ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀ ತೆಲುಗಿನ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ’ಗೆ ಬೆಂಗಳೂರಿನಲ್ಲಿ ಆಡಿಷನ್; ಕರ್ನಾಟಕದ ನೃತ್ಯ ಪ್ರತಿಭೆಗಳಿಗೆ ಸುವರ್ಣಾವಕಾಶ

ಜೀ ತೆಲುಗು ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ʻಆಟʼ ತನ್ನ ನೂತನ ಸೀಸನ್‌ಗಾಗಿ ಕರ್ನಾಟಕದ ನೃತ್ಯ ಪ್ರತಿಭೆಗಳನ್ನು ಅನ್ವೇಷಿಸಲು ಬೆಂಗಳೂರಿಗೆ ಆಗಮಿಸುತ್ತಿದೆ. ನವೆಂಬರ್ 22ರ ಭಾನುವಾರ ಚಿಕ್ಕಲಸಂದ್ರದ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ತೆಲುಗಿನ ʻಆಟʼ ರಿಯಾಲಿಟಿ ಶೋಗೆ ಬೆಂಗಳೂರಿನಲ್ಲಿ ಆಡಿಷನ್?‌

-

Avinash GR
Avinash GR Nov 20, 2026 5:42 PM

ತೆಲುಗು ಕಿರುತೆರೆ ಲೋಕದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಹಾಗೂ ಹಲವಾರು ಪ್ರತಿಭಾವಂತ ನೃತ್ಯಗಾರರನ್ನು ಬೆಳಕಿಗೆ ತಂದಿರುವ ಜೀ ತೆಲುಗು ವಾಹಿನಿಯ ಪ್ರತಿಷ್ಠಿತ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ’, ಇದೀಗ ತನ್ನ ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಜೀ ತೆಲುಗು ವಾಹಿನಿಯು ಉದ್ಯಾನನಗರಿ ಬೆಂಗಳೂರಿನಲ್ಲಿ ವಿಶೇಷ ಆಡಿಷನ್ ಆಯೋಜಿಸಿದೆ. ಈ ಮೂಲಕ ಸ್ಥಳೀಯ ನೃತ್ಯ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ, ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ನೃತ್ಯದಲ್ಲಿ ವಿಶೇಷ ಆಸಕ್ತಿ ಹಾಗೂ ಪ್ರತಿಭೆ ಹೊಂದಿರುವ 18 ರಿಂದ 30 ವರ್ಷ ವಯೋಮಿತಿಯೊಳಗಿನ ಯುವಕ-ಯುವತಿಯರು ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಇದೇ ನವೆಂಬರ್ 22ರ ಭಾನುವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರಿನ ಚಿಕ್ಕಲಸಂದ್ರದ ನಾಯ್ಡು ಲೇಔಟ್‌ನಲ್ಲಿರುವ ಪ್ರಸಿದ್ಧ 'ಅಬ್ಬಯ್ಯ ನಾಯ್ಡು ಸ್ಟುಡಿಯೋ'ದಲ್ಲಿ ಆಡಿಷನ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಕನ್ನಡ ಕಿರುತೆರೆಯಲ್ಲಿ ಹೊಸ ಮೈಲಿಗಲ್ಲು; ‘ಜಗದ್ಧಾತ್ರಿ’ ಧಾರಾವಾಹಿಯ ‘ಏಜೆಂಟ್ ಜೆಡಿ’ ಗೇಮ್ ಬಿಡುಗಡೆ ಮಾಡಿದ ಜೀ ಕನ್ನಡ

ಕಿರುತೆರೆಯ ದೊಡ್ಡ ವೇದಿಕೆಯಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಲು ಬಯಸುವ ಆಸಕ್ತ ಸ್ಪರ್ಧಿಗಳು, ಯಾವುದೇ ಅಡೆತಡೆಗಳಿಲ್ಲದೆ ನೇರವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ತಮ್ಮ ಪ್ರತಿಭೆಯ ಮೂಲಕ ತೀರ್ಪುಗಾರರ ಮನಗೆದ್ದು, ಜೀ ತೆಲುಗಿನ ‘ಆಟ’ ಹೊಸ ಸೀಸನ್‌ನ ಮುಖ್ಯ ವೇದಿಕೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದು ವಾಹಿನಿ ಹೇಳಿಕೊಂಡಿದೆ.