೆ

-

Avinash GR
Avinash GR Jun 21, 2026 8:36 PM

ಶಾಹಿದ್‌ ಕಪೂರ್‌, ರಶ್ಮಿಕಾ ಮಂದಣ್ಣ, ಕೃತಿ ಸನೋನ್‌ ನಟನೆಯ 'ಕಾಕ್‌ಟೇಲ್ 2' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರಂತೂ ಈ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ಬರೆದಿದ್ದಾರೆ. ಹೀಗೆಲ್ಲಾ ಇದ್ದಾಗ್ಯೂ ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಈ ಸಿನಿಮಾವು ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಮೊದಲ ಎರಡು ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 53.40 ಕೋಟಿ ರೂಪಾಯಿ ಗಳಿಸಿದೆ.

ಎರಡನೇ ದಿನಕ್ಕೆ ಕಲೆಕ್ಷನ್‌ನಲ್ಲಿ ಏರಿಕೆ

ಈ ಚಿತ್ರದ ನಿರ್ಮಾಪಕರ ಪ್ರಕಾರ, 'ಕಾಕ್‌ಟೇಲ್ 2' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಶುಕ್ರವಾರ 24 ಕೋಟಿ ರೂಪಾಯಿ ಆಗಿತ್ತು, ಶನಿವಾರದ ವೇಳೆಗೆ ಇದು 29.4 ಕೋಟಿ ರೂಪಾಯಿಗೆ ಏರಿಕೆ ಆಗಿದೆ. "ಬಾಕ್ಸ್ ಆಫೀಸ್‌ನಲ್ಲಿ ಇದು ಕಾಕ್‌ಟೇಲ್ ಪಾರ್ಟಿ" ಎಂದು ನಿರ್ಮಾಪಕರು ಕಲೆಕ್ಷನ್ ಅನೌನ್ಸ್ ಮಾಡಿ, ಹೊಸ ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರವನ್ನು 2012ರ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅಭಿನಯದ ಸೂಪರ್ ಹಿಟ್ 'ಕಾಕ್‌ಟೇಲ್' ಸಿನಿಮಾದ ಸ್ಪಿರಿಚುಯಲ್ ಸೀಕ್ವೆಲ್ (Spiritual Sequel) ಎಂದು ಚಿತ್ರತಂಡ ಹೇಳಿಕೊಂಡಿದೆ.

Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್‌

'ಕಾಕ್‌ಟೇಲ್ 2' ಚಿತ್ರದ ತಯಾರಕರು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳ ಮುನ್ನ 'ತುಮ್ಹಿ ಹೋ ಬಂಧು' ರೀಮಿಕ್ಸ್ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿದಾಗ ಭಾರಿ ಟೀಕೆಗಳನ್ನು ಎದುರಿಸಬೇಕಾಯಿತು. 'ತುಮ್ಹಿ ಹೋ ಬಂಧು 2.0' ಎಂದು ಹೆಸರಿಸಲಾದ ಈ ಹಾಡಿನ ಚಿತ್ರೀಕರಣ ಅತ್ಯಂತ ನೀರಸವಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದರು. ಹಾಡಿನಲ್ಲಿ ಗ್ರೀನ್-ಸ್ಕ್ರೀನ್ ಸೆಟ್ ಬಳಸಿರುವುದನ್ನು ಮತ್ತು ಅದರ ಕೊರಿಯೋಗ್ರಫಿಯನ್ನು ವಿಮರ್ಶಕರು ತೀವ್ರವಾಗಿ ಖಂಡಿಸಿದ್ದರು. ಇದು 2012 ರ ಮೂಲ ಹಾಡಿಗೆ ಹೋಲಿಸಿದರೆ ತೀರಾ ಕಳಪೆಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಬರೀ ಹಾಡು ಮಾತ್ರವಲ್ಲ, ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಸುತ್ತ ಸಾಗುವ ಈ ಚಿತ್ರದ ಮೇಲೂ ಅದೇ ರೀತಿಯ ಟೀಕೆಗಳು ಮುಂದುವರಿದಿವೆ. ಆದಾಗ್ಯೂ, ಇಷ್ಟೆಲ್ಲಾ ನೆಗೆಟಿವಿಟಿ ನಡುವೆಯೂ ಚಿತ್ರವು ಇದುವರೆಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ. ಮೊದಲ ವಾರಾಂತ್ಯಕ್ಕೆ 75 ಕೋಟಿ ರೂ. ದಾಟುವ ನಿರೀಕ್ಷೆ ಇದೆ.