ಗಡಿಯಾಚೆಗಿನ ಒಳನುಸುಳುವಿಕೆ: ಪಾಕಿಸ್ತಾನಿ ರಾಜತಾಂತ್ರಿಕರಿಗೆ ಸಮನ್ಸ್ ಜಾರಿಗೊಳಿಸಿದ ಭಾರತ
ಪದೇಪದೇ ಎಚ್ಚರಿಕೆ ನೀಡಿದರೂ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಶಂಕಿತ ಪಾಕಿಸ್ತಾನಿ ನುಸುಳುಕೋರರ ಮೇಲೆ ಭಾರತೀಯ ಗಡಿ ಭದ್ರತಾ ಪಡೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಪಾಕಿಸ್ತಾನಿ ರಾಜತಾಂತ್ರಿಕರಿಗೆ ಭಾರತ ಸಮನ್ಸ್ ಜಾರಿಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಪಂಜಾಬ್‌ನಲ್ಲಿ (Punjab) ಗಡಿಯಾಚೆಗಿನ ಒಳನುಸುಳುವಿಕೆ ಕುರಿತು ಪಾಕಿಸ್ತಾನದ ರಾಜತಾಂತ್ರಿಕರಿಗೆ (Pakistani Diplomat) ಭಾರತ ಶನಿವಾರ ಸಮನ್ಸ್ (summons) ಜಾರಿಗೊಳಿಸಿದೆ. ಈ ಕುರಿತು ಶನಿವಾರ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ (Ministry of External Affairs), ಪದೇ ಪದೇ ಎಚ್ಚರಿಕೆಗಳನ್ನು ನೀಡಿದ ಮೇಲೆ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಶಂಕಿತ ಪಾಕಿಸ್ತಾನಿ ನುಸುಳುಕೋರರ ಮೇಲೆ ಬಿಎಸ್‌ಎಫ್ ಪಡೆಗಳು (Border Security Force) ಗುಂಡು ಹಾರಿಸಿದ ಒಂದು ದಿನದ ನಂತರ ಸಮನ್ಸ್ ಜಾರಿಗೊಳಿಸಲಾಗಿದೆ. ಆದರೆ ಇದನ್ನು ಆಧಾರ ರಹಿತ ಆರೋಪ ಎಂದು ಹೇಳಿರುವ ಪಾಕಿಸ್ತಾನ ಈ ಹೇಳಿಕೆಯನ್ನು ತಿರಸ್ಕರಿಸಿದೆ.
ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿ ಬಳಿ ಶಂಕಿತ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ವಿದೇಶಾಂಗ ಸಚಿವಾಲಯ ಶನಿವಾರ ಪಾಕಿಸ್ತಾನದ ಚಾರ್ಜ್ ಡಿ'ಅಫೇರ್ಸ್‌ಗೆ ಸಮನ್ಸ್ ಜಾರಿ ಮಾಡಿದೆ. ಗಡಿಯಾಚೆಗಿನ ಅಕ್ರಮ ಒಳನುಸುಳುವಿಕೆ ನಿರಂತರವಾಗಿ ಪಾಕಿಸ್ತಾನ ಸಹಾಯ ಮಾಡುತ್ತಿರುವುದಕ್ಕೆ ಈ ಮೂಲಕ ವಿರೋಧ ವ್ಯಕ್ತಪಡಿಸಿದೆ.
ಕಾಕ್‌ಪಿಟ್‌ನಲ್ಲಿ ನಡೆದಿದ್ದು ಏನು? ಇಸ್ರೇಲ್ ಪ್ರಧಾನಿಗೆ ಸ್ಮಿತ್ ಮಚ್ಚಾರ್ ವಿವರಿಸಿದ ಆ ಭಯಾನಕ ಅನುಭವ ಹೇಗಿತ್ತು?
ಪಂಜಾಬ್‌ನ ತರನ್ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಶಂಕಿತ ಪಾಕಿಸ್ತಾನಿ ನುಸುಳುಕೋರರನ್ನು ಪದೇ ಪದೇ ಹಿಂದಿರುಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಎಚ್ಚರಿಕೆಯನ್ನು ನಿರ್ಲಕ್ಷಿಸಿ ಒಳ ನುಸುಳಲು ಪ್ರಯತ್ನಿಸಿದ್ದರಿಂದ ಬಿಎಸ್‌ಎಫ್ ಪಡೆಗಳು ಅವರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಎಸ್‌ಎಫ್ ಸೆಂಟ್ರಿ, ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ತಮ್ಮ ಮೇಲೆ ಗುಂಡು ಹಾರಿಸುವಂತೆ ಸೈನಿಕರಿಗೆ ಪ್ರಚೋದನೆ ನೀಡುತ್ತಿದ್ದರು. ಅವರು ಭಾರತೀಯ ಪ್ರದೇಶದೊಳಗೆ ಒಳನುಗ್ಗಲು ಬಯಸಿದ್ದರು. ಬಿಎಸ್‌ಎಫ್ ಪದೇ ಪದೇ ಎಚ್ಚರಿಕೆ ನೀಡಿದರೂ ಅವರು ಗಡಿ ಬೇಲಿ ದಾಟಿ ಬರಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಅವರನ್ನು ತಡೆಯಲು ಅವರೊಂದಿಗೆ ಹೋರಾಡುವುದು ಭಾರತೀಯ ಪಡೆಗಳಿಗೆ ಅನಿವಾರ್ಯವಾಯಿತು ಎಂದು ತಿಳಿಸಿದೆ.
ಲಖನೌಗೆ ಬಂದಿಳಿದ ದುಬೈಯಿಂದ ಥಾಯ್ಲೆಂಡ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ; ಕಾರಣವೇನು?
ಪಂಜಾಬ್ ಘಟನೆಯು ಪಾಕಿಸ್ತಾನದಿಂದ ಗಡಿಯಾಚೆಗೆ ಸಶಸ್ತ್ರ ಮಾದಕವಸ್ತು ಸಾಗಾಟವನ್ನು ದೃಢಪಡಿಸಿದೆ. ಪಾಕಿಸ್ತಾನ ಇದನ್ನು ನಿರಾಕರಿಸಿದರೂ ಈ ಕುರಿತು ತನಿಖೆ ಮಾಡಿ ಕ್ರಮಗಳನ್ನು ಕೈಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವಾಲಯವು ಇಸ್ಲಾಮಾಬಾದ್ ಅನ್ನು ಸಮನ್ಸ್ ಜಾರಿಗೊಳಿಸುವ ಮೂಲಕ ಒತ್ತಾಯಿಸಿದೆ.