Ceasefire Violations: ಕುತಂತ್ರಿ ಪಾಕಿಸ್ತಾನದ ಬೆಂಬಲಕ್ಕೆ ನಿಂತ ಚೀನಾ
ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದ ಕೆಲವೇ ನಿಮಿಷಗಳ ನಂತರ, ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬೀಜಿಂಗ್ ಇಸ್ಲಾಮಾಬಾದ್ ಜತೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ. "ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಬೀಜಿಂಗ್ ಇಸ್ಲಾಮಾಬಾದ್‌ಗೆ ಬೆಂಬಲವಾಗಿ ನಿಂತಿದೆ" ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ.


ಹೊಸದಿಲ್ಲಿ: ಕುತಂತ್ರಿ ಪಾಕಿಸ್ತಾನ (Pakistan) ಕದನ ವಿರಾಮ ಉಲ್ಲಂಘಿಸಿ (Ceasefire Violations) ಭಾರತದ (India) ಮೇಲೆ ದಾಳಿ ಮಾಡಿದೆ. ಈ ದಾಳಿಗೆ ಭಾರತೀಯ ಸೇನೆ (Indian Army) ಸರಿಯಾಗಿಯೇ ತಿರುಗೇಟು ನೀಡಿದ್ದು, ಎಲ್ಲ ಡ್ರೋನ್‌ಗಳನ್ನು ಧ್ವಂಸ ಮಾಡಿದೆ. ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಇತ್ತ ಚೀನಾ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದೆ. ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದ ಕೆಲವೇ ನಿಮಿಷಗಳ ನಂತರ, ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬೀಜಿಂಗ್ ಇಸ್ಲಾಮಾಬಾದ್ ಜತೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ.
"ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಬೀಜಿಂಗ್ ಇಸ್ಲಾಮಾಬಾದ್‌ಗೆ ಬೆಂಬಲವಾಗಿ ನಿಂತಿದೆ" ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇಶಾಕ್ ದಾರ್ ಮತ್ತೊಂದು ಮಿತ್ರರಾಷ್ಟ್ರ ಟರ್ಕಿಯ ಜತೆಗೆ ಮಾತುಕತೆ ನಡೆಸಿದ್ದಾರೆ. ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಅವರೊಂದಿಗೆ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
War is not India's choice: NSA Ajit Doval to China's Wang Yi amid tensions with Pakistan. https://t.co/TscGzlzWka pic.twitter.com/HCNpseYShk
— Aadit Kapadia (@ask0704) May 10, 2025
ಈ ಸುದ್ದಿಯನ್ನೂ ಓದಿ: Shehbaz Sharif: ಭಾರತದ ವಿರುದ್ದ ಯುದ್ಧ ಗೆದ್ದಿರುವುದಾಗಿ ಬೊಗಳೆ ಬಿಟ್ಟ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್; ಕದನ ವಿರಾಮ ಉಲ್ಲಂಘನೆ ಬಗ್ಗೆ ಮೌನ
ಯುದ್ಧವನ್ನು ಭಾರತ ಬಯಸುತ್ತಿಲ್ಲ
ಈ ಮಧ್ಯೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಯುದ್ಧ ನಮ್ಮ ಆಯ್ಕೆಯಲ್ಲ ಎಂದು ತಿಳಿಸಿದ್ದಾರೆ.
ʼʼಯುದ್ಧವು ಭಾರತದ ಆಯ್ಕೆಯಲ್ಲ ಮತ್ತು ಯಾವುದೇ ದೇಶಕ್ಕೂ ಯುದ್ಧ ಹಿತಕರವಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ಕದನ ವಿರಾಮವನ್ನು ಕಾಯ್ದುಕೊಳ್ಳಲು ಬದ್ಧವಾಗಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು ಆಶಿಸುತ್ತವೆʼʼ ಎಂದು ದೋವಲ್ ಸ್ಪಷ್ಟಪಡಿಸಿದ್ದಾರೆ. ಪಹಲ್ಗಾಮ್ ದಾಳಿಯನ್ನು ಚೀನಾ ಖಂಡಿಸುತ್ತದೆ ಮತ್ತು ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ ಎಂದು ವಾಂಗ್ ಯಿ ಹೇಳಿದ್ದಾರೆ.
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ
ಮೇ 7ರಂದು ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ ಬಳಿಕ ಉರಿದುಬಿದ್ದ ಪಾಕಿಸ್ತಾನ ಅಂದಿನಿಂದಲೇ ಪ್ರತಿದಾಳಿ ಆರಂಭಿಸಿತು. ಇದಕ್ಕೆ ಭಾರತ ಬಲವಾಗಿಯೇ ತಿರುಗೇಟು ನೀಡುತ್ತಾ ಬಂತು. ಕೊನೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಬಂದವು. ಮೇ 10ರಂದು ಸಂಜೆ 5 ಗಂಟೆಯಿಂದ ಎಲ್ಲ ರೀತಿಯ ಕದನ ವಿರಾಮ ಜಾರಿಯಲ್ಲಿರಲಿದೆ ಎಂದು ಭಾರತ-ಪಾಕ್ ತಿಳಿಸಿದವು. ನೆಲ, ಜಲ, ವಾಯು ಮಾರ್ಗಗಳ ಮೂಲಕ ಯಾವುದೇ ರೀತಿಯ ದಾಳಿ ನಡೆಸುವುದಿಲ್ಲ ಎಂದು ಘೋಷಿಸಿದವು. ಆದರೆ ಅದಾಗಿ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ವಾಯು ಮಾರ್ಗದ ಮೂಲದ ಭಾರತದ ಮೇಲೆ ದಾಳಿ ಆರಂಭಿಸಿತು. ಪಾಕ್‌ನ ಡ್ರೋನ್‌ಗಳನ್ನೆಲ್ಲ ಭಾರತ ಹೊಡೆದುರುಳಿಸಿದ್ದು, ಸೂಕ್ತವಾಗಿ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಸಿದೆ.