Summer Fashion 2026: ಜೆನ್ ಜಿ ಯುವತಿಯರನ್ನು ಅಪ್ಪಿದ ಕಾಟನ್ ಕಾರ್ಸೆಟ್ ಡ್ರೆಸ್
ಇದುವರೆಗೂ ಹೈ ಫ್ಯಾಷನ್ ಲಿಸ್ಟ್ನಲ್ಲಿದ್ದ ಕಾರ್ಸೆಟ್ ಡ್ರೆಸ್ಗಳು, ಕಾಟನ್ ಫ್ಯಾಬ್ರಿಕ್ನಲ್ಲಿ ಲಗ್ಗೆ ಇಟ್ಟಿದ್ದು, ಸದ್ಯ ಜೆನ್ ಜಿ ಹುಡುಗಿಯರನ್ನು ಅಪ್ಪಿವೆ. ಈ ಉಡುಗೆಯ ಸ್ಪೆಷಾಲಿಟಿಯಾದರೂ ಏನು? ಸ್ಟೈಲಿಂಗ್ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ಗೀತಾಂಜಲಿ ಸಿಂಗ್, ನಟಿ -
ಕಾಟನ್ ಕಾರ್ಸೆಟ್ ಡ್ರೆಸ್ಗಳು ಜೆನ್ ಜಿ ಹುಡುಗಿಯರನ್ನು ಬೇಸಿಗೆಯಲ್ಲೂ ಅಪ್ಪಿಕೊಂಡಿವೆ.
ಕೈಗೆಟಕುವ ಬೆಲೆಯಲ್ಲಿ ಕಾಟನ್ ಕಾರ್ಸೆಟ್ ಡ್ರೆಸ್
ಹೌದು, ಇದುವರೆಗೂ ನಾನಾ ದುಬಾರಿ ಬೆಲೆಯ ಫ್ಯಾಬ್ರಿಕ್ನಲ್ಲಿ ಹೈ ಫ್ಯಾಷನ್ ಲಿಸ್ಟ್ನಲ್ಲಿದ್ದ ಕಾರ್ಸೆಟ್ ಡ್ರೆಸ್ಗಳು, ಇದೀಗ ಸಾಮಾನ್ಯ ಹುಡುಗಿಯರು ಧರಿಸುವಂತೆ, ಕೈಗೆಟಕುವ ದರದಲ್ಲಿ ಫ್ಯಾಷನ್ಲೋಕದಲ್ಲಿ ಬಿಡುಗಡೆಗೊಂಡಿವೆ. ಸಮ್ಮರ್ ಸೀಸನ್ನ ಫ್ಯಾಷನ್ನ ಟಾಪ್ ಲಿಸ್ಟ್ಗೆ ಸೇರಿವೆ.
ಗೀತಾಂಜಲಿ ಧರಿಸಿದ ಕಾಟನ್ ಕಾರ್ಸೆಟ್ ಡ್ರೆಸ್
ನಟಿ ಗೀತಾಂಜಲಿ ಧರಿಸಿದ್ಧ ಕಾಟನ್ ಕಾರ್ಸೆಟ್ ಡ್ರೆಸ್, ಈ ಸೀಸನ್ನ ಟಾಪ್ ಕಾಟನ್ ಡ್ರೆಸ್ಗಳ ಲಿಸ್ಟ್ನಲ್ಲಿ ಸೇರಿದೆ. ವಕೇಷನ್ ಮೋಡ್ನಲ್ಲಿರುವ ಸೆಲೆಬ್ರೆಟಿಗಳು ಕೂಡ ಈ ಕಾಟನ್ ಕಾರ್ಸೆಟ್ ಡ್ರೆಸ್ಗಳ ಮೋಹಕ್ಕೆ ಸಿಲುಕತೊಡಗಿದ್ದಾರೆ. ಪರಿಣಾಮ, ಇದೀಗ ಸಾಮಾನ್ಯ ಯುವತಿಯರು ಅದರಲ್ಲೂ ಜೆನ್ ಜಿ ಹುಡುಗಿಯರು ಇವನ್ನು ಅಪ್ಪಿಕೊಂಡಿದ್ದಾರೆ. ಸೀಸನ್ ಟ್ರೆಂಡ್ಗೆ ಸೇರಿಸಿದ್ದಾರೆ.
ಕಾಟನ್ ಕಾರ್ಸೆಟ್ ಡ್ರೆಸ್ ಸ್ಪೆಷಾಲಿಟಿ
ಇದುವರೆಗೂ ಕಾಟನ್ ಫ್ಯಾಬ್ರಿಕ್ನ ನಾನಾ ಉಡುಪುಗಳು ಬೇಸಿಗೆಯಲ್ಲಿ ಚಾಲ್ತಿಯಲ್ಲಿದ್ದವು. ದೇಹದ ಮೇಲ್ಭಾಗದ ವಿನ್ಯಾಸ ಬಿಗಿಯಾಗಿ ಕೂರುವುದರಿಂದ ಈ ಕಾರ್ಸೆಟ್ ಡ್ರೆಸ್ ಸೀಸನ್ನಲ್ಲಿ ಔಟ್ ಆಗಬಹುದೆಂದು ಫ್ಯಾಷನಿಸ್ಟಾಗಳು ಭಾವಿಸಿದ್ದರು. ಆದರೆ, ಪ್ರಯೋಗಾತ್ಮಕವಾಗಿ ವಿನ್ಯಾಸಗೊಳಿಸಿದ ಈ ಡ್ರೆಸ್ಗಳು ಬಿಡುಗಡೆಗೊಂಡಿದ್ದೇ ತಡ ಜೆನ್ ಜಿ ಯುವತಿಯರು ಮುಗಿಬಿದ್ದು ಕೊಳ್ಳಲಾರಂಭಿಸಿದರು. ಹಾಗಾಗಿ ಬೇಸಿಗೆಯಲ್ಲೂ ಈ ಡ್ರೆಸ್ ಟ್ರೆಂಡಿಯಾಗಲು ಕಾರಣವಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಕಾಟನ್ ಕಾರ್ಸೆಟ್ ಡ್ರೆಸ್ ಟಿಪ್ಸ್
- ಖರೀದಿಸುವಾಗ ಆದಷ್ಟೂ ಸಾಫ್ಟ್ ಕಾಟನ್ ಕಾರ್ಸೆಟ್ ಔಟ್ಫಿಟ್ ಕೊಳ್ಳಿ.
- ಈ ಉಡುಗೆ ಬಿಗಿಯಾಗಿ ಕೂರುವುದರಿಂದ ಆದಷ್ಟೂ ಒಂದಿಂಚು ಲೂಸಾಗಿರುವ ಡ್ರೆಸ್ ಆಯ್ಕೆ ಮಾಡಿ.
- ಬೇಸಿಗೆಯ ಫೋಟೋಶೂಟ್ನಲ್ಲಿ ಅಂದವಾಗಿ ಕಾಣಿಸುತ್ತದೆ.
- ಸಿಂಪಲ್ ಲುಕ್ ಕೂಡ ಈ ಡ್ರೆಸ್ಗೆ ಹೊಂದುತ್ತದೆ.