ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಆಕೆ ದೇಶ ವಿರೋಧಿʼʼ: ರಾಂಚಿಯಲ್ಲಿ AISA ಅಧ್ಯಕ್ಷೆ ನೇಹಾ ಬೋರಾ ಮುಖಕ್ಕೆ ಮಸಿ ಎರಚಿದ ವಿದ್ಯಾರ್ಥಿ ಅಮರನಾಥ ಪಾಂಡೆ ಆಕ್ರೋಶ

Jharkhand Protest: ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧ ರಾಂಚಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ AISA ಅಧ್ಯಕ್ಷೆ ನೇಹಾ ಬೋರಾ ಮೇಲೆ ವಿದ್ಯಾರ್ಥಿ ಅಮರನಾಥ ಪಾಂಡೆ ಮಸಿ ಎರಚಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೆ ನೇಹಾ ಬೋರಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಂಚಿ ಪ್ರತಿಭಟನೆಯಲ್ಲಿ ನೇಹಾ ಬೋರಾ ಮೇಲೆ ಮಸಿ ಎರಚಿದ ವಿದ್ಯಾರ್ಥಿ

ನೇಹಾ ಬೋರಾ -

Profile
Sushmitha Jain Aug 8, 2026 3:37 PM

ರಾಂಚಿ, ಆ. 8: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ (Jharkhand Protest) ವೇಳೆ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (AISA) ಅಧ್ಯಕ್ಷೆ ನೇಹಾ ಬೋರಾ (Neha Bora) ಮುಖದ ಮೇಲೆ ವಿದ್ಯಾರ್ಥಿಯೊಬ್ಬರು ಮಸಿ ಎರಚಿದ ಘಟನೆ ಶುಕ್ರವಾರ (ಆಗಸ್ಟ್ 7) ರಾಂಚಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಸಿ ಎರಚಿದ ವಿದ್ಯಾರ್ಥಿಯನ್ನು ಅಮರನಾಥ ಪಾಂಡೆ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಂಚಿಯ ಬಿರ್ಸಾ ಚೌಕ್ ಬಳಿ ಘಟನೆ ನಡೆದಿದ್ದು, AISA ಮತ್ತು AISF ನೇತೃತ್ವದಲ್ಲಿ ಪ್ರತಿಭಟನಾಕಾರರು ಜಾರ್ಖಂಡ್ ವಿಧಾನಸಭೆಯತ್ತ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಮರನಾಥ ಪಾಂಡೆ ಜನರ ಗುಂಪಿನಿಂದ ಏಕಾಏಕಿ ಹೊರಬಂದು ನೇಹಾ ಬೋರಾ ಅವರ ಮೇಲೆ ಮಸಿ ಎರಚಿದ್ದಾರೆ.

ನೇಹಾ ಬೋರಾ ಮುಖಕ್ಕೆ ಮಸಿ ಎರಚಿದ ವಿದ್ಯಾರ್ಥಿ:



ಪೊಲೀಸರು ವಶಕ್ಕೆ ಪಡೆಯುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮರನಾಥ ಪಾಂಡೆ, ನೇಹಾ ಬೋರಾ ರಾಷ್ಟ್ರ ವಿರೋಧಿಯಾಗಿದು, ಉಗ್ರ ಉಮರ್ ಖಾಲಿದ್‌ನನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ನೇಹಾ ಬೋರಾ ಹೇಳಿದ್ದೇನು?

ಘಟನೆಗೆ ಪ್ರತಿಕ್ರಿಯಿಸಿದ ನೇಹಾ ಬೋರಾ, “ಮಸಿ ಎರಚಿದರೆ ನಾನು ಹೆದರುವುದಿಲ್ಲ. ಜುಲೈ 20ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಾವು ಗುಂಡಿನ ದಾಳಿ ಮತ್ತು ಲಾಠಿ ಚಾರ್ಜ್ ಎದುರಿಸಿದ್ದೇವೆ. ಅದಕ್ಕೆ ಹೋಲಿಸಿದರೆ ಈ ಸಾಮಾನ್ಯ ಮಸಿ ಏನೂ ಅಲ್ಲ” ಎಂದು ಹೇಳಿದ್ದಾರೆ.
AISA ನಾಯಕಿ ಶಿವಾನಿ ಮಾತನಾಡಿ, “ನಾವು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದೆವು. ಆಗ ವ್ಯಕ್ತಿಯೊಬ್ಬರು ಏಕಾಏಕಿ ಗುಂಪಿನಿಂದ ಹೊರಬಂದು ನೇಹಾ ಮೇಲೆ ಮಸಿ ಎರಚಿದರು” ಎಂದು ಆರೋಪಿಸಿದ್ದಾರೆ. ಈ ವ್ಯಕ್ತಿ ಬಿಜೆಪಿ ಬೆಂಬಲಿತ ವ್ಯಕ್ತಿ ಎಂದು ಅವರು ಆರೋಪಿಸಿದ್ದಾರೆ. ಜಾರ್ಖಂಡ್‌ನಲ್ಲಿ ವಿದ್ಯಾರಥಿಗಳು ಶಾಂತಿಯುತವಾಗಿ ರಾಜಕೀಯದ ಸೋಂಕು ಇಲ್ಲದೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ನೇಹಾ ಈ ಹೋರಾಟಕ್ಕೆ ರಾಜಕೀಯ ಬೆರೆಸಲು ಮುಂದಾಗಿದ್ದರು ಎನ್ನುವ ಆರೋಪವೂ ಇದೆ.

ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ

ವಿದ್ಯಾರ್ಥಿಗಳ ಹೋರಾಟಕ್ಕೆ ನೇಹಾ ಬೋರಾ ಬೆಂಬಲ

ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ನೇಹಾ ಬೋರಾ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಅದರ ಹೊಣೆಯನ್ನು ಕೇವಲ ಖಾಸಗಿ ಸಂಸ್ಥೆಗಳ ಮೇಲೆ ಹೊರಿಸಲಾಗುವುದಿಲ್ಲ. ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಜಾರ್ಖಂಡ್‌ನ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧದ ಪ್ರತಿಭಟನೆ ಶುಕ್ರವಾರ 14ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 25ರಂದು ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ JPSC-JSSC Reforms Manch ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿತ್ತು.

ಸರ್ಕಾರ ಮಾತುಕತೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ 11 ಸದಸ್ಯರ ನಿಯೋಗವನ್ನು ರಚಿಸಲಾಗಿದೆ. ಇದರಲ್ಲಿ ಎಂಟು ವಿದ್ಯಾರ್ಥಿಗಳು, ಇಬ್ಬರು ತಜ್ಞರು ಮತ್ತು ಒಬ್ಬ ವಕೀಲರು ಇರಲಿದ್ದಾರೆ ಎಂದು JPSC-JSSC Reforms Manchನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.