ಕೇತನ್ ಜತೆ ಎಂಗೇಜ್‌ಮೆಂಟ್ ಆಗಿದ್ದರೂ ಪ್ರೇಮಿ ಚೇತನ್ ಜತೆ ಸುತ್ತಾಡುತ್ತಿದ್ದ ಸಿಯಾ; ಜೋಡಿಯ ರೊಮ್ಯಾಂಟಿಕ್ ವಿಡಿಯೊ ವೈರಲ್
Siya Goyal: ದೇಶದ ಗಮನ ಸೆಳೆದ ಮಹಾರಾಷ್ಟ್ರದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ವಿಚಾರ ಬೆಳಕಿಗೆ ಬರುತ್ತಿದೆ. ಕೇತನ್ ಅವರನ್ನು ಕೊಲೆಗೈದ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರ ರೊಮ್ಯಾಂಟಿಕ್ ವಿಡಿಯೊ ಇದೀಗ ಹೊರ ಬಿದ್ದಿದೆ.
ಸಿಯಾ ಗೋಯಲ್–ಚೇತನ್ ಚೌಧರಿ (ಸಂಗ್ರಹ ಚಿತ್ರ) -
ಮುಂಬೈ, ಜು. 1: ಮಹಾರಾಷ್ಟ್ರದ ಯುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಹತ್ಯೆ ಪ್ರಕರಣ ಸದ್ಯ ದೇಶದ ಗಮನ ಸೆಳೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ತನ್ನ ಪ್ರಿಯಕರ ಚೇತನ್ ಚೌಧರಿ (Chetan Chaudhary) ಜತೆ ಸೇರಿ ಕೇತನ್‌ನನ್ನು ಲೋನಾವಾಲಾ ಸಮೀಪದ ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿ 350 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಚೇತನ್ ಮತ್ತು ಸಿಯಾಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸುತ್ತಿದ್ಧಂತೆ ಅಚ್ಚರಿಯ ವಿಚಾರ ಬೆಳಕಿಗೆ ಬರುತ್ತಿದೆ. ಫೆಬ್ರವರಿಯಲ್ಲಿ ಕೇತನ್ ಜತೆ ನಿಶ್ಚಿತಾರ್ಥ ನಡೆದಿದ್ದರೂ ಸಿಯಾ ಚೇತನ್ ಜತೆಗಿನ ಓಡಾಟ, ಒಡನಾಟ ಮುಂದುವರಿಸಿದ್ದಳು. ಅದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ಚೇತನ್ ಮತ್ತು ಸಿಯಾ ಜತೆಗಿನ ಆತ್ಮೀಯ ಕ್ಷಣದ ವಿಡಿಯೊ ವೈರಲ್ ಆಗಿದೆ.
ಕೇತನ್‌ನನ್ನು ಕೊಲೆ ಮಾಡುವ ವಾರದ ಮೊದಲು ಕೆಫೆಯೊಂದರಲ್ಲಿ ಭೇಟಿಯಾಗಿದ್ದ ಸಿಯಾ ಮತ್ತು ಚೇತನ್ ಸಂಚು ರೂಪಿಸಿದ್ದರು ಎನ್ನುವುದು ಗೊತ್ತಾಗಿದೆ. ಅದರೊಂದಿಗೆ ಕೇತನ್ ಹತ್ಯೆಗೆ ಕೆಲವು ಮೊದಲು ಚೇತನ್ ಮತ್ತು ಸಿಯಾ ಆತ್ಮೀಯವಾಗಿದ್ದ ವಿಡಿಯೊ ಹೊರ ಬಿದ್ದಿದೆ. ಎನ್‌ಡಿಟಿವಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಎನ್‌ಡಿಟಿವಿ ಎಕ್ಸ್ ಪೋಸ್ಟ್ ಇಲ್ಲಿದೆ:
#BREAKING | New video of Chetan and Siya, 3 weeks before the murder, accessed @MickyGupta84 reports pic.twitter.com/Ifc01wSnSH
— NDTV (@ndtv) July 1, 2026
ರೊಮ್ಯಾಂಟಿಕ್ ವಿಡಿಯೊ
ಮೇ 23ರಂದು ಚಿತ್ರೀಕರಿಸಿದ ವಿಡಿಯೊ ಇದಾಗಿದ್ದು, ರೆಸ್ಟೋರೆಂಟ್ ಒಂದರಲ್ಲಿ ಚೇತನ್ ಮತ್ತು ಸಿಯಾ ರೊಮ್ಯಾಂಟಿಕ್ ಆಗಿ ಕಂಡು ಬಂದಿದ್ದಾರೆ. ಚೇತನ್ ತೋಳಿನಿಂದ ಬಳಸಿ ಸಿಯಾಳನ್ನು ತಬ್ಬಿಕೊಂಡಿದ್ದಾನೆ. ಆಕೆ ನಗುತ್ತಾ ಪೋಸ್ ಕೊಟ್ಟಿದ್ದಾಳೆ. ಈ ಸ್ನಾಪ್‌ಚಾಟ್ ವಿಡಿಯೊವನ್ನು ಮೇ 23ರ ರಾತ್ರಿ 9.30ರ ರಾತ್ರಿ ಚಿತ್ರೀಕರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ವಿಡಿಯೊ ತನಿಖೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.
ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು?
ಸಿಯಾ ಮನೆಯವರು ಹೇಳಿದ್ದೇನು?
ಸಿಯಾ ಮನೆಯವರು ಆಕೆಯ ಮೇಲಿನ ಆರೋಪಗಳನ್ನು ಬುಧವಾರ (ಜೂನ್ 30) ತಳ್ಳಿ ಹಾಕಿದ್ದರು. ಸಿಯಾ ಮತ್ತು ಚೇತನ್ ಉತ್ತಮ ಸ್ನೇಹಿತರಾಗಿದ್ದರು. ಅವರು ಪ್ರೇಮಿಗಳೆಂದು ಎಂದಿಗೂ ಎನಿಸಿರಲಿಲ್ಲ ಎಂದಿದ್ದರು. ʼʼಕೇತನ್ ಜತೆ ಎಂಗೇಜ್‌ಮೆಂಟ್ ನಡೆದ ಬಳಿಕ ಸಿಯಾ ಆತನೊಂದಿಗೆ ಆತ್ಮೀಯವಾಗಿಯೇ ಇದ್ದಳು. ಎಂದಿಗೂ ಆತನನ್ನು ನಿರ್ಲಕ್ಷಿಸಿರಲಿಲ್ಲʼʼ ಎಂದು ಸಿಯಾ ತಾಯಿ ಪೂಜಾ ಗೋಯಲ್ ತಿಳಿಸಿದ್ದರು. ಸಿಯಾ ಮತ್ತು ಚೇತನ್ ಜತೆಯಾಗಿರುವ ಫೋಟೊ ಮತ್ತು ಹಲವು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇತನ್ ಹತ್ಯೆಯ ಬಳಿಕ ಮೊಬೈಲ್ ವಶಕ್ಕೆ ಪಡೆದಿದ್ದ ಸಿಯಾ
ʼʼಕೇತನ್‌ನನ್ನು ಕೋಟೆಯ ಮೇಲಿನಿಂದ ತಳ್ಳಿದ ಬಳಿಕ ಸಿಯಾ ಆತನ ಮೊಬೈಲ್ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದಳುʼʼ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೆಲ ಹೊತ್ತು ತನ್ನ ಬಳಿಯಲ್ಲೇ ಕೇತನ್ ಮೊಬೈಲ್ ಇಟ್ಟುಕೊಂಡಿದ್ದ ಸಿಯಾ ಬಳಿಕ ಅದನ್ನು ಕೇತನ್ ಮನೆಯವರಿಗೆ ಹಸ್ತಾಂತರಿಸಿದ್ದಳು. ಸಿಯಾ ಮತ್ತು ಚೇತನ್ ಮೊಬೈಲ್‌ಫೋನ್‌ನಿಂದ ಡೇಟಾ ಡಿಲೀಟ್ ಮಾಡಿದ್ದಾರ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ʼʼಕೇತನ್ ತಲೆ ಬುರುಡೆ ನಜ್ಜುಗುಜ್ಜಾಗಿತ್ತುʼʼ: ಲೋಹಗಢ ಪ್ರಕರಣದ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ವಿವರ
ಸಿಯಾ ಕೆಲವು ಹೊತ್ತಿನ ಬಳಿಕ ಕೇತನ್ ಮೊಬೈಲ್ ಅವರ ಮನೆಯವರಿಗೆ ಹಸ್ತಾಂತರಿಸಿದ್ದಳು. ಆಕೆ ಮುಖ್ಯ ಡೇಟಾ ಡಿಲೀಟ್ ಮಾಡಿದ್ದಾಳೆಯೇ ಎನ್ನುವುದನ್ನು ತಿಳಿಯಲು ತನಿಖೆ ನಡೆಸುವುದಾಗಿ ಎಂದು ಮೂಲಗಳು ತಿಳಿಸಿವೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.