ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿದ ಮಳೆ-ಗಾಳಿ: ಒಂದೇ ತಿಂಗಳಲ್ಲಿ 157 ಮಂದಿ ಸಾವು, 260 ರಸ್ತೆ ಸಂಪರ್ಕ ಕಡಿತ

ಕೇವಲ ಒಂದೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಗಾಳಿ, ಭೂಕುಸಿತದಿಂದಾಗಿ 157 ಮಂದಿ ಸಾವನ್ನಪ್ಪಿದ್ದು, 260 ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ಸುಮಾರು 900 ಆಸ್ತಿಗಳಿಗೆ ಹಾನಿಯಾಗಿದೆ. ಇಲ್ಲಿ ಇನ್ನಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಹಿಮಾಚಲ ಪ್ರದೇಶದಲ್ಲಿ ಮಳೆ ಗಾಳಿಗೆ ತಿಂಗಳಲ್ಲಿ 157 ಬಲಿ

ಸಂಗ್ರಹ ಚಿತ್ರ -

ಹಿಮಾಚಲ ಪ್ರದೇಶ: ಭಾರಿ ಮಳೆಯಿಂದಾಗಿ (Heavy Rain) ಹಿಮಾಚಲ ಪ್ರದೇಶದಲ್ಲಿ (Himachal Pradesh) ಅಪಾರ ಹಾನಿಯಾಗಿದೆ. ಕೇವಲ ಒಂದು ತಿಂಗಳಲ್ಲಿ ಉಂಟಾದ ಗಾಳಿ, ಮಳೆ, ಭೂಕುಸಿತದಿಂದ (Landslide) 157 ಮಂದಿ ಸಾವನ್ನಪ್ಪಿದ್ದು, 260 ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ಸುಮಾರು 900 ಆಸ್ತಿಗಳಿಗೆ ಹಾನಿಯಾಗಿದೆ. ಗಾಳಿ, ಮಳೆ ಮುಂದುವರಿದಿದ್ದು, ಹಾನಿ ಇನ್ನಷ್ಟು ಹೆಚ್ಚಾಗುವ ಅಪಾಯವಿದೆ. ಈವರೆಗೆ ಆಗಿರುವ ನಷ್ಟದ ಪ್ರಮಾಣ ಸುಮಾರು 886 ಕೋಟಿ ರೂ. ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (State Emergency Operations Centre) ತಿಳಿಸಿದೆ.

ಕಳೆದ ಜೂನ್ 30 ರಿಂದ ಆಗಸ್ಟ್ 9 ರವರೆಗಿನ ಅವಧಿಯಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಸುಮಾರು 68 ಮಂದಿ, ರಸ್ತೆ ಅಪಘಾತಗಳಲ್ಲಿ 89 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 257 ಮಂದಿ ನಾಪತ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕಿತ್ತಳೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ.

ಹೊತ್ತಿ ಉರಿದ ಶಾಲಾ ಬಸ್: ಕೂದಲೆಳೆ ಅಂತರದಲ್ಲಿ 17 ಮಕ್ಕಳು ಪಾರು

ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಕುಲ್ಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಮಂಡಿಯಲ್ಲಿ 77, ಶಿಮ್ಲಾದಲ್ಲಿ 43 ಮತ್ತು ಕುಲ್ಲುವಿನಲ್ಲಿ 40 ಸೇರಿದಂತೆ ಕಳೆದ ಸುಮಾರು ಒಂದು ವಾರದಿಂದ 161 ವಿತರಣಾ ಟ್ರಾನ್ಸ್‌ಫಾರ್ಮರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ನದಿ, ನೀರಿನ ಮಟ್ಟ ಹಠಾತ್ ಏರಿಕೆಯಾಗಿದೆ.ಕುಲ್ಲುವಿನಾದ್ಯಂತ ಪರ್ವತಗಳ ಕೆಳಗೆ ಶಿಲಾಖಂಡರಾಶಿಗಳು ಬಂದು ಬಿದ್ದಿವೆ. ವಾಹನಗಳು, ತಾತ್ಕಾಲಿಕ ಸೇತುವೆಗಳನ್ನು ಅಲ್ಲಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಭೂಕುಸಿತದಿಂದಾಗಿ ಮಂಡಿ-ಕುಲ್ಲು ಹೆದ್ದಾರಿ ಸೇರಿದಂತೆ ಮಂಡಿಯಲ್ಲಿ 120, ಚಂಬಾದಲ್ಲಿ 42, ಕುಲ್ಲುವಿನಲ್ಲಿ 40 ಮತ್ತು ಶಿಮ್ಲಾ 30 ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಗಳನ್ನು ಮತ್ತೆ ತೆರೆಯಲು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹೊಸ ಭೂಕುಸಿತಗಳು ಮತ್ತು ಭಾರೀ ಮಳೆಯು ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಠಾತ್ ಪ್ರವಾಹ: ಸೇತುವೆ ಮುರಿದು ಕೊಚ್ಚಿ ಹೋದ ಬಿಆರ್‌ಒ ಚಾಲಕ; ಇಲ್ಲಿದೆ ನೋಡಿ ಭಯಾನಕ ವಿಡಿಯೊ

ಹಿಮಾಚಲ ಪ್ರದೇಶದಾದ್ಯಂತ ಕುಡಿಯುವ ನೀರಿನ ಸರಬರಾಜಿನಲ್ಲಿಯೂ ಅಡ್ಡಿಯಾಗಿದ್ದು, 54 ನೀರು ಸರಬರಾಜು ಯೋಜನೆಗಳಿಗೆ ತೊಂದರೆಯಾಗಿದೆ. ಶಿಮ್ಲಾದಲ್ಲಿ ಅತಿ ಹೆಚ್ಚು 33 ಯೋಜನೆಗಳು ಮತ್ತು ಚಂಬಾದಲ್ಲಿ 16, ಹಮೀರ್‌ಪುರದಲ್ಲಿ ಐದು ಯೋಜನೆಗಳಿಗೆ ಅಡ್ಡಿಯಾಗಿದೆ.