Rajnath Singh: ಪಾಕಿಸ್ತಾನದ ಪ್ರತಿ ಇಂಚನ್ನೂ ತಲುಪಲಿದೆ ಬ್ರಹ್ಮೋಸ್: ಶತ್ರು ರಾಷ್ಟ್ರಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
BrahMos Missile: ಭಯೋತ್ಪಾದನೆ ವಿರುದ್ಧ ನಡೆಸಿದ ಅಪರೇಷನ್ ಸಿಂದೂರ್ ಕೇವಲ ಒಂದು ಟ್ರೈಲರ್. ಪಾಕಿಸ್ತಾನದ ಪ್ರತಿ ಇಂಚು ತಲುಪುವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ ಎಂದು ಲಖನೌ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಮೊದಲ ಕ್ಷಿಪಣಿಗಳನ್ನು ಉದ್ಘಾಟಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ರಾಜನಾಥ್ ಸಿಂಗ್ -

ಲಖನೌ: ನಮ್ಮಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನದ (Pakistan) ಪ್ರತಿಯೊಂದು ಇಂಚು ತಲುಪುವ ಸಾಮರ್ಥ್ಯ ಹೊಂದಿದೆ. ಭಯೋತ್ಪಾದನೆ ವಿರುದ್ದ ನಡೆಸಿರುವ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಕೇವಲ ಒಂದು ಟ್ರೈಲರ್ ಮಾತ್ರ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defense Minister Rajnath Singh) ಹೇಳಿದರು. ಲಖನೌ (Lucknow) ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ (BrahMos Aerospace unit) ತಯಾರಾದ ಮೊದಲ ಬ್ಯಾಚ್ ಬ್ರಹ್ಮೋಸ್ ಕ್ಷಿಪಣಿಗಳ ಉದ್ಘಾಟನೆ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಈ ಕಾರ್ಯಾಚರಣೆಯು ಭಾರತದಲ್ಲಿ ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಮೂರು ಸೇನೆಗಳು ಜಂಟಿಯಾಗಿ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕೇವಲ ಒಂದು ಟ್ರೈಲರ್. ಇದೀಗ ತಯಾರಾಗಿರುವ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಅದರ ಪ್ರತಿಯೊಂದು ಇಂಚು ಕೂಡ ಇದೆ ಎಂದು ಎಚ್ಚರಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾಷಣ:
ब्रह्मोस सिर्फ़ एक मिसाइल नहीं, बल्कि भारत की बढ़ती हुई स्वदेशी रक्षा क्षमता और आत्मनिर्भरता का प्रतीक है। आज ब्रह्मोस भारतीय थलसेना, नौसेना और वायुसेना तीनों की रीढ़ बन चुका है।
— Rajnath Singh (@rajnathsingh) October 18, 2025
‘ऑपरेशन सिंदूर’ ब्रह्मोस का सिर्फ़ ट्रेलर भर था। पाकिस्तान की एक-एक इंच ज़मीन ब्रह्मोस की पहुँच में… pic.twitter.com/D6c0KtBIg0
ಲಖನೌ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಾದ ಮೊದಲ ಬ್ಯಾಚ್ ಬ್ರಹ್ಮೋಸ್ ಕ್ಷಿಪಣಿಗಳು ಭಾರತದ ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯದಲ್ಲಿ ಒಂದು ಮೈಲಿಗಲ್ಲು ಎಂದ ಅವರು, ಆಪರೇಷನ್ ಸಿಂದೂರ್ ಗೆಲುವು ಇನ್ನು ಮುಂದೆ ನಮಗೆ ಕೇವಲ ಒಂದು ಘಟನೆಯಲ್ಲ. ಬದಲಿಗೆ ಅಭ್ಯಾಸ ಎಂದು ಸಾಬೀತುಪಡಿಸಿದೆ ಎಂಬುದಾಗಿ ತಿಳಿಸಿದರು.
ಇದನ್ನೂ ಓದಿ: ಮೊದಲನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಬದಲು ವಾಷಿಂಗ್ಟನ್ ಆಡಬೇಕೆಂದ ಆಕಾಶ ಚೋಪ್ರಾ!
ಬ್ರಹ್ಮೋಸ್ ಕ್ಷಿಪಣಿಯ ಪ್ರಾಯೋಗಿಕ ಪ್ರದರ್ಶನ ನಮ್ಮ ಶತ್ರುಗಳನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಬ್ರಹ್ಮೋಸ್ ಕ್ಷಿಪಣಿ ಕೇವಲ ಶಸ್ತ್ರಾಸ್ತ್ರವಲ್ಲ. ಭಾರತದ ಬೆಳೆಯುತ್ತಿರುವ ಸ್ಥಳೀಯ ಸಾಮರ್ಥ್ಯಗಳ ಸಂಕೇತ. ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಎತ್ತಿ ತೋರಿಸುತ್ತದೆ. ಬ್ರಹ್ಮೋಸ್ ವೇಗ, ನಿಖರತೆ ಮತ್ತು ಶಕ್ತಿಯನ್ನು ಸಂಯೋಜಿಸಿರುವ ವಿಶ್ವದ ಅತ್ಯುತ್ತಮ ವ್ಯವಸ್ಥೆಗಳಲ್ಲಿ ಒಂದು. ಇದು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬಹುದೊಡ್ಡ ಶಕ್ತಿ ಎಂದರು.
ಲಖನೌ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ರೂಪಾಂತರಗೊಂಡಿರುವುದನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್‌ನ ಆರು ನೋಡ್‌ಗಳಲ್ಲಿ ಇದು ಒಂದಾಗಿದೆ. ಭಾರತವು ಇನ್ನು ಮುಂದೆ ಬಿಡಿಭಾಗಗಳಿಗಾಗಿ ವಿದೇಶಿ ಪೂರೈಕೆದಾರರನ್ನು ಅವಲಂಬಿಸಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಣ್ಣ ಕೈಗಾರಿಕೆಗಳನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದರು.
ಇದನ್ನೂ ಓದಿ: ಸರ್ಕಾರದ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ಪ್ರಸ್ತಾಪ; ಛಲವಾದಿ ನಾರಾಯಣಸ್ವಾಮಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದು, ಇದು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ (ಯುಪಿಡಿಐಸಿ)ನ ಒಂದು ಮೈಲಿಗಲ್ಲು ಮಾತ್ರವಲ್ಲದೆ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿ ಎಂದು ತಿಳಿಸಿದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಮತ್ತಿತರರು ಪಾಲ್ಗೊಂಡಿದ್ದರು.