ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ- ಬಾಂಗ್ಲಾದೇಶ ಗಡಿ ಬೇಲಿ ನಿರ್ಮಾಣಕ್ಕೆ 142.79 ಎಕರೆ ಭೂಮಿ ಬಿಎಸ್‌ಎಫ್‌ಗೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

ಭಾರತ ಮತ್ತು ಬಾಂಗ್ಲಾದೇಶದ ಬಳಿ ಗಡಿ ಬೇಲಿ ನಿರ್ಮಾಣಕ್ಕೆ ಒಟ್ಟು 142.79 ಎಕರೆ ಭೂಮಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ಬಿಎಸ್‌ಎಫ್‌ಗೆ ಹಸ್ತಾಂತರಿಸಿದೆ. ವಿಧಾನ ಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮೇ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಡಿ ಬೇಲಿಗಾಗಿ 45 ದಿನಗಳಲ್ಲಿ 600 ಎಕರೆ ಭೂಮಿಯನ್ನು ಬಿಎಸ್‌ಎಫ್‌ಗೆ ನೀಡಲು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಇದರ ಭಾಗಾವಾಗಿ ಎರಡನೇ ಹಂತದಲ್ಲಿ ಒಟ್ಟು 142.79 ಎಕರೆ ಭೂಮಿ ಹಸ್ತಾಂತರ ಮಾಡಲಾಗಿದೆ.

ಗಡಿ ಬೇಲಿಗಾಗಿ ಬಿಎಸ್‌ಎಫ್‌ಗೆ ಒಟ್ಟು 142.79 ಎಕರೆ ಭೂಮಿ ಹಸ್ತಾಂತರ

ಸಂಗ್ರಹ ಚಿತ್ರ -

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (west bengal) ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಆರಂಭದಲ್ಲೇ ಗಡಿ ಬೇಲಿಗೆ ಪ್ರಾಧಾನ್ಯತೆ ನೀಡಿದೆ. ವಿಧಾನ ಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ (CM Suvendu Adhikari) ಅವರ ನೇತೃತ್ವದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗಡಿ ಬೇಲಿಗಾಗಿ 45 ದಿನಗಳಲ್ಲಿ 600 ಎಕರೆ ಭೂಮಿಯನ್ನು ಬಿಎಸ್‌ಎಫ್‌ಗೆ (Border Security Force) ನೀಡಲು ಬಿಜೆಪಿ (BJP) ಸರ್ಕಾರ ನಿರ್ಧರಿಸಿತ್ತು. ಇದರ ಭಾಗಾವಾಗಿ ಈಗ ಒಟ್ಟು 142.79 ಎಕರೆ ಭೂಮಿ ಹಸ್ತಾಂತರ ಮಾಡಲಾಗಿದೆ.

ಈ ಕುರಿತು ಬುಧವಾರ ತಡರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಕಳೆದ ಮೇ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಡಿ ಬೇಲಿಗಾಗಿ 45 ದಿನಗಳಲ್ಲಿ 600 ಎಕರೆ ಭೂಮಿಯನ್ನು ವರ್ಗಾಯಿಸಲು ತೆಗೆದುಕೊಂಡ ನಿರ್ಧಾರದ ಭಾಗವಾಗಿ ಒಟ್ಟು 142.79 ಎಕರೆ ಭೂಮಿಯನ್ನು ಬಿಎಸ್‌ಎಫ್‌ಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಕ್ರೀದ್‌ಗೆ ಬಲಿ ಕೊಡದೆ ಬಾಂಗ್ಲಾದೇಶ ಮೃಗಾಲಯಕ್ಕೆ "ಡೊನಾಲ್ಡ್ ಟ್ರಂಪ್" ಸ್ಥಳಾಂತರ!

ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಔಟ್‌ಪೋಸ್ಟ್‌ಗಳು, ಮುಳ್ಳುತಂತಿ ಬೇಲಿ ಮೂಲಸೌಕರ್ಯವನ್ನು ಸ್ಥಾಪಿಸಲು ಪಶ್ಚಿಮ ಬಂಗಾಳ ಸರ್ಕಾರವು ಈ ಭೂಮಿಯನ್ನು ಹಸ್ತಾಂತರ ಮಾಡಿದೆ. ಮುಂದಿನ ಯೋಜನೆಗಳಿಗಾಗಿ 45 ದಿನಗಳಲ್ಲಿ ಒಟ್ಟು 600 ಎಕರೆ ಭೂಮಿಯನ್ನು ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಮೂಲಕ ಗಡಿ ಭದ್ರತೆಯನ್ನು ಬಲಪಡಿಸಲು ತೀವ್ರ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಹೇಳಿರುವ ಅವರು ಒಂಬತ್ತು ಜಿಲ್ಲೆಗಳಲ್ಲಿ ಬಿಎಸ್‌ಎಫ್‌ಗೆ ವರ್ಗಾಯಿಸಲಾದ ಭೂಮಿಯನ್ನು ವಿವರಿಸುವ ಜಿಲ್ಲಾವಾರು ನಕ್ಷೆಯನ್ನು ಕೂಡ ಬಿಡುಗಡೆ ಮಾಡಿದ್ದಾರೆ.



ನಕ್ಷೆಯ ಪ್ರಕಾರ ಕೂಚ್‌ಬೆಹಾರ್‌ನಲ್ಲಿ 22.92 ಎಕರೆ, ಜಲ್‌ಪೈಗುರಿಯಲ್ಲಿ 35.16 ಎಕರೆ, ಡಾರ್ಜಿಲಿಂಗ್‌ನಲ್ಲಿ 8.81 ಎಕರೆ, ಉತ್ತರ ದಿನಾಜ್‌ಪುರದಲ್ಲಿ 2.84 ಎಕರೆ ಮತ್ತು ದಕ್ಷಿಣ ದಿನಾಜ್‌ಪುರದಲ್ಲಿ 20.17 ಎಕರೆ, ಹೆಚ್ಚುವರಿಯಾಗಿ ಮಾಲ್ಡಾದಲ್ಲಿ 10.9 ಎಕರೆ, ಮುರ್ಷಿದಾಬಾದ್‌ನಲ್ಲಿ 38.8 ಎಕರೆ, ನಾಡಿಯಾದಲ್ಲಿ 0.55 ಎಕರೆ ಮತ್ತು ಉತ್ತರ 24 ಪರಗಣಗಳಲ್ಲಿ 2.6 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಮೊದಲ ಹಂತದ ಭಾಗವಾಗಿ, ಐದು ಜಿಲ್ಲೆಗಳಲ್ಲಿ ಖರೀದಿಸಿದ 43 ಎಕರೆ ಭೂಮಿ ಮತ್ತು 31.9 ಎಕರೆ ಸ್ಥಾಪಿತ ಭೂಮಿಗೆ ಮಂಜೂರಾತಿ ಆದೇಶಗಳನ್ನು ಮೇ 20ರಂದು ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು.

ಸಂಸದೆಯಾದ ಮೇಲೂ ಚಿತ್ರರಂಗದಲ್ಲಿ ಕಂಗನಾ ರಣಾವತ್‌ ಸಕ್ರಿಯ; 'ಭಾರತ್ ಭಾಗ್ಯ ವಿಧಾತಾ' ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್

ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ 2,217 ಕಿ.ಮೀ. ಗಡಿಯನ್ನು ಹಂಚಿಕೊಂಡಿದ್ದು, ಇದು ಭಾರತೀಯ ರಾಜ್ಯಗಳಲ್ಲಿ ಅತಿ ಉದ್ದವಾದ ಗಡಿ ಭಾಗವಾಗಿದೆ. ಈಗಾಗಲೇ ಸುಮಾರು 1,600 ಕಿಮೀ ಗಡಿ ಭಾಗದಲ್ಲಿ ಬೇಲಿ ಹಾಕಲಾಗಿದ್ದು, ಇನ್ನು 600 ಕಿ.ಮೀ. ಬೇಲಿ ಹಾಕುವುದು ಬಾಕಿ ಇದೆ.