ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ; ಏನೆಲ್ಲ ಬದಲಾಗಲಿದೆ?

LPG gas cylinder booking rules: ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ ನಿಯಮಗಳು ಬದಲಾಗುವ ಸಾಧ್ಯತೆ ಇದೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ಹೇಗೆ ಮತ್ತು ಯಾವಾಗ ಬುಕ್ ಮಾಡುತ್ತಾರೆ ಎಂಬುದರ ಮೇಲೆ ಬಗ್ಗೆ ಈ ಬದಲಾವಣೆ ತರಲಾಗುತ್ತಿದೆ. ಹಾಗಾದರೆ ಯಾವೆಲ್ಲ ನಿಯಮ ಬದಲಾಗುತ್ತದೆ ಎನ್ನುವುದನ್ನು ನೋಡೋಣ.

ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ ನಿಯಮಗಳಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ -

Priyanka P
Priyanka P Apr 28, 2026 9:11 PM

ನವದೆಹಲಿ, ಏ. 28: ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ (LPG gas cylinder) ಬುಕ್ಕಿಂಗ್‌ ನಿಯಮಗಳು ಬದಲಾಗಲಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ಹೇಗೆ ಮತ್ತು ಯಾವಾಗ ಬುಕ್ ಮಾಡುತ್ತಾರೆ ಎಂಬುದರ ಮೇಲೆ ಬಗ್ಗೆ ಬದಲಾವಣೆಗಳನ್ನು ಅಳವಡಿಸಲಾಗುತ್ತದೆ. ಹೊಸ ನಿಯಮಗಳು ದೀರ್ಘ ಬುಕ್ಕಿಂಗ್‌, ಕಡ್ಡಾಯ ಒಟಿಪಿ ಆಧಾರಿತ ವಿತರಣೆ, ಇಕೆವೈಸಿ ಮತ್ತು ಸಂಭಾವ್ಯ ಎಲ್‌ಪಿಜಿ ಬೆಲೆ ಏರಿಕೆಯನ್ನು ಒಳಗೊಂಡಿದೆ. ಈ ಬದಲಾವಣೆಗಳ ಉದ್ದೇಶ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ದುರುಪಯೋಗವನ್ನು ಕಡಿಮೆ ಮಾಡುವುದಾದರೂ, ದೈನಂದಿನ ಬಳಕೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೇ 1ರಿಂದ ಎಲ್‌ಪಿಜಿ ಸಿಲಿಂಡರ್ ನಿಯಮಗಳು ಟ್ರೆಂಡಿಂಗ್ ವಿಷಯವಾಗುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಸರಬರಾಜು ವ್ಯತ್ಯಯ ಅಥವಾ ಬುಕಿಂಗ್ ವಿಳಂಬವನ್ನು ತಪ್ಪಿಸಲು ಹೊಸ ವ್ಯವಸ್ಥೆಯನ್ನು ಮುಂಚಿತವಾಗಿ ಅರ್ಥ ಮಾಡಿಕೊಳ್ಳಲು ಸೂಚಿಸಲಾಗಿದೆ.

ಬುಕ್ಕಿಂಗ್‌ ನಡುವಿನ ಅಂತರ

ಎಲ್‌ಪಿಜಿ ಬುಕ್ಕಿಂಗ್‌ ನಿಯಮದ ಪ್ರಮುಖ ಬದಲಾವಣೆಗಳಲ್ಲಿ ಇದೂ ಒಂದು. ಎರಡು ಬುಕ್ಕಿಂಗ್‌ಗಳ ನಡುವಿನ ಕಾಯುವ ಅವಧಿ ಹೆಚ್ಚಾಗುವ ಸಾಧ್ಯತೆ ಇದೆ. ಮರುಪೂರಣವನ್ನು ಆರ್ಡರ್ ಮಾಡಲು ಗ್ರಾಹಕರು ಹೆಚ್ಚು ಸಮಯ ಕಾಯಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಈ ಅಂತರವು ಸುಮಾರು 25 ದಿನಗಳವರೆಗೆ ಹೆಚ್ಚಾಗಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದು 45 ದಿನಗಳವರೆಗೆ ವಿಸ್ತರಿಸಬಹುದು. ಇದರರ್ಥ ಅನಿಲ ಬಳಕೆಯನ್ನು ಹೆಚ್ಚು ಎಚ್ಚರಿಕೆಯಿಂದ ಯೋಜಿಸಬೇಕಾಗುತ್ತದೆ.

ದೇಶಾದ್ಯಂತ ಇಂಧನ ಕೊರತೆಯಾಗಿದ್ದರೂ ಉತ್ತರ ಪ್ರದೇಶದ ಈ ಹಳ್ಳಿಯಲ್ಲಿಲ್ಲ ಎಲ್‌ಪಿಜಿ ಸಮಸ್ಯೆ

ಒಟಿಪಿ ಆಧಾರಿತ ವಿತರಣೆ

ಮೇ 1ರಿಂದ ಜಾರಿಗೆ ಬರಲಿರುವ ಹೊಸ ಎಲ್‌ಪಿಜಿ ಸಿಲಿಂಡರ್ ನಿಯಮಗಳ ಪ್ರಕಾರ ಒಟಿಪಿ ಆಧಾರಿತ ವಿತರಣೆಯು ಕಡ್ಡಾಯವಾಗುವ ಸಾಧ್ಯತೆಯಿದೆ. ಸಿಲಿಂಡರ್ ಸ್ವೀಕರಿಸುವ ಸಮಯದಲ್ಲಿ ಗ್ರಾಹಕರು ವಿತರಣಾ ಏಜೆಂಟ್‌ನೊಂದಿಗೆ ಒಟಿಪಿ ಹಂಚಿಕೊಳ್ಳಬೇಕಾಗುತ್ತದೆ. ಸಿಲಿಂಡರ್‌ಗಳನ್ನು ಸರಿಯಾದ ವ್ಯಕ್ತಿಗೆ ತಲುಪಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ವಂಚನೆಯನ್ನು ಕಡಿಮೆ ಮಾಡಲು ಈ ಕ್ರಮ ಮುಖ್ಯ ಎಂದು ಸರ್ಕಾರ ಹೇಳಿದೆ.

ಆಧಾರ್ ಆಧಾರಿತ ಇಕೆವೈಸಿ

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ ನಿಯಮಗಳಲ್ಲಿನ ಮತ್ತೊಂದು ಪ್ರಮುಖ ನವೀಕರಣವೆಂದರೆ ಆಧಾರ್ ಆಧಾರಿತ ಇಕೆವೈಸಿ ಜಾರಿ. ಗ್ರಾಹಕರು, ವಿಶೇಷವಾಗಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಎಲ್‌ಪಿಜಿ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವುದನ್ನು ಮುಂದುವರಿಸಲು ಇಕೆವೈಸಿ ಪೂರ್ಣಗೊಳಿಸಬೇಕಾಗಬಹುದು. ಈ ಹಂತವನ್ನು ತಪ್ಪಿಸಿಕೊಂಡರೆ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು.

ಎಲ್‌ಪಿಜಿ ಬೆಲೆ ಏರಿಕೆಯಾಗುವ ಸಾಧ್ಯತೆ

ನಿಯಮ ಬದಲಾವಣೆಗಳ ಜತೆಗೆ ಎಲ್‌ಪಿಜಿ ಬೆಲೆ ಏರಿಕೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗಾಗಲೇ ಸುಮಾರು 60 ರುಪಾಯಿಯಷ್ಟು ಹೆಚ್ಚಾಗಿದೆ.

ಎಲ್‌ಪಿಜಿ ವಿತರಣೆ ಬಗ್ಗೆ ದೈನಂದಿನ ಮಾಹಿತಿ, ಕಾಳ ಸಂತೆಯಲ್ಲಿ ಮಾರಾಟ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ

ಇನ್ನು ಪೈಪ್ಡ್ ನೈಸರ್ಗಿಕ ಅನಿಲ (PNG) ಕಡೆಗೆ ಕ್ರಮೇಣ ಒತ್ತು ನೀಡಲಾಗುತ್ತಿದೆ. ಪಿಎನ್‌ಜಿ ಲಭ್ಯವಿರುವ ಪ್ರದೇಶಗಳಲ್ಲಿ, ಗ್ರಾಹಕರು ಕಾಲಾನಂತರದಲ್ಲಿ ಅದಕ್ಕೆ ಬದಲಾಯಿಸುವಂತೆ ಸೂಚಿಸಲಾಗುತ್ತಿದೆ. ಇದನ್ನು ಕಡ್ಡಾಯ ಮಾಡುವ ಬಗ್ಗೆಯೂ ಕೇಂದ್ರ ಯೋಜನೆ ರೂಪಿಸುತ್ತಿದೆ. ಪಿಎನ್‌ಜಿ ಅಳವಡಿಸಿಕೊಳ್ಳಲು ವಿಫಲವಾದರೆ ಅದು ಭವಿಷ್ಯದಲ್ಲಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ

ಬದಲಾವಣೆಗಳ ಹೊರತಾಗಿಯೂ, ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡುವುದು ಬಹಳ ಸರಳ. ಗ್ರಾಹಕರು ವಾಟ್ಸ್‌ಆ್ಯಪ್‌, ಎಸ್‌ಎಂಎಸ್, ಮಿಸ್ಡ್ ಕಾಲ್, ಐವಿಆರ್‌ಎಸ್ ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಂತಹ ಬಹು ವಿಧಾನಗಳನ್ನು ಬಳಸಬಹುದು. ಸಮಸ್ಯೆ ತಪ್ಪಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಬುಕ್ಕಿಂಗ್‌ ಮಾಡಬೇಕು. ಸುರಕ್ಷಿತ ಮತ್ತು ಸರಿಯಾದ ಬುಕ್ಕಿಂಗ್‌ ಖಚಿತಪಡಿಸಿಕೊಳ್ಳಲು ಅಧಿಕೃತ ಮಾರ್ಗಗಳನ್ನು ಅನುಸರಿಸುವುದು ಮುಖ್ಯ ಎಂದು ಸರ್ಕಾರ ತಿಳಿಸಿದೆ.