ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಉಗ್ರರ ರಾಕೆಟ್ ಲಾಂಚರ್‌ ನಾಶಕ್ಕೆ ಜಂಟಿ ಕಾರ್ಯಾಚರಣೆ

Rocket Launchers: ಮಣಿಪುರದಲ್ಲಿ ಬಂಧಿಸಲಾದ ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾಗಿದ್ದ ರಾಕೆಟ್ ಲಾಂಚರ್‌ಗಳು ಸೇರಿ ಶಸ್ತ್ರಾಸ್ತ್ರಗಳನ್ನು ದೆಹಲಿಯ ನರೇಲಾದಲ್ಲಿ ಸೇನೆ, ದೆಹಲಿ ಪೊಲೀಸ್ ವಿಶೇಷ ಘಟಕ ಹಾಗೂ FSL ತಂಡಗಳು ನಿಯಂತ್ರಿತ ರೀತಿಯಲ್ಲಿ ನಾಶಪಡಿಸುತ್ತಿವೆ. ಇದೇ ವೇಳೆ ಮಣಿಪುರದಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಮಂದಿಯನ್ನು ಭದ್ರತಾ ಪಡೆಗಳು ಬಂಧಿಸಿವೆ.

ದೆಹಲಿಯಲ್ಲಿ ರಾಕೆಟ್ ಲಾಂಚರ್‌ಗಳ ನಾಶ

ಸಾಂದರ್ಭಿಕ ಚಿತ್ರ -

Profile
Sushmitha Jain Aug 19, 2026 10:43 PM

ದೆಹಲಿ, ಆ. 19: ಮಣಿಪುರದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ರಾಕೆಟ್ ಲಾಂಚರ್‌ಗಳನ್ನು (Rocket Launchers) ನಾಶಪಡಿಸಲು ದೆಹಲಿಯ ನರೇಲಾದಲ್ಲಿ ಸೇನೆ, ದೆಹಲಿ ಪೊಲೀಸರ ವಿಶೇಷ ಘಟಕ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (Forensic Science Laboratory - FSL) ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ಮಣಿಪುರದಲ್ಲಿ ನಡೆದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಪರಿಶೀಲನೆ ಹಾಗೂ ವಿಲೇವಾರಿಗಾಗಿ ದೆಹಲಿಗೆ ತರಲಾಗಿತ್ತು. ವಶಪಡಿಸಿಕೊಂಡ ವಸ್ತುಗಳಲ್ಲಿ ರೈಫಲ್‌ಗಳು, ನೂರಾರು ಸುತ್ತು ಜೀವಂತ ಗುಂಡುಗಳು, ಡಿಟೊನೇಟರ್‌ಗಳು ಹಾಗೂ ಇತರ ಸ್ಫೋಟಕ ಸಾಮಗ್ರಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ತಂಡಗಳು ಈ ಶಸ್ತ್ರಾಸ್ತ್ರಗಳನ್ನು ನಿಯಂತ್ರಿತ ರೀತಿಯಲ್ಲಿ ನಾಶಪಡಿಸುವ ಕಾರ್ಯ ನಡೆಸುತ್ತಿವೆ. ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶದ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಶಂಕಿತ ಉಗ್ರರನ್ನು ಮಣಿಪುರದ ಯಾವ ಸ್ಥಳದಲ್ಲಿ ಮತ್ತು ಯಾವಾಗ ಬಂಧಿಸಲಾಗಿತ್ತು ಎಂಬ ಬಗ್ಗೆ ವರದಿಯಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಗುಡ್‌ನ್ಯೂಸ್‌; ಉಚಿತ ಆನ್‌ಲೈನ್ ತರಬೇತಿ ನೀಡಲು ಕೇಂದ್ರದಿಂದ ಸಿದ್ಧತೆ

ಇದರ ನಡುವೆ ಆಗಸ್ಟ್‌ 16ರಂದು ಮಣಿಪುರದ ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ ಆರು ಮಂದಿಯನ್ನು ಭದ್ರತಾ ಪಡೆಗಳು ಬಂಧಿಸಿದ್ದಾಗಿ ವರದಿಯಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಏಪ್ರಿಲ್ 7ರಂದು ನಡೆದ ಐಇಡಿ ದಾಳಿಗೆ ಸಂಬಂಧಿಸಿದಂತೆ ನಿಷೇಧಿತ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ (UKNA) ಸಂಘಟನೆಯ ಆಪಾದಿತ ಹಣಕಾಸು ಮುಖ್ಯಸ್ಥ ಎಸ್. ಪಲಾಲ್ ಥಾಡೌ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಳೆದ ವಾರ ಬಂಧಿಸಿತ್ತು. ಅವರನ್ನು ಇಂಫಾಲ್‌ನ ವಿಶೇಷ NIA ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.