ನರೇಂದ್ರ ಮೋದಿ ಆಡಳಿತದಲ್ಲಿ ಬಡತನದ ಪ್ರಮಾಣ ಶೇಕಡಾ 41ರಷ್ಟು ಇಳಿಕೆ: ವಿಶ್ವ ಬ್ಯಾಂಕ್ ವರದಿಯಲ್ಲಿ ಉಲ್ಲೇಖ
Narendra Modi: 13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಡತನ ಪ್ರಮಾಣದ ಈ ಇಳಿಕೆಯು ದೇಶಕ್ಕೆ ಒಂದು ಹೊಸ ಯುಗದ ಆರಂಭ ಎಂದು ಅವರು ತಿಳಿಸಿದರು. ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿ ಪ್ರಕಾರ, ಕೆಳ-ಮಧ್ಯಮ ಆದಾಯದ ದೇಶಗಳಿಗಾಗಿ ವಿಶ್ವ ಬ್ಯಾಂಕ್ ನಿಗದಿಪಡಿಸಿದ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಭಾರತೀಯರ ಪ್ರಮಾಣವು 2011–12ರಲ್ಲಿ ಶೇಕಡಾ 57.7ರಿಂದ 2023–24ರಲ್ಲಿ ಶೇಕಡಾ 16.1ಕ್ಕೆ ಇಳಿದಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ನ. 22: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ನವೆಂಬರ್ 22) ಮಾತನಾಡಿ, 13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರ ಬಂದಿದ್ದಾರೆ ಎಂದು ಹೇಳಿದರು. ಬಡತನ ಪ್ರಮಾಣದ ಈ ಇಳಿಕೆಯು ದೇಶಕ್ಕೆ ಒಂದು ಹೊಸ ಯುಗದ ಆರಂಭ ಎಂದು ಅವರು ತಿಳಿಸಿದರು. ದೀಪಾವಳಿಯ ನಂತರದ 'ಸ್ನೇಹ ಮಿಲನ' ಕಾರ್ಯಕ್ರಮದಲ್ಲಿ ಗುಜರಾತ್ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ (ಆನ್ಲೈನ್) ಮೂಲಕ ಮಾತನಾಡಿದ ಅವರು, ವಿರೋಧ ಪಕ್ಷದವರನ್ನು ಪರೋಕ್ಷವಾಗಿ ಟೀಕಿಸಿದರು. ತಮ್ಮ ಸರ್ಕಾರದ ಅವಧಿಯಲ್ಲಿಯೇ ಬಡತನದ ಪ್ರಮಾಣ ಕುಸಿತ ಸಂಭವಿಸಿರುವುದರಿಂದ ಅದನ್ನು ಒಪ್ಪಿಕೊಳ್ಳಲು ಕೆಲವರು ಹಿಂಜರಿಯುತ್ತಿದ್ದಾರೆ ಎಂದು ಅವರು ಹೇಳಿದರು.
"ಅವರಿಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ ನಮ್ಮ ಕೆಲಸದ ಫಲಿತಾಂಶಗಳು ಎದ್ದು ಕಾಣುತ್ತಿವೆ ಎಂಬ ವಿಷಯದಲ್ಲಿ ನಮಗೆ ತೃಪ್ತಿಯಿದೆ. ನಮ್ಮ ಉದ್ದೇಶಗಳು ಸರಿಯಾಗಿದ್ದವು, ನಮ್ಮ ನೀತಿಗಳು ಸರಿಯಾಗಿದ್ದವು, ನಮ್ಮ ದಿಕ್ಕು ಸರಿಯಾಗಿತ್ತು ಮತ್ತು ನಾವು ಯಾವುದೇ ಪ್ರಯತ್ನ ಕೈ ಬಿಡಲಿಲ್ಲ" ಎಂದು ಮೋದಿ ಗುಜರಾತಿ ಭಾಷಣದಲ್ಲಿ ಹೇಳಿದರು.
ಪ್ರಧಾನಿ ಮೋದಿ ಭಾಷಣ:
Sharing my thoughts during the Diwali Sneh Milan programme in Gujarat. @BJP4Gujarat https://t.co/6dCBdaLVe7
— Narendra Modi (@narendramodi) November 22, 2026
ಪ್ರಧಾನ ಮಂತ್ರಿ ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು. ಅದರ ಪ್ರಕಾರ, ಕೆಳ-ಮಧ್ಯಮ ಆದಾಯದ ದೇಶಗಳಿಗಾಗಿ ವಿಶ್ವ ಬ್ಯಾಂಕ್ ನಿಗದಿಪಡಿಸಿದ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಭಾರತೀಯರ ಪ್ರಮಾಣವು 2011–12ರಲ್ಲಿ ಶೇಕಡಾ 57.7ರಿಂದ 2023–24ರಲ್ಲಿ ಶೇಕಡಾ 16.1ಕ್ಕೆ ಇಳಿದಿದೆ.
ಚಿನ್ನ ಕಡಿಮೆ ಖರೀದಿಸುವಂತೆ ಕರೆ ನೀಡಿದ್ದರಿಂದ ಬೆಲೆ ಇಳಿಕೆಯಾಗಿದೆ: ನರೇಂದ್ರ ಮೋದಿ
ಖರೀದಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ದಿನಕ್ಕೆ 4.20 ಡಾಲರ್ನಷ್ಟು ಆದಾಯದ ಮಿತಿಯನ್ನು ನಿಗದಿಪಡಿಸಿದರೆ, ಸುಮಾರು 49.6 ಕೋಟಿ ಜನರು ಬಡತನ ಮಿತಿಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಯೊಂದು ಅಂದಾಜಿಸಿದೆ.
ವಿಶ್ವ ಬ್ಯಾಂಕ್ ತೀವ್ರ ಬಡತನ ಮಿತಿಯನ್ನು ಪ್ರತ್ಯೇಕವಾಗಿ ಗಮನಿಸುತ್ತಿದೆ. ಇದಕ್ಕಾಗಿ ದಿನಕ್ಕೆ 3 ಡಾಲರ್ನ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಮಾನದಂಡದ ಪ್ರಕಾರ, ಅದೇ ಅವಧಿಯಲ್ಲಿ ತೀವ್ರ ಬಡತನದಲ್ಲಿ ವಾಸಿಸುವ ಭಾರತೀಯರ ಪ್ರಮಾಣವು ಶೇಕಡಾ 27.1ರಿಂದ ಶೇಕಡಾ 2.6ಕ್ಕೆ ಕುಸಿದಿದೆ.
ಸವಾಲಿಗೇ ಹಾಕುವ ಸ್ವಭಾವ
''ಸವಾಲುಗಳಿಗೆ ನಾನೆಂದೂ ಅಂಜುವುದಿಲ್ಲ. ಯಾವುದೇ ಸವಾಲನ್ನು ಎದುರಿಸದೆ ಹಾಗೆಯೇ ಬಿಡಲು ನನಗೆ ಮನಸ್ಸಾಗುವುದಿಲ್ಲ. ಅವುಗಳಿಗೆ ಸವಾಲು ಹಾಕುವಂತೆ ಎದುರಿಸುವುದೇ ನನ್ನ ಸ್ವಭಾವ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಪಶ್ಚಿಮ ಬಂಗಾಳದ ಖರಗ್ಪುರದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ವರ್ಷಾಚರಣೆಯಲ್ಲಿ ಭಾಗಿಯಾಗಿದ್ದ ನಂತರ ವಿದ್ಯಾರ್ಥಿಗಳ ಜತೆ ಅವರು ಶನಿವಾರ ಸಂವಾದ ನಡೆಸಿದ್ದರು. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸುವ ರೀತಿ ಮಾತನಾಡಿದ್ದರು.
ಮಾಜಿ ಸಿಎಂ ನಿತೀಶ್ ಕುಮಾರ್ ಹೆಸರಿನ ಬೃಹತ್ ಸೇತುವೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
ʼʼಬಡತನ ನಿರ್ಮೂಲನೆ, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಭಾರತದ ಪ್ರಗತಿಯತ್ತ ವಿದ್ಯಾರ್ಥಿಗಳ ಗಮನ ಸೆಳೆದ ಮೋದಿ, ದೇಶದ ಅಭಿವೃದ್ಧಿಗೆ ನಾವೀನ್ಯತೆ ಮತ್ತು ಸಂಶೋಧನೆ ಅತ್ಯಗತ್ಯ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ (ವಿಕಸಿತ ಭಾರತ) ರಾಷ್ಟ್ರವನ್ನಾಗಿಸುವಲ್ಲಿ ಯುವಕರ ಪಾತ್ರ ಮಹತ್ವದ್ದುʼʼ ಎಂದು ಜವಾಬ್ದಾರಿಯನ್ನು ನೆನಪಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.