ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧುಮೇಹಿಗಳಿಗೆ ಗುಡ್‌ನ್ಯೂಸ್‌; ಅಗ್ಗದ ದರದ ಸೆಮಾಗ್ಲುಟೈಡ್ ಇಂಜೆಕ್ಷನ್‌ ಬಿಡುಗಡೆ

ಭಾರತೀಯ ಔಷಧ ಕಂಪನಿಗಳು ಸೆಮಾಗ್ಲುಟೈಡ್ ಜೆನೆರಿಕ್ ಇಂಜೆಕ್ಷನ್‌ಗಳನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ತಂದಿವೆ. ಟೈಪ್ 2 ಮಧುಮೇಹ ಮತ್ತು ತೂಕ ನಿಯಂತ್ರಣಕ್ಕೆ ಪರಿಣಾಮಕಾರಿ ಎನ್ನಲಾದ ಈ ಔಷಧಗಳು ಈಗ ಸಾಮಾನ್ಯ ಜನರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿವೆ. ಪೇಟೆಂಟ್ ಅವಧಿ ಮುಗಿದ ಬಳಿಕ ನ್ಯಾಟ್ಕೊ, ಸನ್ ಫಾರ್ಮಾ, ಜೈಡಸ್ ಮತ್ತು ಡಾ. ರೆಡ್ಡೀಸ್ ಕಂಪನಿಗಳು ವಿಭಿನ್ನ ಬ್ರ್ಯಾಂಡ್‌ಗಳಲ್ಲಿ ಬಿಡುಗಡೆ ಮಾಡಿವೆ.

ಮಧುಮೇಹಿಗಳಿಗೆ ಸಿಹಿ ಸುದ್ದಿ; ಅಗ್ಗದ ಇಂಜೆಕ್ಷನ್ ಬಿಡುಗಡೆ

ಎಐ ಚಿತ್ರ -

Profile
Sushmitha Jain Mar 21, 2026 10:54 PM

ನವದೆಹಲಿ, ಮಾ. 21: ಭಾರತದ ಪ್ರಮುಖ ಔಷಧೀಯ ಕಂಪನಿಗಳು ಸೆಮಾಗ್ಲುಟೈಡ್ (Semaglutide) ಇಂಜೆಕ್ಷನ್‌ನ ಜೆನೆರಿಕ್ ಆವೃತ್ತಿಗಳನ್ನು (Generic versions of semaglutide injections) ಮಾರುಕಟ್ಟೆಗೆ ಪರಿಚಯಿಸಿವೆ. ಈ ಔಷಧದ ಪೇಟೆಂಟ್ ಅವಧಿ ಮುಗಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಈಗ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ.

ಹೈದರಾಬಾದ್ ಮೂಲದ ನ್ಯಾಟ್ಕೊ ಫಾರ್ಮಾ (Natco Pharma) ತಿಂಗಳಿಗೆ ಕೇವಲ 1,290 ರೂಪಾಯಿ ದರದಲ್ಲಿ ಈ ಇಂಜೆಕ್ಷನ್ ಬಿಡುಗಡೆ ಮಾಡಿದ ಬೆನ್ನಲ್ಲೇ, ಸನ್ ಫಾರ್ಮಾ, ಜೈಡಸ್ ಲೈಫ್‌ಸೈನ್ಸಸ್ ಮತ್ತು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಕೂಡ ತಮ್ಮದೇ ಆದ ಜೆನೆರಿಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ತಂದಿವೆ.

ಅಗ್ಗದ ದರದ ಔಷಧ:



ಯಾವ ಕಂಪನಿಯಿಂದ ಎಷ್ಟು ದರ?

ಸನ್ ಫಾರ್ಮಾ: 'ನೊವೆಲ್‌ಟ್ರೀಟ್' (ತೂಕ ನಿರ್ವಹಣೆಗೆ) ಮತ್ತು 'ಸೆಮಾಟ್ರಿನಿಟಿ' (ಮಧುಮೇಹಕ್ಕೆ) ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಇದರ ವಾರದ ಚಿಕಿತ್ಸಾ ವೆಚ್ಚ ಸುಮಾರು 750 ರಿಂದ 2,000 ರುಪಾಯಿವರೆಗೆ ಇರಲಿದೆ.

ಜೈಡಸ್ ಲೈಫ್‌ಸೈನ್ಸಸ್: ಸೆಮಾಗ್ಲಿನ್, ಮಾಶೆಮಾ ಮತ್ತು ಆಲ್ಟರ್ಮೆ ಎಂಬ ಹೆಸರಿನಲ್ಲಿ ಮಲ್ಟಿ-ಡೋಸ್ ಪೆನ್ನೊಂದಿಗೆ ಬಿಡುಗಡೆ ಮಾಡಿದೆ. ಇದರ ಸರಾಸರಿ ಮಾಸಿಕ ವೆಚ್ಚ 2,200 ರುಪಾಯಿ ಎಂದು ಅಂದಾಜಿಸಲಾಗಿದೆ.

ವೃದ್ಧಾಪ್ಯದಲ್ಲಿ ವ್ಯಾಯಾಮ ಅಗತ್ಯ ಯಾಕೆ?

ಡಾ. ರೆಡ್ಡೀಸ್: 'ಒಬೆಡಾ ಎಂಬ ಹೆಸರಿನಲ್ಲಿ ಭಾರತದ ಮೊದಲ DCGI ಅನುಮೋದಿತ ಜೆನೆರಿಕ್ ಸೆಮಾಗ್ಲುಟೈಡ್ ಅನ್ನು ಬಿಡುಗಡೆ ಮಾಡಿದೆ. ಇದರ ಮಾಸಿಕ ವೆಚ್ಚ 4,200 ರುಪಾಯಿ.

ಭಾರತೀಯ ಔಷಧೋದ್ಯಮದ ಸಾಧನೆ

ಸೆಮಾಗ್ಲುಟೈಡ್ ಇಂಜೆಕ್ಷನ್‌ಗಳು ಜಾಗತಿಕವಾಗಿ ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿವೆ. ಭಾರತದ ಫಾರ್ಮಾ ರಫ್ತು 2024-25ರಲ್ಲಿ ಶೇ. 9.4ರಷ್ಟು ವೃದ್ಧಿಸಿ 30.47 ಬಿಲಿಯನ್ ಡಾಲರ್‌ಗೆ ತಲುಪಿದೆ. ಪ್ರಸ್ತುತ 60 ಬಿಲಿಯನ್ ಡಾಲರ್ ಮೌಲ್ಯದ ಈ ವಲಯವು 2030ರ ವೇಳೆಗೆ 130 ಬಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಔಷಧ ಉತ್ಪಾದಿಸುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, 200ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಈ ಹೊಸ ಜೆನೆರಿಕ್ ಔಷಧಗಳ ಬಿಡುಗಡೆಯು ಸಾಮಾನ್ಯ ಜನರಿಗೆ ದುಬಾರಿ ಚಿಕಿತ್ಸೆಯನ್ನು ಸುಲಭವಾಗಿ ಕೈಗೆಟಕುವಂತೆ ಮಾಡಲಿದೆ.