ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ವಿಮಾನಕ್ಕೆ ಯುಎಇಯಲ್ಲಿ ಎಫ್- 16 ಯುದ್ಧ ವಿಮಾನಗಳಿಂದ ಭದ್ರತೆ; ಕಾರಣವೇನು?

ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದ ಸಮಯದಲ್ಲಿ ಯುಎಇ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ದೇಶದ ಗಡಿಯೊಳಗೆ ಪ್ರವೇಶ ಪಡೆದ ತಕ್ಷಣವೇ ಯುಎಇಯ ಎಫ್-16 ಯುದ್ಧ ವಿಮಾನಗಳು ಬೆಂಗಾವಲಾಗಿ ನಿಂತಿತು. ಇದು ದೆಹಲಿ ಮತ್ತು ಅಬುಧಾಬಿ ನಡುವಿನ ನಿಕಟ ಸಂಬಂಧವನ್ನು ಎತ್ತಿ ತೋರಿಸಿದೆ.

ಯುಎಇಯಲ್ಲಿ  ಪ್ರಧಾನಿ ಮೋದಿ ವಿಮಾನಕ್ಕೆ ಬಿಗಿ ಭದ್ರತೆ

ಸಂಗ್ರಹ ಚಿತ್ರ -

ಯುಎಇ: ದೇಶದ ಗಡಿಯೊಳಗೆ ಬಂದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ವಿಮಾನಕ್ಕೆ ಯುಎಇಯ (UAE) ಯುದ್ಧ ವಿಮಾನಗಳು (F-16 fighter jets) ಬೆಂಗಾವಲಾಗಿ ನಿಂತಿತು. ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಯುಎಇ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರ ವಿಮಾನಕ್ಕೆ ಶುಕ್ರವಾರ ಭಾರಿ ಭದ್ರತೆಯನ್ನು ಒದಗಿಸಲಾಯಿತು. ಯುಎಇಯ ವಾಯುಪ್ರದೇಶದೊಳಗೆ ಪ್ರವೇಶಿಸಿದ ತಕ್ಷಣವೇ ಮೋದಿ ಅವರ ವಿಮಾನವು ಯುಎಇಯ ಎಫ್-16 ಯುದ್ಧ ವಿಮಾನಗಳ ಬೆಂಗಾವಲಿನಲ್ಲಿ ತೆರಳಿತು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುಎಇಗೆ ತೆರಳಿದ್ದು, ಅವರ ಏರ್ ಇಂಡಿಯಾ ಒನ್ ವಿಮಾನವು ಯುಎಇ ದೇಶದ ಗಡಿಯೊಳಗೆ ಪ್ರವೇಶಿಸಿದ ತಕ್ಷಣವೇ ಯುಎಇಯ ಯುದ್ಧ ವಿಮಾನಗಳು ಬೆಂಗಾವಲಿಗೆ ನಿಂತವು. ಇದು ದೆಹಲಿ ಮತ್ತು ಅಬುಧಾಬಿ ನಡುವಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸಿದೆ.

ಹಾರ್ಮೊಜ್‌ ಬಿಕ್ಕಟ್ಟಿಗೆ ಯುಎಇ ಹೊಸ ಪ್ಲಾನ್‌! ಹೊಸ ತೈಲ ಪೈಪ್‌ಲೈನ್‌ ಯೋಜನೆಗೆ ಅಸ್ತು

ದೆಹಲಿ ಮತ್ತು ಅಬುಧಾಬಿ ನಡುವಿನ ನಿಕಟ ಸಂಬಂಧದ ಸಂಕೇತವಾಗಿ ಯುಎಇ ಯುದ್ಧ ವಿಮಾನವಾದ ಎಫ್- 16 ಪ್ರಧಾನಿ ಮೋದಿ ಅವರ ವಿಮಾನಕ್ಕೆ ಬೆಂಗಾವಲು ನೀಡಿದೆ. ಯುಎಇ ವಾಯುಪಡೆಯಿಂದ ನಿರ್ವಹಿಸಲ್ಪಡುವ ಎಫ್-16 ಬ್ಲಾಕ್ 60 ಡೆಸರ್ಟ್ ಫಾಲ್ಕನ್ ಯುದ್ಧ ವಿಮಾನಗಳು ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ಸಮಯದಲ್ಲಿ ಇರಾನ್ ಹಾರಿಸಿದ ಡ್ರೋನ್‌ಗಳು ಮತ್ತು ಸ್ಪೋಟಕಗಳನ್ನು ಹೊಡೆದುರುಳಿಸಿದ್ದವು.

ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಮೊದಲ ನಿಲ್ದಾಣವಾಗಿ ಅವರು ಯುಎಇಗೆ ಭೇಟಿ ನೀಡಿದ್ದರು. ಯುಎಇಯ ದೇಶದ ಗಡಿಯೊಳಗೆ ಪ್ರವೇಶಿಸಿದ ತಕ್ಷಣವೇ ಪ್ರಧಾನಿ ಮೋದಿ ಅವರ ಏರ್ ಇಂಡಿಯಾ ಒನ್ ವಿಮಾನಕ್ಕೆ ಯುಎಇಯ ಎರಡು ಎಫ್-16 ಜೆಟ್‌ಗಳು ಜೊತೆಗೆ ತೆರಳಿದವು. ವಿಮಾನವು ಅಬುಧಾಬಿಯಲ್ಲಿ ಇಳಿದ ಮೇಲೆ ಪ್ರಧಾನಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು

ಪ್ರಧಾನಿ ಮೋದಿ ಅವರು ಎಂಟನೇ ಬಾರಿ ಯುಎಇಗೆ ಭೇಟಿ ನೀಡುತ್ತಿದ್ದು, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಇದು ಭಾರತ ಮತ್ತು ಯುಎಇ ನಾಯಕತ್ವದ ನಡುವಿನ ಆಳವಾದ ಕಾರ್ಯತಂತ್ರದ ಪಾಲುದಾರಿಕೆ, ನಂಬಿಕೆ ಮತ್ತು ವೈಯಕ್ತಿಕ ಸಂಬಂಧದ ಪ್ರತಿಬಿಂಬವಾಗಿದೆ ಎಂದು ಹೇಳಿದರು.

ಯುಎಇ ಭೇಟಿಯ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಯುಎಇಯು ತಮ್ಮ ಎರಡನೇ ಮನೆ ಎಂದು ಬಣ್ಣಿಸಿದರು. ಯುಎಇಯಲ್ಲಿ ಗಲ್ಫ್ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಅಂದರೆ 4 ಕೋಟಿಗಿಂತಲೂ ಅಧಿಕ ಭಾರತೀಯರು ವಾಸವಾಗಿದ್ದಾರೆ. ನಿಮ್ಮ ವಾಯುಪಡೆಯ ಜೆಟ್‌ಗಳು ನನಗೆ ಬೆಂಗಾವಲಾಗಿ ನಿಂತದ್ದು ಭಾರತದ ಜನರಿಗೆ ದೊರೆತ ಗೌರವವಾಗಿದೆ. ಇರಾನ್ ಸಂಘರ್ಷದ ವೇಳೆ ಯುಎಇಯನ್ನು ಗುರಿಯಾಗಿಸಿಕೊಂಡ ರೀತಿ ಸ್ವೀಕಾರಾರ್ಹವಲ್ಲ. ಭಾರತವು ಪ್ರತಿಯೊಂದು ಸಂದರ್ಭದಲ್ಲೂ ಯುಎಇಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಹೇಳಿದರು.

ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಇಂಧನ ಸಹಕಾರದ ಮೇಲೆ ಚರ್ಚೆ ನಡೆಸಲಾಯಿತು.ಇದರೊಂದಿಗೆ ರಕ್ಷಣಾ ಪಾಲುದಾರಿಕೆ, ಭಾರತೀಯ ಮೂಲ ಸೌಕರ್ಯದಲ್ಲಿ 5 ಬಿಲಿಯನ್ ಮೌಲ್ಯದ ಹೂಡಿಕೆ ಕುರಿತು ಕೂಡ ಚರ್ಚೆ ನಡೆಸಲಾಗಿದೆ.

ವಿವಾದಿತ ಭೋಜಶಾಲಾ ಸಂಕೀರ್ಣ ಹಿಂದೂ ದೇಗುಲ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಇದರೊಂದಿಗೆ ಗುಜರಾತ್‌ನ ವಡಿನಾರ್‌ನಲ್ಲಿ ಪೆಟ್ರೋಲಿಯಂ ನಿಕ್ಷೇಪ, ಹಡಗು ದುರಸ್ತಿ ಕ್ಲಸ್ಟರ್ ಅನ್ನು ಸ್ಥಾಪಿಸುವ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಯುಎಇಯಿಂದ ಪ್ರಧಾನಿ ಮೋದಿಯವರು ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ತೆರಳಲಿದ್ದಾರೆ.