Star Fashion 2026: ಟ್ರೆಂಡಿಯಾಗಿರುವ ಅನುಪಮಾ ಪರಮೇಶ್ವರನ್ ಧರಿಸಿದ ಜುಮ್ಕಾಗಳು
Anupama Parameswaran: ಬಹುಭಾಷಾ ತಾರೆ ಅನುಪಮಾ ಪರಮೇಶ್ವರನ್ ಜುಮ್ಕಾ ಲವ್ವರ್. ಅವರು ಧರಿಸಿದ ಒಂದೊಂದು ಜುಮ್ಕಾಗಳು ಸದ್ಯ ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಾನಿನಿಯರ ಕಿವಿಯನ್ನು ಸವಾರಿ ಮಾಡುತ್ತಿವೆ. ಅವುಗಳಲ್ಲಿ ಯಾವ್ಯಾವು ಹಿಟ್ ಲಿಸ್ಟ್ನಲ್ಲಿವೆ ಎಂಬ ಮಾಹಿತಿ ಇಲ್ಲಿದೆ.
ಚಿತ್ರಗಳು: ಅನುಪಮಾ ಪರಮೇಶ್ವರನ್, ನಟಿ -
ಬಹುಭಾಷಾ ತಾರೆ ಅನುಪಮಾ ಪರಮೇಶ್ವರನ್ ಜುಮ್ಕಾ ಲವ್ವರ್. ಅವರು ಧರಿಸಿದ ಒಂದೊಂದು ಜುಮ್ಕಾಗಳು ಸದ್ಯ ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಾನಿನಿಯರ ಕಿವಿಯನ್ನು ಸವಾರಿ ಮಾಡುತ್ತಿವೆ. ಅವುಗಳಲ್ಲಿ ಯಾವ್ಯಾವು ಹಿಟ್ ಲಿಸ್ಟ್ನಲ್ಲಿವೆ. ಇಲ್ಲಿದೆ ಡಿಟೇಲ್ಸ್.
ಬಟ್ಟಲು ಶೇಪ್ನ ಜುಮ್ಕಾ
ನೋಡಲು ಥೇಟ್ ಚಿಕ್ಕ ಬಟ್ಟಲಿನಂತೆ ಕಾಣಿಸುವ ಈ ಜುಮ್ಕಾಗಳು ಗೋಲ್ಡ್ ಹಾಗೂ ಬ್ಲ್ಯಾಕ್ ಹಾಗೂ ವೈಟ್ ಮೆಟಲ್ನಲ್ಲಿ ಲಭ್ಯ. ಇವು ಟ್ರೆಡಿಷನಲ್ ಲುಕ್ ಬಯಸುವವರ ಕಿವಿಯನ್ನು ಅಲಂಕರಿಸುತ್ತಿವೆ.
ಮಿನಿ ಜುಮ್ಕಾ ಕಮಾಲ್
ಪ್ರತಿದಿನ ಧರಿಸಬಹುದಾದಂತಹ ಮಿನಿ ಜುಮ್ಕಾಗಳು ಎಂತಹವರಿಗೂ ಡೀಸೆಂಟ್ ಲುಕ್ ನೀಡುತ್ತವೆ. ಅದರಲ್ಲೂ ಟೀನೇಜ್ ಹುಡುಗಿಯರಿಗೆ ಅಂದವಾಗಿ ಕಾಣಿಸುತ್ತವೆ. ಸೆಲ್ವಾರ್, ಕುರ್ತಾ ಹಾಗೂ ಸ್ಕರ್ಟ್, ಫ್ರಾಕ್ ಎಲ್ಲವಕ್ಕೂ ಮ್ಯಾಚ್ ಆಗುತ್ತವೆ.
ಬ್ಲ್ಯಾಕ್ & ವೈಟ್ ಮೆಟಲ್ ಜುಮ್ಕಾ
ಇತ್ತೀಚೆಗೆ ಇಂಡೋ-ವೆಸ್ಟರ್ನ್ ಲುಕ್ಗೆ ಮ್ಯಾಚ್ ಆಗುವಂತಹ ಬ್ಲ್ಯಾಕ್ ಮತ್ತು ವೈಟ್ ಜುಮ್ಕಾಗಳು ಬಂದಿವೆ. ಮೊದಲಿನಿಂದಲೂ ಹಿಟ್ ಲಿಸ್ಟ್ನಲ್ಲೆ ಇರುವ ಈ ಶೈಲಿಯ ಜುಮ್ಕಾಗಳು ಸದ್ಯ ಜೆನ್ ಜಿ ಜನರೇಷನ್ ಹುಡುಗಿಯರ ಜ್ಯುವೆಲರಿ ಫ್ಯಾಷನ್ನಲ್ಲಿ ಟಾಪ್ನಲ್ಲಿವೆ.
ಬ್ಯೂಟಿಫುಲ್ ಮುತ್ತಿನ ಜುಮ್ಕಾಗಳು
ಗೋಲ್ಡ್ ಮಾತ್ರವಲ್ಲ, ಬ್ಲ್ಯಾಕ್ & ವೈಟ್ ಮೆಟಲ್ನ ಮುತ್ತಿನ ಜುಮ್ಕಾಗಳು ಬಹುತೇಕ ಎಲ್ಲಾ ಹೆಣ್ಣುಮಕ್ಕಳನ್ನು ಸೆಳೆದಿವೆ. ಹುಡುಗಿಯರನ್ನು ಮಾತ್ರವಲ್ಲ, ವಿವಾಹಿತ ಮಾನಿನಿಯರ ಕಿವಿಯನ್ನು ಅಲಂಕರಿಸುತ್ತಿವೆ. ಸೆಲೆಬ್ರೆಟಿ ಲುಕ್ ನೀಡುತ್ತಿವೆ.
ಸ್ಟೋನ್ ಜುಮ್ಕಾಗಳು
ನಾನಾ ಬಗೆಯ ಕಲರ್ಫುಲ್ ಹರಳುಗಳುಳ್ಳ ಸ್ಟೋನ್ಸ್ ಹಾಗೂ ಹರಳಿನ ಮುತ್ತಿನ ಜುಮ್ಕಾಗಳು ಸೀರೆ ಅಥವಾ ಡ್ರೆಸ್ಗಳಿಗೆ ಮ್ಯಾಚ್ ಆಗುವಂತಹ ವಿನ್ಯಾಸದಲ್ಲಿ ಆಗಮಿಸಿವೆ. ಇವು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ.