ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋನಂ ವಾಂಗ್ಚುಕ್‌ ಅನುಪಸ್ಥಿತಿಯಲ್ಲಿ ಪತ್ನಿ ಗೀತಾಂಜಲಿ ನೇತೃತ್ವದಲ್ಲಿ ಜುಲೈ 20ರಂದು ಸಂಸತ್ತಿನತ್ತ ನಡಿಗೆ; ಹೋರಾಟ ಯಾವ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಘೋಷಣೆ

ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ 20 ದಿನಗಳಿಂದ ಉಪವಾಸದಲ್ಲಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅವರ ಪತ್ನಿ ಗೀತಾಂಜಲಿ ಸುದ್ದಿಗಾರರೊಂದಿಗೆ ಮಾತನಾಡಿ ಸೋನಮ್ ವಾಂಗ್‌ಚುಕ್ ಅವರಿಗೆ ಸಾಧ್ಯವಾಗದೇ ಇದ್ದರೆ ಜುಲೈ 20ರಂದು ಸಂಸತ್ತಿಗೆ ನಡೆಯುವ ಮೆರವಣಿಗೆಯನ್ನು ತಾವು ಮುನ್ನಡೆಸುವುದಾಗಿ ಹೇಳಿದ್ದಾರೆ.

ಸಂಸತ್ತಿನತ್ತ ಮೆರವಣಿಗೆ ನಾನು ಮುನ್ನಡೆಸುತ್ತೇನೆ: ಸೋನಮ್ ಪತ್ನಿ ಗೀತಾಂಜಲಿ

ಸಂಗ್ರಹ ಚಿತ್ರ -

ನವದೆಹಲಿ: ಹವಾಮಾನ ಕಾರ್ಯಕರ್ತ, ಶಿಕ್ಷಕ ಮತ್ತು ಸಾಮಾಜಿಕ ಹೋರಾಟಗಾರ (Activist) ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಈಗ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಮುಂದೆ ಬಂದಿದ್ದಾರೆ. ಸೋನಮ್ ಅವರಿಗೆ ಸಾಧ್ಯವಾಗದೇ ಇದ್ದರೆ ಜುಲೈ 20ರಂದು ಸಂಸತ್ತಿಗೆ ನಡೆಯುವ ಮೆರವಣಿಗೆಯನ್ನು ತಾವು ಮುನ್ನಡೆಸುವುದಾಗಿ ಹೇಳಿದ್ದಾರೆ. ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಂಗ್‌ಚುಕ್ ಅವರನ್ನು ಜಂತರ್ ಮಂತರ್‌ನಿಂದ ಅವರ ಒಪ್ಪಿಗೆಯಿಲ್ಲದೆ ಸಫ್ದರ್ಜಂಗ್ ಆಸ್ಪತ್ರೆಗೆ (Safdarjung hospital) ಕರೆತರಲಾಗಿದೆ ಎಂದರು.

ನೀಟ್ ಪತ್ರಿಕೆ ಸೋರಿಕೆ ಸಂಬಂಧಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷಕ್ಕೆ ಬೆಂಬಲ ನೀಡಿ ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಅವರನ್ನು ಶನಿವಾರ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

20 ದಿನಗಳಿಂದ ಉಪವಾಸದಲ್ಲಿರುವ ಸೋನಮ್ ವಾಂಗ್‌ಚುಕ್ ಆಸ್ಪತ್ರೆಗೆ ದಾಖಲು

ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ, ಸೋನಮ್ ಅವರು ಇನ್ನೂ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ. ಜುಲೈ 20 ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಸಾಧ್ಯವಾಗದಿದ್ದರೆ ತಾನು ಮೆರವಣಿಗೆಯನ್ನು ಮುನ್ನಡೆಸುವುದಾಗಿ ಹೇಳಿದರು.

ಸಂಸತ್ತಿಗೆ ಮೆರವಣಿಗೆ ಖಂಡಿತ ನಡೆಯುತ್ತದೆ. ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದ ಮಾತ್ರಕ್ಕೆ ಮೆರವಣಿಗೆ ನಿಲ್ಲುವುದಿಲ್ಲ. ಅವರನ್ನು ಜಂತರ್ ಮಂತರ್ ಸ್ಥಳದಿಂದ ನನಗೆ ತಿಳಿಸದೆ ಆಸ್ಪತ್ರೆಗೆ ಕರೆತರಲಾಗಿದೆ. ಶುಕ್ರವಾರ ಸಂಜೆ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಅವರನ್ನು ಪರೀಕ್ಷಿಸಿದ್ದರು. ಅವರ ಆರೋಗ್ಯ ಸ್ಥಿರವಾಗಿತ್ತು. ಆದರೆ ಈಗ ಪೊಟ್ಯಾಸಿಯಮ್ ಕಡಿಮೆಯಾಗಿದೆ. ಇದು ಜೀವಕ್ಕೆ ಅಪಾಯಕಾರಿ ಎನ್ನುತ್ತಿದ್ದಾರೆ. ಆಸ್ಪತ್ರೆಯವರು ಈ ಕುರಿತಾದ ವರದಿಯನ್ನು ನಮಗೆ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಜುಲೈ 20 ರಂದು ಸೋನಮ್ ಮೆರವಣಿಗೆಯಲ್ಲಿ ಸೇರಲು ಸಾಧ್ಯವಾಗದಿದ್ದರೂ ನಾನು ಅವರನ್ನು ಪ್ರತಿನಿಧಿಸುತ್ತೇನೆ. ಅದು ಯೋಜಿಸಿದಂತೆ ನಡೆಯುತ್ತದೆ. ಅವರ ಬಲವಂತವಾಗಿ ಆಸ್ಪತ್ರೆಗೆ ಸೇರಿಸಿರುವುದು ಮೆರವಣಿಗೆ ನಿಲ್ಲಸಬಹುದು ಎನ್ನುವ ಉದ್ದೇಶದಿಂದ ಎಂದು ಅವರು ಹೇಳಿದರು.

ಸೋನಮ್ ವಾಂಗ್‌ಚುಕ್ ಅವರು ಎಲೆಕ್ಟ್ರೋಲೈಟ್ ಪೌಡರ್ ನಿರಾಕರಿಸಿದ್ದಾರೆ. ಅವರು ತಮ್ಮ ಉಪವಾಸವನ್ನು ಮುಂದುವರೆಸಿದ್ದಾರೆ. ದೆಹಲಿ ಹೈಕೋರ್ಟ್ ನಿಯಮಿತವಾಗಿ ಅವರ ಆರೋಗ್ಯ ಮೇಲ್ವಿಚಾರಣೆ ಮಾಡಲು ನಿರ್ದೇಶನ ನೀಡಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಲು ಆದೇಶಿಸಿಲ್ಲ ಎಂದು ಅವರು ತಿಳಿಸಿದರು.

ಸೋನಮ್ ವಾಂಗ್‌ಚುಕ್ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಚಾರು ಬಾಂಬಾ ಅವರು ಹೇಳಿಕೆ ನೀಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ದೀರ್ಘಕಾಲದ ಉಪವಾಸದಿಂದಾಗಿ ನಿರ್ಜಲೀಕರಣ ಮತ್ತು ದೌರ್ಬಲ್ಯ ಕಾಡುತ್ತಿದೆ. ಅವರನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿದೆ ಮತ್ತು ಚಿಕಿತ್ಸೆ ನಡೆಯುತ್ತಿದೆ ಎಂದು ಹೇಳಿದರು.

ಸೋನಂ ವಾಂಗ್ಚುಕ್‌ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಜೆಪಿ ಸ್ಥಾಪಕ ಅಭಿಜಿತ್‌ ದೀಪ್ಕೆ; ಮುಂದುವರಿದ ಹೋರಾಟ

ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸರು ಸ್ಥಳದಿಂದ ಕರೆದುಕೊಂಡು ಹೋದ ಬಳಿಕ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.