ಜಮ್ಮು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಗುಂಪಿನ ಮೇಲೆ ಉಗ್ರರ ದಾಳಿ; ಮೂವರು ಯೋಧರಿಗೆ ಗಾಯ
Kulgam Terror Attack: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಉಗ್ರರು ಚೆಕ್‌ಪಾಯಿಂಟ್‌ನಲ್ಲಿ ನೆರೆದಿದ್ದ ಸಿಆರ್‌ಪಿಎಫ್ ಗುಂಪಿನ ಮೇಲೆ ಇದ್ದಕ್ಕಿದ್ಧಂತೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ನ. 11: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಚೆಕ್‌ಪಾಯಿಂಟ್‌ನಲ್ಲಿ ನೆರೆದಿದ್ದ ಸಿಆರ್‌ಪಿಎಫ್ ಗುಂಪಿನ ಮೇಲೆ ಇದ್ದಕ್ಕಿದ್ಧಂತೆ ಉಗ್ರರು ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ (Kulgam Terror Attack). ದಾಳಿ ಬಳಿಕ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಎಲ್ಲೆಡೆ ನಾಕಾಬಂಧಿ ಹಾಕಿ ದಾಳಿಕೋರರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ.
ಅಧಿಕಾರಿಗಳ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ಉಗ್ರರು ಬುಧವಾರ (ನವೆಂಬರ್ 11) ಅಪರಾಹ್ನ ಸುಮಾರು 2:15 ಸುಮಾರಿಗೆ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಮೂವರು ಯೋಧರನ್ನು ಚಿಕಿತ್ಸೆಗಾಗಿ ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕುಲ್ಗಾಮ್‌ನಲ್ಲಿ ಉಗ್ರರ ದಾಳಿ:
🚨 BREAKING: Terrorists opened fire on a CRPF post in Kulgam's Akhran area, Jammu & Kashmir. At least 2-3 personnel injured; area cordoned off and search operation underway. It's time to rain hell on these porkis. #Kulgam #JammuAndKashmir #CRPFCampAttack #CRPF https://t.co/5LnBLfraJV
— Aakash🪷 (@aakashrmcf) November 11, 2026
ಹೇಳಿಕೆ ಬಿಡುಗಡೆ ಮಾಡಿದ ಸಿಆರ್‌ಪಿಎಫ್
ಘಟನೆ ಬಗ್ಗೆ ಸಿಆರ್ಪಿಉಎಫ್ ಹೇಳಿಕೆ ಬಿಡುಗಡೆ ಮಾಡಿದೆ. ʼʼಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಸಿಆರ್‌ಪಿಎಫ್ ನೆಲೆಯ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಯೋಧರು ಗಾಯಗೊಂಡಿದ್ದಾರೆ. ಬುದವಾರ ಅಪರಾಹ್ನ 2.15 ಸುಮಾರಿಗೆ ದಾಳಿ ನಡೆಸಿದ ಉಗ್ರರು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆʼʼ ಎಂದು ಮಾಹಿತಿ ಹಂಚಿಕೊಂಡಿದೆ. ಗಾಯಗೊಂಡ ಮೂವರ ಪೈಕಿ ಒಬ್ಬರ ಆರೋಗ್ಯ ಸ್ಥಿರವಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭಿರವಾಗಿದೆ. ಅದಾಗ್ಯೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಗಾಯಗೊಂಡ ಯೋಧರನ್ನು ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮವೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಲತೀಫ್ ಭಟ್ ಹೆಸರು ಮುನ್ನಲೆಗೆ
ಈ ದಾಳಿಯೊಂದಿಗೆ ಉಗ್ರ ಲತೀಫ್ ಭಟ್ ಹೆಸರು ಮುನ್ನಲೆಗೆ ಬಂದಿದೆ. ಈ ದಾಳಿಯ ಹಿಂದೆ ಆತನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕುಲ್ಗಾಮ್, ಶೋಪಿಯಾನ್, ಅನಂತನಾಗ್ ಸೇರಿ ಜಮ್ಮು ಮತ್ತು ಕಾಶ್ಮೀರದ ವಿವಿಧ ಕಡೆಗಳಲ್ಲಿ ಲತೀಫ್ ಭಟ್ ಸಕ್ರಿಯನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸರಣಿ ದಾಳಿ
ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಡೆಯುತ್ತಿರುವ ಮತ್ತೊಂದು ಉಗ್ರ ದಾಳಿ ಇದಾಗಿದೆ. ಜುಲೈ 22ರಂದು ಅನಂತನಾಗ್ ನಗರದಲ್ಲಿ ಉಗ್ರರು ದಾಳಿ ನಡೆಸಿ ಪೊಲೀಸ್ ಸಿಬ್ಬಂದಿಯನ್ನು ಹತೈಗೈದಿದ್ದರು. ಮೃತರನ್ನು ಹೆಡ್ ಕಾನ್ಸ್‌ಟೇಬಲ್ ಆಶಿಕ್ ಹುಸೈನ್ ಖುರೇಷಿ ಎಂದು ಗುರುತಿಸಲಾಗಿದೆ. ಐಆರ್ 3ನೇ ಬೆಟಾಲಿಯನ್‌ನ ಭಾಗವಾಗಿದ್ದ, ಬುದ್ಧಗಾಮ್ ಜಿಲ್ಲೆಯ ಬೀರ್‌ವಾ ನಿವಾಸಿ ಆಶಿಕ್ ಹುಸೈನ್ ಖುರೇಷಿ ಅಮರನಾಥ ಯಾತ್ರೆಯ ರಕ್ಷಣಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಈ ದಾಳಿ ನಡೆದಿದೆ.
ಪಿಡಿಪಿ ಮುಖಂಡನ ಮನೆ ಮೇಲೆ ಉಗ್ರ ದಾಳಿ
ಅದಾದ ಬಳಿಕ ಜುಲೈ 31ರಂದು ಕುಲ್ಗಾಮ್ ಜಿಲ್ಲೆಯ ಕಿಲಾಮ್ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಛತ್ತೀಸ್‌ಗಢ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದರು.