ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

Suhana Syed singer: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ . ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ಮದುವೆಯಾಗಿದ್ದರು. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸಖತ್ ಆಕ್ಟೀವ್ ಆಗಿದ್ದಾರೆ.

Suhana Syed: ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

ಸುಹಾನಾ ಸೈಯದ್‌ -

Yashaswi Devadiga
Yashaswi Devadiga Feb 19, 2026 10:39 AM

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ (Suhana Syed). ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ (nithish shivansh)ಅವರನ್ನು ಮದುವೆಯಾಗಿದ್ದರು. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ (Social Media) ಸುಹಾನಾ ಸಖತ್ ಆಕ್ಟೀವ್ ಆಗಿದ್ದಾರೆ. Ask me a Question ಸೆಷನ್ ನಡೆಸಿದ್ದಾರೆ. ಈ ವೇಳೆ ನಿಮ್ಮ ಹೆಸರು ಬದಲಿಸಿಕೊಳ್ಳಿ ಎಂದು ನೆಟ್ಟಿಗನೊಬ್ಬ ಹೇಳಿದ ಮಾತಿಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ ನಟಿ.

ಇದನ್ನೂ ಓದಿ: Bhagyalakshmi Kannada Serial: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ನಟ ಸುದರ್ಶನ್!

ಸವದತ್ತಿ ಯಲ್ಲಮ್ಮ ಎಂದು ಬದಲಿಸಿಕೊಳ್ಳಿ

ಸೈಯದ್ ಹೆಸರು ತುಂಬಾ ಅಮೂಲ್ಯವಾದದ್ದು. ಆದ್ದರಿಂದ ನಿಮ್ಮ ಹೆಸರನ್ನು ಸೈಯದ್ ಬದಲು ಸವದತ್ತಿ ಯಲ್ಲಮ್ಮ ಎಂದು ಬದಲಿಸಿಕೊಳ್ಳಿ ಎಂಬ ನೆಟ್ಟಿಗನ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ. ನೀವು ಹೀಗೆ ಮಾತನಾಡಿ ಒಂದು ಧರ್ಮಯನ್ನು ಗೌರವಿಸುತ್ತಿದ್ದೀನಿ ಅಂತ ಅಂದುಕೊಂಡಿದ್ದೀರಾ. ನಾನು ಕೂಡ ಸಹಾನುಭೂತಿ ಇರುವ ಧರ್ಮವನ್ನು ಗೌರವಿಸಿಕೊಂಡು ಬಂದಿದ್ದೀನಿ. ಅದಕ್ಕೆ ವಿದ್ಯಾಭ್ಯಾಸ ಬಹಳ ಮುಖ್ಯ ಅನ್ನೋದು. ಒಳ್ಳೆ ಶಾಲೆ ಸೇರಿ, ಒಳ್ಳೆ ಬುದ್ಧಿ ಕಲೀರಿ. ನಿಮ್ಮ ಧರ್ಮವನ್ನು ಗೌರವಿಸಿ, ಇನ್ನೊಬ್ಬರ ಧರ್ಮವನ್ನು ಅಗೌರವಿಸುವುದು ಸರಿಯಲ್ಲ" ಎಂದು ಹೇಳಿದ್ದಾರೆ.

ಈ ರೀತಿ ಮಾತನಾಡಿ ನಮ್ಮ ಧರ್ಮವನ್ನು ಉಳಿಸುತ್ತಿದ್ದೀವಿ ಅಂದುಕೊಂಡಿದ್ದೀರಾ. ಒಂದು ಧರ್ಮ ಉಳಿಯಲು ಕಂಡಿತ ನಿಮ್ಮಂಥವರ ಅವಶ್ಯಕತೆ ಇಲ್ಲವೇ ಇಲ್ಲ. ಎಲ್ಲಿಂದ ಬರ್ತೀರಾ ನೀವೆಲ್ಲಾ ಎಂದು ಸುಹಾನಾ ಸಯ್ಯದ್ ಬೇಸರ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸುಹಾನಾ ಅವರಿಗೆ ಮೊದಲಿಂದಲೂ ಗಾಯನ ಕ್ಷೇತ್ರ ಎಂದರೆ ಬಹಳ ಇಷ್ಟ‌. ಕುಟುಂಬದವರ ವಿರೋಧದ ನಡುವೆಯೂ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದರು. ಅಲ್ಲಿ ʼಶ್ರೀ ಕಾರನೇ ಶ್ರೀನಿವಾಸನೇʼ ಹಾಡನ್ನು ಹಾಡುವ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು.‌

ಇದನ್ನೂ ಓದಿ: Amruthadhaare serial: ಗೌತಮ್‌ ಮುಂದೆ ಸುನಿ ಡ್ರಾಮ ಬಲು ಜೋರು! ಜೈದೇವ್‌ ಪ್ಲ್ಯಾನ್‌ ಸಕ್ಸೆಸ್‌?

ಮದುವೆಗೂ ಮುನ್ನ ನಿತಿನ್ ಶಿವಾಂಶ್ ಜೊತೆ ಮಂತ್ರಾಲಯ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಮದುವೆ ಬಳಿಕ ಕೂಡ ಪತಿ ಸಮೇತ ರಾಯರ ದರ್ಶನ ಮಾಡಿದ್ದರು. . ʼʼಪ್ರತಿ ಬಾರಿ ನಾನು ಮಂತ್ರಾಲಯಕ್ಕೆ ಬಂದಾಗ, ನಮ್ಮಿಬ್ಬರ ಕುಟುಂಬದವರು ನಮ್ಮ ಮದುವೆಗೆ ಒಪ್ಪಿಗೆ ನೀಡಲಿ, ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಅದರಂತೆ ನಮ್ಮ ಮದುವೆ ನಡೆದಿದೆʼʼ ಎಂದು ಸುಹಾನಾ ಸೈಯದ್‌ ಹೇಳಿದ್ದರು.