ವಿಮಾನ ನಿಲ್ದಾಣದಲ್ಲೇ ಸಿಜೆಪಿ ನಾಯಕರ ಬಂಧನ: ಅಜಿಂಕ್ಯ ಶಿಂಧೆಗೆ ಪ್ರತಿಭಟನೆ ಜವಾಬ್ದಾರಿ ಕೊಟ್ಟ ಅಭಿಜಿತ್ ದೀಪ್ಕೆ
ಚುನಾವಣಾ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ಪಾಲ್ಗೊಳ್ಳಲು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಕಾಕ್ರೋಚ್ ಜನತಾ ಪಕ್ಷದ ಪ್ರಮುಖರಾದ ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಹಿನ್ನೆಲೆಯಲ್ಲಿ ಅಭಿಜೀತ್ ದಿಪ್ಕೆ ಅವರು ಪ್ರತಿಭಟನೆ ಜವಾಬ್ದಾರಿಯನ್ನು ಅಜಿಂಕ್ಯ ಶಿಂಧೆಗೆ ಹಸ್ತಾಂತರಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವದ ಜವಾಬ್ದಾರಿಯನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipk) ಅವರು ಅಜಿಂಕ್ಯ ಶಿಂಧೆ (Ajinkya Shinde) ಅವರಿಗೆ ಹಸ್ತಾಂತರಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿ ವಿಮಾನ ನಿಲ್ದಾಣದಲ್ಲಿ (delhi airport) ಇಳಿಯುತ್ತಿದ್ದಂತೆಯೇ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಈ ಹಿನ್ನೆಲೆಯಲ್ಲಿ ಚುನಾವಣಾ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ಅವರ ವಿರುದ್ಧಆಯೋಜಿಸಿದ್ದ ಪ್ರತಿಭಟನೆಯ ಪ್ರತಿಭಟನೆ ಜವಾಬ್ದಾರಿಯನ್ನು ಅಜಿಂಕ್ಯ ಶಿಂಧೆಗೆ ಹಸ್ತಾಂತರಿಸಲಾಯಿತು.
ಈ ಕುರಿತು ಮೊದಲೇ ತಾವು ಸಿದ್ಧರಾಗಿದ್ದಾಗಿ ವಿಡಿಯೊವೊಂದರಲ್ಲಿ ಅಭಿಜೀತ್ ದಿಪ್ಕೆ ತಿಳಿಸಿದ್ದಾರೆ. ಶನಿವಾರ ಅವರು ಬಿಡುಗಡೆ ಮಾಡಿದ ಪೂರ್ವ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಅವರು, ತಮಗೆ ಏನು ಕಾದಿದೆ ಎಂಬುದು ಮೊದಲೇ ತಿಳಿದಿದೆ. ಹೀಗಾಗಿ ಸಿಜೆಪಿ ಚಳುವಳಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಜಿಂಕ್ಯ ಶಿಂಧೆ ಅವರಿಗೆ ಹಸ್ತಾಂತರಿಸಲಾಗಿದೆ. ಇತರ ನಾಯಕರು ಬಿಡುಗಡೆಯಾಗುವವರೆಗೆ ಅವರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಲು ಮುಂಬೈನಿಂದ ದೆಹಲಿಗೆ ಆಗಮಿಸಿದಾಗ ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಈ ಘಟನೆ ನಡೆದ ತಕ್ಷಣವೇ ಅವರ ಎಕ್ಸ್ ಖಾತೆಯಿಂದ ಅಭಿಜೀತ್ ದಿಪ್ಕೆ ಅವರು ಅಜಿಂಕ್ಯ ಶಿಂಧೆಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ವಿಡಿಯೊವನ್ನು ಪೋಸ್ಟ್ ಮಾಡಲಾಯಿತು.
ಈ ವಿಡಿಯೊದಲ್ಲಿ ಅಭಿಜೀತ್ ದಿಪ್ಕೆ ಹೀಗೆ ಹೇಳಿದ್ದಾರೆ... ನೀವು ಈ ವಿಡಿಯೊವನ್ನು ನೋಡುತ್ತಿದ್ದೀರಿ ಎಂದಾದರೆ ನಾನು, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಬಂಧನಕ್ಕೊಳಗಾಗಿದ್ದೇವೆ ಎಂದರ್ಥ. ನಮ್ಮ ಅನುಪಸ್ಥಿತಿಯಲ್ಲಿ ಅಜಿಂಕ್ಯ ಅವರು ಸಿಜೆಪಿ ಚಳುವಳಿಯನ್ನು ಮುನ್ನಡೆಸಲಿದ್ದಾರೆ. ದಯವಿಟ್ಟು ಅವರನ್ನು ಅನುಸರಿಸಿ ಎಂದು ತಿಳಿಸಿದ್ದಾರೆ.
ಇದರ ಬಳಿಕ ಅಜಿಂಕ್ಯ ಶಿಂಧೆ ಅವರು ಬೆಂಬಲಿಗರಿಗೆ ಜಂತರ್ ಮಂತರ್‌ನತ್ತ ಸಾಗುವುದನ್ನು ಮುಂದುವರಿಸುವಂತೆ ಮತ್ತು ಅವರನ್ನು ಎಲ್ಲಿ ತಡೆಯಲಾಗುತ್ತದೆಯೋ ಅಲ್ಲಿಯೇ ಪ್ರತಿಭಟಿಸುವಂತೆ ಕರೆ ನೀಡಿದರು.
IMPORTANT Until Abhijeet Dipke, Saurav Das and Ashutosh Ranka are in detention, CJP’s Organization In-Charge Ajinkya Shinde will lead this protest at Jantar Mantar. Abhijeet had pre-recorded this video last night in anticipation of a potential arrest. @AjinkyaCJP https://t.co/WSQ69mKfTV
— Cockroach Janta Party - CJP (@Cockroachisback) October 10, 2026
ಸರ್ಕಾರವು ನಮ್ಮ ಒಗ್ಗಟ್ಟಿಗೆ ಹೆದರಿದೆ. ದಯವಿಟ್ಟು ಜಂತರ್ ಮಂತರ್‌ಗೆ ಬನ್ನಿ. ಪೊಲೀಸರು ನಿಮ್ಮನ್ನು ತಡೆದರೆ ಆ ಸ್ಥಳವನ್ನೇ ಜಂತರ್ ಮಂತರ್ ಆಗಿ ಪರಿವರ್ತಿಸಿ ಎಂದು ತಿಳಿಸಿದರು.
ಮಹಾರಾಷ್ಟ್ರದವರಾದ ಅಜಿಂಕ್ಯ ಶಿಂಧೆ ಅವರು ಹಲವು ವರ್ಷಗಳಿಂದ ಅಭಿಜೀತ್ ದಿಪ್ಕೆ ಅವರ ಆಪ್ತ ಸಹವರ್ತಿಯಾಗಿದ್ದಾರೆ. ಅವರು ಈ ಹಿಂದೆ ಆಮ್ ಆದ್ಮಿ ಪಾರ್ಟಿ ಮಹಾರಾಷ್ಟ್ರ ತಂಡದ ಸಾಮಾಜಿಕ ಜಾಲತಾಣ ಸಂಯೋಜಕರಾಗಿದ್ದರು. 2016ರಲ್ಲಿ ಗೋವಾದಲ್ಲಿ ಮೊದಲ ಬಾರಿಗೆ ಅವರು ಅಭಿಜೀತ್ ದಿಪ್ಕೆ ಅವರನ್ನು ಭೇಟಿಯಾಗಿದ್ದರು. ಆಮ್ ಆದ್ಮಿ ಪಾರ್ಟಿಯಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಲು ಶಿಂಧೆ ತಮ್ಮ ಕಾರ್ಪೊರೇಟ್ ಉದ್ಯೋಗವನ್ನು ತೊರೆದಿದ್ದರು.
ವೈದ್ಯಕೀಯ ಪ್ರಮಾಣಪತ್ರ ಇಲ್ಲದೆ ವೃತ್ತಿ: ಬೀದರ್ʼನಲ್ಲಿ 213 ನಕಲಿ ವೈದ್ಯರು ?
ಅಭಿಜೀತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಮಾತ್ರವಲ್ಲದೆ ಪ್ರತಿಭಟನೆಗೂ ಮುನ್ನ ಹಲವಾರು ಸಿಜೆಪಿ ನಾಯಕರು ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೆ ಸಾಕಷ್ಟು ಮುಂಚಿತವಾಗಿ ಅನುಮತಿ ಕೋರಿಲ್ಲ ಎಂಬ ಕಾರಣ ನೀಡಿ ದೆಹಲಿ ಪೊಲೀಸರು ಸಿಜೆಪಿಯ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಪೊಲೀಸ್ ಬಸ್‌ಗಳಲ್ಲಿ ತುಂಬಿಸಿ ರಾಜಧಾನಿಯ ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದೆ.