Jewel Fashion 2026: ಜ್ಯುವೆಲ್ ಫ್ಯಾಷನ್ಗೆ ಮರಳಿದ ಅಜ್ಜಿ ಕಾಲದ ಕಾಸಿನ ಸರ
Kasina Sara: ಹಳೆಯ ಕಾಲದ ಜ್ಯುವೆಲರಿ ಲಿಸ್ಟ್ನಲ್ಲಿದ್ದ ಕಾಸಿನ ಸರ, ಇದೀಗ ಈ ಜನರೇಷನ್ನ ಯುವತಿಯರನ್ನೂ ಸೆಳೆಯತೊಡಗಿದೆ. ಇವನ್ನು ಹೇಗೆಲ್ಲಾ ಧರಿಸಿ ಸುಂದರವಾಗಿ ಕಾಣಿಸಬಹುದು ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್ಗಳು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಶ್ರೀಮುಖಿ, ನಟಿ -
ಅಜ್ಜಿ ಕಾಲದ ಜ್ಯುವೆಲರಿ ಲಿಸ್ಟ್ನಲ್ಲಿದ್ದ ಕಾಸಿನ ಸರ ಇದೀಗ ಜ್ಯುವೆಲ್ ಫ್ಯಾಷನ್ಗೆ ಮರಳಿದೆ. ಈ ಜನರೇಷನ್ನ ಯುವತಿಯರನ್ನು ಸೆಳೆಯತೊಡಗಿದೆ. ನೆಕ್ಲೇಸ್ ಹಾಗೂ ಹಾರದ ರೂಪದಲ್ಲಿ ಮಾನಿನಿಯರನ್ನು ಸಿಂಗರಿಸುತ್ತಿದೆ.
ನೆಕ್ಲೇಸ್ ಶೈಲಿಯ ಕಾಸಿನ ಸರ
ನೆಕ್ಲೇಸ್ ಶೈಲಿಯ ಕಾಸಿನ ಸರವನ್ನು ಸೀರೆ ಹಾಗೂ ಸಲ್ವಾರ್ ಸೂಟ್ ಜತೆಗೂ ಧರಿಸಬಹುದು. ಉಡುಪಿನ ನೆಕ್ಲೈನ್ ಅಗಲವಾಗಿರಬೇಕಷ್ಟೇ! ಇದಕ್ಕೆ ಹೊಂದುವ ಶಾರ್ಟ್ ಕಾಸಿನ ಸರ ಧರಿಸಿದಾಗ ದೇಸಿ ಲುಕ್ ದೊರೆಯುತ್ತದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್.
ಹಾರದ ಶೈಲಿಯ ಕಾಸಿನ ಸರ
ಹಾರದ ಶೈಲಿಯ ಕಾಸಿನ ಸರಗಳು ರಾಣಿ-ಮಹಾರಾಣಿಯರ ಕಾಲದಿಂದಲೂ ರಾಯಲ್ ಜ್ಯುವೆಲರಿ ಕೆಟಗರಿಯಲ್ಲಿವೆ. ಶ್ರೀಮಂತರು ಹೆಚ್ಚಾಗಿ ಇವನ್ನು ಧರಿಸುತ್ತಿದ್ದರು. ಕಾಲ ಬದಲಾದಂತೆ ಸಾಮಾನ್ಯರು ಕೂಡ ಇದೀಗ ತಮ್ಮದಾಗಿಸಿಕೊಂಡಿದ್ದಾರೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಕಾಸಿನ ಸರದ ಮ್ಯಾಚಿಂಗ್ ಹೀಗೆ ಮಾಡಿ
ಹಾರದಂತಿರುವ ಕಾಸಿನ ಸರವನ್ನು ಮದುವೆ ಸಮಾರಂಭಗಳಿಗೆ ಧರಿಸಬಹುದು. ಇವು ಗ್ರ್ಯಾಂಡ್ ಸಮಾರಂಭಕ್ಕೆ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಡಿಸೈನರ್ ದೇವಿ.
ಬೇಡಿಕೆ ಹೆಚ್ಚಿಸಿಕೊಂಡ ಇಮಿಟೇಷನ್ ಕಾಸಿನ ಸರಗಳು
ಬಂಗಾರದ ಕಾಸಿನ ಸರಕ್ಕೆ ಸ್ಪರ್ಧೆ ಎಂಬಂತೆ ಇದೀಗ ವನ್ ಗ್ರಾಮ್ ಗೋಲ್ಡ್ ಹಾಗೂ ಇಮಿಟೇಷನ್ ಕಾಸಿನ ಸರಗಳು ಕೂಡ ಸಾಮಾನ್ಯ ಮಹಿಳೆಯರ ಕತ್ತನ್ನು ಅಲಂಕರಿಸುತ್ತಿವೆ. ಸಾಕಷ್ಟು ಚಾಲ್ತಿಯಲ್ಲಿವೆ ಕೂಡ. ಇನ್ನು ಕಾಸಿನ ಸರವನ್ನು ಧರಿಸಿದ ನಂತರ, ಪ್ರತ್ಯೇಕವಾಗಿ ಹತ್ತಿ ಬಟ್ಟೆಯಲ್ಲಿ ಕವರ್ ಮಾಡಿ ಬಾಕ್ಸ್ನಲ್ಲಿಡಿ. ವೆಲ್ವೆಟ್ ಬಟ್ಟೆಯಲ್ಲಿಟ್ಟಲ್ಲಿ ಅದರ ಶೈನಿಂಗ್ ಕಡಿಮೆಯಾಗದು. ಹೆಚ್ಚು ಪಾಲಿಶ್ ಮಾಡಿಸುವುದು ಬೇಡ. ಡಲ್ ಫಿನಿಶಿಂಗ್ ಇಂದು ಫ್ಯಾಷನ್ನಲ್ಲಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಧಾ ಕೇಸರಿ.
ಕಾಸಿನ ಸರ ಸಂರಕ್ಷಣೆ
- ಇತರೇ ಜ್ಯುವೆಲ್ಗಳೊಂದಿಗೆ ಇರಿಸಬೇಡಿ. ಸ್ಕ್ರ್ಯಾಚ್ ಆಗುವ ಸಾಧ್ಯತೆಗಳಿರುತ್ತವೆ.
- ಕಾಸಿನ ಸರದಲ್ಲಿರುವ ಕಾಸುಗಳ ಅಗಲಕ್ಕೆ ಹೊಂದುವಂತಹ ನೆಕ್ಲೈನ್ ಇರುವ ಉಡುಪು ಧರಿಸಿ.
- ಅಗಲ ಮುಖದವರು ಒಂದು ಕಾಸಿನ ಸರ ಧರಿಸಿದರೇ ಸಾಕು.
- ಆದಷ್ಟೂ ಪ್ಲೇನ್ ಸೀರೆ, ಸಲ್ವಾರ್ ಸೂಟ್ಗೆ ಇವು ಮ್ಯಾಚ್ ಆಗುತ್ತವೆ.
- ಕಾಸಿನಸರ ಧರಿಸಿದಾಗ ಹಣೆಗೆ ಬಿಂದಿ ಹಚ್ಚಿ.
- ಇದರೊಂದಿಗೆ ಇತರೇ ಆ್ಯಂಟಿಕ್ ಡಿಸೈನ್ ಆಭರಣಗಳನ್ನು ಕೂಡ ಧರಿಸಬಹುದು.