Coolie Movie: ರಿಲೀಸ್‌ಗೂ ಮುನ್ನ ರಜನಿಕಾಂತ್ ನಟನೆಯ ಕೂಲಿಗೆ ಭರ್ಜರಿ ಕಲೆಕ್ಷನ್!
ರಜನಿಕಾಂತ್ (Rajinikanth) ಅವರ ಕೂಲಿ (Coolie) ಚಿತ್ರವೂ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾವು ಆಗಸ್ಟ್ 14 ರಂದು ತೆರೆ ಕಾಣುತ್ತಿದ್ದು ಸಿನಿ ಪ್ರಿಯರು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಸಿನಿಮಾ ರಿಲೀಸ್ ಗೆ ಒಂದು ವಾರ ಇರುವಾಗಲೇ ಸಿನಿಮಾ ಅಬ್ಬರಿಸಲು ರೆಡಿ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಇನ್ನೂ ಹಲವು ದಿನಗಳಿರುವಾಗಲೇ, ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕೂಲಿ" ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಸೃಷ್ಟಿಸಲು ಸಿದ್ಧವಾಗಿದೆ..


ಬೆಂಗಳೂರು: ರಜನಿಕಾಂತ್ (Rajinikanth) ಅವರ ಕೂಲಿ (Coolie) ಚಿತ್ರವೂ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾವು ಆಗಸ್ಟ್ 14 ರಂದು ತೆರೆ ಕಾಣುತ್ತಿದ್ದು ಸಿನಿ ಪ್ರಿಯರು ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ಸೌಬಿನ್ ಶಾಹಿರ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಝಲಕ್ ಟ್ರೇಲರ್ ನಲ್ಲೇ ವೀಕ್ಷಿಸಿದ್ದು ಹಲ್ಚಲ್ ಎಬ್ಬಿಸಿದೆ. ಇದೀಗ ಸಿನಿಮಾ ರಿಲೀಸ್‌ಗೆ ಒಂದು ವಾರ ಇರುವಾಗಲೇ ಸಿನಿಮಾ ಅಬ್ಬರಿಸಲು ರೆಡಿ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಇನ್ನೂ ಹಲವು ದಿನಗಳಿರುವಾಗಲೇ, ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕೂಲಿ" ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಸೃಷ್ಟಿಸಲು ಸಿದ್ಧವಾಗಿದೆ.
'ಕೂಲಿ’ ಸಿನಿಮಾ ನಿರೀಕ್ಷೆ ಮೂಡಿಸಲು ಹಲವು ಕಾರಣಗಳಿವೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ ಎನ್ನುವ ಒಂದು ಕಾರಣವಾದರೆ ಈ ಚಿತ್ರದಲ್ಲಿ ರಜನಿ ಜೊತೆ ಕನ್ನಡದ ಉಪೇಂದ್ರ, ಮಲಯಾಳಂನ ಸೌಬಿನ್ ಶಾಹಿರ್, ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಆಮಿರ್ ಖಾನ್ ನಟಿಸಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ 'ಕೂಲಿ' ಚಿತ್ರವು ರಿಲೀಸ್‌ಗೆ ಮೊದಲೇ 250 ಕೋಟಿ ರೂ. ಗಳಿಸಿದ್ದು ಚಿತ್ರವು ಭರ್ಜರಿ ದಾಖಲೆ ಬರೆ ಯುವುದು ಡೌಟೇ ಇಲ್ಲ ಎನ್ನಲಾಗುತ್ತಿದೆ.
ಸುಮಾರು 375 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ರಜನಿಕಾಂತ್ ಅಭಿನಯದ ಈ ಚಿತ್ರವು ಈಗಾಗಲೇ ತನ್ನ ಅಂತರರಾಷ್ಟ್ರೀಯ, ಡಿಜಿಟಲ್, ಸಂಗೀತ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ 250 ಕೋಟಿ ರೂ. ಗಳಿಸಿದೆ. ಚಿತ್ರದ ಅಂತರರಾಷ್ಟ್ರೀಯ ಹಕ್ಕುಗಳು ಸುಮಾರು 68 ಕೋಟಿಗೆ ಮಾರಾಟವಾಗಿದ್ದು ಸಿನಿಪ್ರಿಯರಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಇದನ್ನು ಓದಿ:War 2 Movie: 'ವಾರ್ 2' ಸಿನಿಮಾ ರಿಲೀಸ್‌ಗೆ ದಿನಗಣನೆ; ಜೂನಿಯರ್ ಎನ್‌ಟಿಆರ್- ಹೃತಿಕ್ ರೋಷನ್ ಭರ್ಜರಿ ಪ್ರಚಾರ
ವಿದೇಶಿ ಮಾರುಕಟ್ಟೆಯಲ್ಲಿ "ಕೂಲಿ" ಚಿತ್ರವು ಮುಂಗಡ ಬುಕಿಂಗ್‌ಗಳಿಂದ ಈಗಾಗಲೇ 30 ಕೋಟಿ ಗಳಿಸಿದೆ. ಈ ಮೂಲಕ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮಿಳು ಚಿತ್ರವೊಂದಕ್ಕೆ ಅತಿ ದೊಡ್ಡ ಆರಂಭವನ್ನು ಪಡೆಯುವ ಸಾಧ್ಯತೆ ಇದೆ. ಈ ಮೂಲಕ ವಿಜಯ್ ಲಿಯೋ ಮೂವಿಯನ್ನು ಹಿಂದಿಕ್ಕಿದೆ. 'ಕೂಲಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹಲವು ಕಡೆ ಓಪನ್ ಆಗಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬುಕಿಂಗ್ ಆಗುತ್ತಿದ್ದು, ಫ್ಯಾನ್ಸ್ ಖುಷಿ ಇನ್ನಷ್ಟು ಹೆಚ್ಚಿಸಿದೆ.
ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ 'ಕೂಲಿ' ಸಿನಿಮಾ ನಿರ್ಮಾಣ ಮಾಡಲಾಗಿದೆ. ಅನಿ ರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ಹಿಟ್ ಆಗಿದೆ. ಚಿತ್ರದಲ್ಲಿ ಮಾಫಿಯಾ ಡಾನ್ ಆಗಿ ರಜನಿಕಾಂತ್ ಗೆ ವಿಲನ್ ಆಗಿ ನಾಗಾರ್ಜುನ ಅಬ್ಬರಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣ ಪತ್ರ ದೊರೆತಿದ್ದು, 18 ವರ್ಷ ಮೇಲ್ಪಟ್ಟ ವರಿಗಷ್ಟೇ ವೀಕ್ಷಣೆಗೆ ಅವಕಾಶವಿದೆ. ''ಕೂಲಿ" ಚಿತ್ರದ ಈ ಬಿಡುಗಡೆ ಪೂರ್ವ ಯಶಸ್ಸು ಚಿತ್ರಮಂದಿರಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯಲಿದೆಯೇ ಎಂದು ಕಾದು ನೋಡಬೇಕು