ಜಾಗತಿಕ ವೇದಿಕೆಯಲ್ಲಿ ಮೆಲೋಡಿ ಚಾಕೊಲೇಟ್ ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾರ್ಲೆ
Melody Chocolate: ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಪಾರ್ಲೆ ಕಂಪನಿಯ ಮೆಲೋಡಿ ಚಾಕೊಲೇಟ್ ಉಡುಗೊರೆಯಾಗಿ ನೀಡಿರುವ ವಿಡಿಯೊ ಸದ್ಯ ವೈರಲ್ ಆಗಿದೆ. ಇದರಿಂದ ಮೆಲೋಡಿ ಚಾಕೊಲೇಟ್ ಮತ್ತೆ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಪಾರ್ಲೆ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದೆ.
ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ -
ದೆಹಲಿ, ಮೇ 20: 90ರ ದಶಕದ ತಲೆಮಾರಿನ ನೆಚ್ಚಿನ ಪಾರ್ಲೆ ಕಂಪನಿಯ ಮೆಲೋಡಿ ಚಾಕೊಲೇಟ್ (Melody Chocolate) ಸದ್ಯ ಮತ್ತೆ ಟ್ರೆಂಡಿಂಗ್‌ನಲ್ಲಿದೆ. 2000 ಇಸವಿಯ ಬಳಿಕ ಮತ್ತೆ ಈ ಚಾಕೊಲೇಟ್ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi). ಹೌದು, ಇಟಲಿಗೆ ತೆರಳಿದ ಮೋದಿ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಮೆಲೊಡಿ ಚಾಕೊಲೇಟ್ ಪ್ಯಾಕೇಟ್ ಉಡುಗೊರೆಯಾಗಿದ್ದು ನೀಡಿದ್ದು, ಸದ್ಯ ಈ ವಿಡಿಯೊ ಸೋಷಿಯಲ್‌ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೊ ಹೊರ ಬರುತ್ತಿದ್ದಂತೆ ಮೆಲೋಡಿ ಚಾಕೊಲೇಟ್ ಮತ್ತೆ ಜನಪ್ರಿಯವಾಗಿದ್ದು, ಒಂದೇ ದಿನದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟ ಕಂಡಿದೆ. ಈ ಮಧ್ಯೆ ಪಾರ್ಲೆ ಕಂಪನಿ ಮೆಲೋಡಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಮೋದಿ ಅವರಿಗೆ ಧನ್ಯವಾದ ತಿಳಿಸಿದೆ.
ಹಿಂದಿನಿಂದಲೂ ಮೋದಿ ಮತ್ತು ಮೆಲೋನಿ ಮಧ್ಯೆ ಉತ್ತಮ ಬಾಂಧವ್ಯವಿದೆ. ಇವರಿಬ್ಬರು ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ಇವರ ಹೆಸರನ್ನು ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಮೆಲೋಡಿ ಎಂದೇ ಕರೆಯಲಾಗುತ್ತದೆ. ಈ ಸ್ನೇಹದ ಸಂಕೇತವಾಗಿ ಮೋದಿ ಮೆಲೋಡಿ ಚಾಕೊಲೇಟ್ ಉಡುಗೊರೆ ನೀಡಿದ್ದು, ವಿಡಿಯೊವನ್ನು ಮೆಲೋನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮೆಲೊಡಿ ಚಾಕೊಲೇಟ್ ಜಾಗತಿಕವಾಗಿ ಗಮನ ಸೆಳೆಯಿತು.
ಪಾರ್ಲೆ ಪ್ರಾಡಕ್ಟ್ಸ್‌ನ ಎಕ್ಸ್ ಪೋಸ್ಟ್:
Thank you @narendramodi 🙏🏻 https://t.co/LZK960JwFl pic.twitter.com/TBjkB4761C
— Parle Products (@ParleFamily) May 20, 2026
ಕೃತಜ್ಞತೆ ಸಲ್ಲಿಸಿದ ಪಾರ್ಲೆ
ಮೆಲೋಡಿ ಚಾಕೊಲೇಟ್ ಉತ್ಪಾದಿಸುವ ಪಾರ್ಲೆ ಪ್ರಾಡೆಕ್ಟ್ಸ್ ಇದೀಗ ಮೋದಿಗೆ ಧನ್ಯವಾದ ತಿಳಿಸಿದ್ದು, ಇದು ತಮ್ಮ ಪಾಲಿನ ಹೆಮ್ಮೆಯ ಕ್ಷಣ ಎಂದಿದೆ. ʼʼಜಾಗತಿಕ ವೇದಿಕೆಯಲ್ಲಿ ಮೆಲೋಡಿಯನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಧನ್ಯವಾದಗಳು. ಗಡಿಯನ್ನು ದಾಟಿ ಜಾಗತಿಕವಾಗಿ ಪಾರ್ಲೆ ಉತ್ಪನ್ನಗಳು ಜನಪ್ರಿಯವಾಗುತ್ತಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಕ್ಷಣʼʼ ಎಂದು ಪಾರ್ಲೆ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ರೋಮ್‌ನಲ್ಲಿ ಪ್ರಧಾನಿ ಮೋದಿಯೊಂದಿಗೆ ಜಾರ್ಜಿಯಾ ಮೆಲೋನಿ ಸೆಲ್ಫಿ ವೈರಲ್
ಮಾರಾಟಲ್ಲಿ ಭಾರಿ ಏರಿಕೆ
ಮೆಲೋನಿ ಸೋಷಿಯಲ್ ಮೀಡಿಯಾದಲ್ಲಿ ಮೋದಿಯೊಂದಿನ ವಿಡಿಯೊ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆಯಿತು. ಇದಾದ ಬಳಿಕ ಗೂಗಲ್ ಟ್ರೆಂಡ್ಸ್‌ನಲ್ಲಿ ʼಮೆಲೋಡಿ ಚಾಕೊಲೇಟ್ʼ ಪದದ ಹುಡುಕಾಟವು ಶೇಕಡ 1,200ರಷ್ಟು ಹೆಚ್ಚಾಗಿದೆ ಎನ್ನುವುದನ್ನು ದತ್ತಾಂಶವು ತೋರಿಸಿದೆ. ಪಾರ್ಲೆ ಮೆಲೋಡಿ ಮತ್ತು ಮೆಲೋಡಿ ಟಾಫಿಯಂತಹ ಪದಗಳ ಹುಡುಕಾಟ ಕ್ರಮವಾಗಿ ಶೇಕಡ 4,750 ಮತ್ತು 950ರಷ್ಟು ಹೆಚ್ಚಾಗಿದೆ. ಪಾರ್ಲೆ ಪ್ರಾಡಕ್ಟ್ಸ್ ಉಪಾಧ್ಯಕ್ಷ ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮಾಯಾಂಕ್ ಶಾ "ಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜಾಗತಿಕ ವೇದಿಕೆ ನೀಡಲು ಇದು ಉತ್ತಮ ಮಾರ್ಗ" ಎಂದು ಹೇಳಿದರು.
ಪಾರ್ಲೆ ಪ್ರಾಡಕ್ಟ್ಸ್‌ನ ಇತಿಹಾಸ
ಪಾರ್ಲೆ ಪ್ರಾಡಕ್ಟ್ಸ್ ಕಂಪನಿಗೆ ದಶಕಗಳ ಇತಿಹಾಸವಿದೆ. ಇದನ್ನು 1929ರಲ್ಲಿ ಮೋಹನ್‌ಲಾಲ್ ಚೌಹಾಣ್ ಮಹಾರಾಷ್ಟ್ರದ ಮುಂಬೈಯ ವಿಲೆ ಪಾರ್ಲೆಯಲ್ಲಿ ಆರಂಭಿಸಿದರು. ಕಂಪನಿಯು ಪಾರ್ಲೆ ಗ್ಲುಕೋ ಬಿಸ್ಕೆಟ್ ಉತ್ಪದಿಸುವ ಮೊದಲು ಚಾಕೊಲೇಟ್ ತಯಾರಿಕೆ ಪ್ರಾರಂಭಿಸಿತು. ಪಾರ್ಲೆ-ಜಿ ಬಿಸ್ಕೆಟ್ ಉತ್ಪಾದನೆಯ ಬಳಿಕ ಬಿಸ್ಕೆಟ್ ಮತ್ತು ಕ್ಯಾಂಡಿಯ ದೈತ್ಯ ಕಂಪನಿಯಾಗಿ ಬೆಳೆಯಿತು. ಪಾರ್ಲೆ-ಜಿ ವಿಶ್ವದ ಅತ್ಯುತ್ತಮ ಬಿಸ್ಕೆಟ್ ಬ್ರ್ಯಾಂಡ್ ಆಗಿ ಬದಲಾಯಿತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.