ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಂಪತಿಗಳ ನಡುವಿನ ಅಸಹಜ ಲೈಂಗಿಕ ಕ್ರಿಯೆ ಶಿಕ್ಷಾರ್ಹ ಅಪರಾಧವಲ್ಲ; ಹೈಕೋರ್ಟ್ ಮಹತ್ವದ ತೀರ್ಪು

ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ, ದಂಪತಿಗಳ ನಡುವೆ ನಡೆಯುವ ಓರಲ್ ಮತ್ತು ಆನಲ್ ಲೈಂಗಿಕ ಕ್ರಿಯೆಗಳನ್ನು IPC 377 ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ವೈವಾಹಿಕ ಅತ್ಯಾಚಾರಕ್ಕೆ ಇರುವ ಕಾನೂನು ವಿನಾಯಿತಿಯ ಹಿನ್ನೆಲೆ ಈ ನಿರ್ಧಾರ ಬಂದಿದೆ. ಆದರೆ 498A ಸೇರಿದಂತೆ ಇತರ ಪ್ರಕರಣಗಳು ಮುಂದುವರಿಯುತ್ತವೆ.

ದಂಪತಿಗಳ ನಡುವಿನ ‘ಅಸಹಜ’ ಲೈಂಗಿಕ ಕ್ರಿಯೆ ಅಪರಾಧವಲ್ಲ..!

ಮಧ್ಯ ಪ್ರದೇಶ ಕೋರ್ಟ್ -

Profile
Sushmitha Jain Mar 27, 2026 8:17 PM

ಭೋಪಾಲ್‌: ಪತಿ ಮತ್ತು ಪತ್ನಿಯ ನಡುವಿನ ಸಮ್ಮತಿಯ ಅಥವಾ ಇಚ್ಛೆಗೆ ವಿರುದ್ಧವಾದ ಓರಲ್ (ಮೌಖಿಕ) ಮತ್ತು ಆನಲ್ (ಗುದದ್ವಾರ) ಲೈಂಗಿಕ ಕ್ರಿಯೆಯು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಲ್ಲ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ. ತನ್ನ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರ ಏಕಸದಸ್ಯ ಪೀಠವು, ವೈವಾಹಿಕ ಸಂಬಂಧದಲ್ಲಿ ದೈಹಿಕ ಸ್ವಾಯತ್ತತೆ ಮತ್ತು ಕಾನೂನಿನ ಮಿತಿಗಳ ಕುರಿತು ಗಂಭೀರವಾದ ಅಂಶಗಳನ್ನು ಪ್ರಸ್ತಾಪಿಸಿದೆ.

ನ್ಯಾಯಾಲಯದ ಪ್ರಕಾರ, ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ (Marital Rape) ವಿನಾಯಿತಿ ನೀಡಲಾಗಿದೆ. ಅಂದರೆ, ಪತ್ನಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದ್ದಲ್ಲಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಪತಿ ಲೈಂಗಿಕ ಕ್ರಿಯೆ ನಡೆಸಿದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದೇ ತರ್ಕವನ್ನು ಆಧರಿಸಿ, ದಂಪತಿಗಳ ನಡುವೆ ನಡೆಯುವ ಇಂತಹ ಲೈಂಗಿಕ ಕ್ರಿಯೆಗಳನ್ನು "ನೈಸರ್ಗಿಕವಲ್ಲದ ಅಪರಾಧ" ಎಂದು ಪರಿಗಣಿಸಿ ಸೆಕ್ಷನ್ 377ರ ಅಡಿಯಲ್ಲಿ ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪತಿ ಮತ್ತು ಪತ್ನಿಯ ನಡುವಿನ ಅತ್ಯಂತ ಖಾಸಗಿ ಕ್ಷಣಗಳಲ್ಲಿ ನಡೆಯುವ ದೈಹಿಕ ಸಂಬಂಧಗಳ ಮೇಲೆ ಕಾನೂನು ಹಸ್ತಕ್ಷೇಪ ಮಾಡುವುದು ವೈಯಕ್ತಿಕ ಗೌಪ್ಯತೆಯ ಹಕ್ಕಿನ ದೃಷ್ಟಿಯಿಂದ ಸರಿಯಲ್ಲ ಎಂಬ ಆಶಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

"ಥ್ಯಾಂಕ್‌ ಯೂ ಇಂಡಿಯಾ"; ಕ್ಷಿಪಣಿ ಮೇಲೆ ಭಾರತದ ಹೆಸರು ಹಾಕಿ ಇಸ್ರೇಲ್‌ ಮೇಲೆ ದಾಳಿ ಮಾಡಿದ ಇರಾನ್‌!

ಈ ತೀರ್ಪಿನ ಹಿನ್ನೆಲೆಯಲ್ಲಿ, ಅರ್ಜಿದಾರ ಪತಿಯ ವಿರುದ್ಧ ದಾಖಲಾಗಿದ್ದ ಸೆಕ್ಷನ್ 377ರ ಅಡಿಯಲ್ಲಿನ ಕ್ರಿಮಿನಲ್ ವಿಚಾರಣೆಯನ್ನು ನ್ಯಾಯಾಲಯವು ಸಂಪೂರ್ಣವಾಗಿ ರದ್ದುಗೊಳಿಸಿದೆ. ಆದಾಗ್ಯೂ, ಪತ್ನಿಯ ಮೇಲೆ ನಡೆದಿದೆ ಎನ್ನಲಾದ ಇತರ ದೌರ್ಜನ್ಯಗಳಾದ ಐಪಿಸಿ ಸೆಕ್ಷನ್ 498A (ವರದಕ್ಷಿಣೆ ಕಿರುಕುಳ) ಅಡಿಯಲ್ಲಿನ ವಿಚಾರಣೆಗಳು ಮುಂದುವರಿಯಲಿವೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಸ್ತುತ ಈ ತೀರ್ಪು ರಾಷ್ಟ್ರೀಯ ಮಟ್ಟದಲ್ಲಿ ವೈವಾಹಿಕ ಹಕ್ಕುಗಳು ಮತ್ತು ಮಹಿಳೆಯರ ಲೈಂಗಿಕ ಸಮ್ಮತಿಯ ಕುರಿತು ಹೊಸ ಕಾನೂನಾತ್ಮಕ ಚರ್ಚೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.