ಇಂಡಿಯಾ ಒಕ್ಕೂಟದ ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ರಾಹುಲ್ ಗಾಂಧಿ? ಏನಿದು ವಿವಾದ?
ಮೂರು ತಿಂಗಳ ಗರ್ಭಿಣಿಯಾಗಿದ್ದ ತಮ್ಮನ್ನು ವಿರೋಧ ಪಕ್ಷಗಳು ನಡೆಸಿರುವ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ತಳ್ಳಿದರು ಎಂದು ಪತ್ರಕರ್ತೆ ರಿಚಾ ಪರಾಶರ್ ಆರೋಪಿಸಿದ್ದಾರೆ. ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವ ಅವರ ಆರೋಪವನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಇದು ಬಿಜೆಪಿ ಸೃಷ್ಟಿಸಿರುವ ಪ್ರಚಾರ ತಂತ್ರ ಎಂದು ಹೇಳಿದೆ.
ಸಂಗ್ರಹ ಚಿತ್ರ -
ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ಇತ್ತೀಚೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ನಡೆಸಿದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಕೈಯನ್ನು ಬಲವಾಗಿ ಎಳೆದು ತಳ್ಳಿದರು ಎಂದು ಮೂರು ತಿಂಗಳ ಗರ್ಭಿಣಿಯಾಗಿರುವ (Pregnant Journalist) ಪತ್ರಕರ್ತೆ ರಿಚಾ ಪರಾಶರ್ (journalist Richa Parashar) ಆರೋಪಿಸಿದ್ದಾರೆ. ಘಟನೆ ಬಳಿಕ ದೆಹಲಿಯ (delhi) ಆಸ್ಪತ್ರೆಗೆ ದಾಖಲಾಗಿರುವ ಅವರು, ರಾಹುಲ್ ಗಾಂಧಿ ಅವರ ಬೆಂಬಲಿಗರು ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು, ತಾವು ಅನುಭವಿಸಿರುವ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಲು ಪ್ರಯತ್ನಿಸುತ್ತಿರುವುದು ತಮಗೆ ತೀವ್ರ ಬೇಸರ ತಂದಿದೆ ಎಂದು ಹೇಳಿದ್ದಾರೆ. ಆದರೆ ರಿಚಾ ಪರಾಶರ್ ಅವರ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.
ತಮ್ಮ ಆರೋಗ್ಯದ ಬಗ್ಗೆ ವಿಚಾರಿಸಲು ಬಂದಿದ್ದ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ರಿಚಾ, ಇದು ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿದ ವಿಷಯವಲ್ಲ. ನಾನು ನನ್ನ ಕೆಲಸವನ್ನು ಮಾಡುತ್ತಿರುವ ಒಬ್ಬ ಸಾಮಾನ್ಯ ಪ್ರಜೆ ಅಷ್ಟೇ. ಜನರು ಆಡುತ್ತಿರುವ ಕೆಲವು ಮಾತುಗಳು ಅತ್ಯಂತ ದುರದೃಷ್ಟಕರ ಎಂದರು.
ಜಂತರ್ ಮಂತರ್ ಗೇಟ್ ಹಾರಿ ಪ್ರತಿಭಟನೆಗೆ ಯತ್ನಿಸಿದ ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾ: ಮತ್ತೆ ಪೊಲೀಸ್ ವಶಕ್ಕೆ
ರಾಹುಲ್ ಗಾಂಧಿ ತಮ್ಮ ಕೈಯನ್ನು ಹಿಡಿದು ಬಲವಾಗಿ ಎಳೆದರು. ಇದರಿಂದಾಗಿ ತಾವು ನೆಲದ ಮೇಲೆ ಬಿದ್ದಿದ್ದು, ತಮ್ಮ ಮೊಣಕಾಲು ಮತ್ತು ಹೊಟ್ಟೆ ನೆಲಕ್ಕೆ ಬಡಿದಂತಾಗಿದೆ. ಕಾಂಗ್ರೆಸ್ ಸಂಸದರು ತಮ್ಮ ಕ್ಯಾಮೆರಾಮನ್ ಅವರನ್ನು ಕೂಡ ತಳ್ಳಿದರು. ಹೀಗಾಗಿ ಅವರು ನನ್ನ ಮೇಲೆ ಬಿದ್ದರು. ಅವರ ಬಳಿಕ ಇನ್ನೂ ನಾಲ್ಕೈದು ಮಂದಿ ಬಿದ್ದರು ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ಆವರಣದೊಳಗೆ ಗೇಟ್ ಬಳಿ ನಿಂತು ರಾಹುಲ್ ಗಾಂಧಿ ಅವರಿಂದ ಪ್ರತಿಕ್ರಿಯೆ ಪಡೆಯಲು ನಾವು ಕಾಯುತ್ತಿದ್ದೆವು. ನಾನು ಮೈಕ್ ಮುಂದಕ್ಕೆ ಚಾಚಿದೆ. ಆದರೆ ಅವರು ದೂರ ಸರಿಸುವಂತೆ ಸನ್ನೆ ಮಾಡಿದರು. ಹಾಗಾಗಿ ನಾನು ಹಾಗೆಯೇ ಮಾಡಿದೆ. ಇದರ ಬಳಿಕ ಇತರರು ಮೈಕ್‌ಗಳನ್ನು ಮುಂದಕ್ಕೆ ತರುವುದನ್ನು ನಾನು ಕಂಡೆ. ನನ್ನ ಕೆಲಸದ ಭಾಗವಾಗಿದ್ದರಿಂದ ನಾನು ಮತ್ತೆ ನನ್ನ ಮೈಕ್ ಅನ್ನು ಮುಂದಕ್ಕೆ ತಂದೆ. ಏನಾಗುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ಮುನ್ನವೇ ರಾಹುಲ್ ಗಾಂಧಿ ಅಸಮಾಧಾನದ ಭಾವನೆಯೊಂದಿಗೆ ನನ್ನ ಕೈಯನ್ನು ಹಿಡಿದೆಳೆದರು. ಅವರ ಅಂಗರಕ್ಷಕರು ನನ್ನನ್ನು ತಳ್ಳಿದರು ಎಂದರು.
कुछ तो शर्म करो अंधभक्तों- एक्स-रे और पोस्टमार्टम की ज़रूरत तो भाजपिल्लों तुम को है - 1st: Protest during pregnancy carries risk. 2nd: They say Rahul Gandhi pushed her at 3-4 PM & then say she went to hospital at 8:30 PM. 3rd: Her sister reached BJP MLA's office to manufacture propaganda. 4th: She underwent “X-ray” which is usually not done during pregnancy.
— Alka Lamba 🇮🇳 (@LambaAlka) October 13, 2026
ಸುಪ್ರೀಂ ಕೋರ್ಟ್ ಪ್ರವೇಶದ್ವಾರದಲ್ಲಿ ಕೆಲವು ಮೆಟ್ಟಿಲುಗಳಿವೆ. ನಾನು ಅವುಗಳ ಮೇಲೆ ಬಿದ್ದೆ ಎಂದಿರುವ ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಇದಕ್ಕೆ ಪ್ರತಿಕ್ರಿಯಿಸಿ, ಆ ವಿಡಿಯೊದಲ್ಲಿ ಅವರು ಹೇಳಿಕೊಂಡ ಘಟನೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಲ್ಯಾಂಡ್‌ಮೈನ್ ಸ್ಫೋಟ: ಲಷ್ಕರ್ ಕಮಾಂಡರ್ ಸೇರಿ ನಾಲ್ವರು ಉಗ್ರರು ಹತ
ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರುಅವರು ಪ್ರತಿಕ್ರಿಯಿಸಿ ಗರ್ಭಾವಸ್ಥೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ. ರಾಹುಲ್ ಗಾಂಧಿ ಮಧ್ಯಾಹ್ನ 3- 4 ಗಂಟೆಗೆ ಆಕೆಯನ್ನು ತಳ್ಳಿದರು ಎಂದು ಹೇಳುತ್ತಾರೆ. ಆದರೆ ಆಕೆ ರಾತ್ರಿ 8.30ಕ್ಕೆ ಆಸ್ಪತ್ರೆಗೆ ಹೋಗಿದ್ದಾಳೆ. ಪ್ರಚಾರದ ಗಿಮಿಕ್ ಸೃಷ್ಟಿಸಲು ಆಕೆಯ ಸಹೋದರಿ ಬಿಜೆಪಿ ಶಾಸಕರ ಕಚೇರಿಗೆ ತೆರಳಿದರು. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಾಡದ ಎಕ್ಸ್-ರೇ ಪರೀಕ್ಷೆಯನ್ನು ಆಕೆ ಮಾಡಿಸಿಕೊಂಡರು. ರಾಹುಲ್ ಗಾಂಧಿ ಅವರನ್ನು ಪತ್ರಕರ್ತರು ಸುತ್ತುವರಿದಿದ್ದ ಕ್ಷಣದ ಯಾವುದೇ ದೃಶ್ಯಗಳಲ್ಲಿ ಕಾಂಗ್ರೆಸ್ ನಾಯಕ ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ್ದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.