Readers Colony: ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಾಗಲಿ
ನಮ್ಮ ಸರಕಾರಿ ಶಾಲಾ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಪ್ರತಿಯೊಬ್ಬರು ಸರಕಾರದೊಂದಿಗೆ ಕೈ ಜೋಡಿಸುವುದು ಅಗತ್ಯ. ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ರುವ ಸರಕಾರಿ ಶಾಲೆಗಳನ್ನು ಪ್ರತಿ ಷ್ಠಿತ ವ್ಯಕ್ತಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದತ್ತು ಪಡೆದು ಶಾಲೆಗಳನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಾಗ ಈ ಶಾಲೆಗಳ ಸಬಲೀಕರಣ ಹೆಚ್ಚಾಗಿ ಶಾಲೆಗಳಲ್ಲಿ ದಾಖಲಾತಿ ಹಾಗೂ ಹಾಜರಾತಿ ವೃದ್ಧಿಸುತ್ತದೆ.
-
ಓದುಗರ ಓಣಿ
ರಾಜ್ಯಾದ್ಯಂತ ಸರಕಾರಿ ಶಾಲೆಗಳು ಇದೆ ಮೇ 29ರಿಂದ ಪ್ರಾರಂಭವಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ರಾಜ್ಯ ಸರಕಾರ ಪ್ರತಿ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ, ಶೂ ಸಾಕ್ಸ್, ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಊಟ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ನೀಡುತ್ತಿದ್ದು, ಹೀಗಿದ್ದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರು ವುದು ಆತಂಕದ ಸಂಗತಿ.
ಸರಕಾರಿ ಶಾಲೆಗಳು ಭಾರತದ ಶೈಕ್ಷಣಿಕ ವ್ಯವಸ್ಥೆಯ ಪ್ರಮುಖ ಅಂಶ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸರಕಾರಿ ಶಾಲೆಗಳ ಪಾತ್ರ ಅಮೂಲ್ಯ. ರಾಜ್ಯದ ಬಹುತೇಕ ಸರಕಾರಿ ಶಾಲೆಗಳು ಹಲವು ಮೂಲಭೂತ ಸೌಲಭ್ಯಗಳ ಕೊರತೆ ಅನುಭವಿಸುತ್ತಿವೆ. ಕುಡಿಯುವ ನೀರು ಸೇರಿದಂತೆ ಶೌಚಾಲಯ, ಆಸನ ವ್ಯವಸ್ಥೆ, ಆಟದ ಮೈದಾನ, ಉತ್ತಮ ಕಟ್ಟಡ, ಶೈಕ್ಷಣಿಕ ಉಪಕರಣಗಳು ಮತ್ತು ಶಿಕ್ಷಕರ ಕೊರತೆ ಮುಂತಾದವುಗಳು ಶಾಲೆಯಲ್ಲಿನ ಶಿಕ್ಷಣದ ಮಟ್ಟವನ್ನು ಕುಗ್ಗಿಸುತ್ತಿವೆ.
ಇದನ್ನೂ ಓದಿ: Readers Colony: ರಸಗೊಬ್ಬರಕ್ಕೆ ಮುಂಜಾಗ್ರತೆ
ಅಲ್ಲದೆ ಈ ಕಾರಣಗಳಿಂದಲೇ ನಮ್ಮ ಸರಕಾರಿ ಶಾಲೆಗಳು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಇಷ್ಟಕ್ಕೂ ಸರಕಾರಿ ಶಾಲಾ ಸಮಸ್ಯೆಗಳನ್ನು ಸರಕಾರವೇ ನಿವಾರಣೆ ಮಾಡಲಿ ಎಂಬ ಧೋರಣೆ ತಪ್ಪಬೇಕಿದೆ. ನಮ್ಮ ಸರಕಾರಿ ಶಾಲಾ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ಪ್ರತಿಯೊಬ್ಬರು ಸರಕಾರದೊಂದಿಗೆ ಕೈ ಜೋಡಿ ಸುವುದು ಅಗತ್ಯ. ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳನ್ನು ಪ್ರತಿಷ್ಠಿತ ವ್ಯಕ್ತಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದತ್ತು ಪಡೆದು ಶಾಲೆಗಳನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡಾಗ ಈ ಶಾಲೆಗಳ ಸಬಲೀಕರಣ ಹೆಚ್ಚಾಗಿ ಶಾಲೆಗಳಲ್ಲಿ ದಾಖಲಾತಿ ಹಾಗೂ ಹಾಜರಾತಿ ವೃದ್ಧಿಸುತ್ತದೆ.
- ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಕೌಶಲ್ಯಾಧಾರಿತ ಕೋರ್ಸ್‌ಗಳು ಹೆಚ್ಚಲಿ
ಪ್ರಸ್ತುತ ಜಗತ್ತು ತಂತ್ರಜ್ಞಾನದಲ್ಲಿ ಮುಂದುವರೆದಂತೆಲ್ಲ ವಿದ್ಯಾರ್ಥಿಗಳ ಅಂಕಗಳು ಮೌಲ್ಯ ಕಳೆದುಕೊಳ್ಳುತ್ತಾ, ಅವರಲ್ಲಿನ ಕೌಶಲ್ಯಗಳಿಗೆ ಮಾತ್ರ ಹೆಚ್ಚಾಗಿ ಬೆಲೆ ಸಿಗುವಂತಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೇ ಆದರೂ ಇದಕ್ಕೆ ತಕ್ಕಂತೆ ಸರಕಾರಿ ಕಾಲೇಜುಗಳಲ್ಲಿ ಕೌಶಲ್ಯಾಧಾರಿತ ಕೋರ್ಸ್‌ಗಳು ಹೆಚ್ಚಾಗಿಬೇಕಿದೆ. ಪಿಯುಸಿ ಮತ್ತು ಪದವಿ ಮಟ್ಟದಿಂದಲೇ ಕೃತಕ ಬುದ್ಧಿಮತ್ತೆ, ಡಿಜಿ ಟಲ್ ಮೀಡಿಯಾ, ಕಂಪ್ಯೂಟರ್ ಆಧಾರಿತ ಉಪ ಕೋರ್ಸ್‌ಗಳು ಪರಿಚಯವಾಗಿಬೇಕಿದ್ದು, ಅದರಲ್ಲೂ ಬಿಎ ಓದುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳ ಅಗತ್ಯತೆ ಹೆಚ್ಚಾಗಿದೆ.
ಏಕೆಂದರೆ ಇಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಮತ್ತು ಕೌಶಲ್ಯದ ಅಭಾವ ಹಲವಾರು ಕಾಲೇಜು ಗಳಲ್ಲಿ ತಾಂತ್ರಿಕ ಜ್ಞಾನಕ್ಕಿಂತ ಸೈದ್ಧಾಂತಿಕ ಜ್ಞಾನದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತು ತಾಂತ್ರಿಕ ಜ್ಞಾನದ ಕೌಶಲ್ಯವನ್ನು ಬಯಸುತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸರಕಾರ ಮತ್ತು ಶಿಕ್ಷಣ ವ್ಯವಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು.
- ಗಾನವಿ ಎಚ್.ಆರ್., ತಿಪಟೂರು