ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today December 16th: ಧನು ರಾಶಿಗೆ ರವಿಯ ಪ್ರವೇಶದಿಂದ ಅದೃಷ್ಟವೋ ಅದೃಷ್ಟ; ಇಷ್ಟಾರ್ಥ ಸಿದ್ಧಿ, ಧನಾಗಮನ

ನಿತ್ಯ ಭವಿಷ್ಯ ಡಿಸೆಂಬರ್ 16, 2025: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರದ ಡಿಸೆಂಬರ್ 16ನೇ ತಾರೀಖಿನ ಈ ದಿನ, ರವಿ ಧನು ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ. ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ರವಿಯ ಪ್ರಭಾವದಿಂದ ಈ ರಾಶಿಗೆ ಸೌಭಾಗ್ಯ

ಸಾಂದರ್ಭಿಕ ಚಿತ್ರ -

Profile
Pushpa Kumari Dec 16, 2025 6:00 AM

ಬೆಂಗಳೂರು, ಡಿ. 16: ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು, ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನರಾಶಿ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಮೇಷ ರಾಶಿಯ ಮೇಲೆ ಇಂದು ಪ್ರತಿಕೂಲ ಪರಿಣಾಮ ಬೀರಲಿದೆ.‌ ಇಂದು ಅದೃಷ್ಟ ಪರೀಕ್ಷೆಯೂ ನಡೆಯಲಿದ್ದು ಕೆಲವೊಂದು ಬದಲಾವಣೆಗಳು ಆಗುವ ಸಾಧ್ಯತೆ ಇದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ರವಿಯ ಗೋಚರದಿಂದ ಮನಸ್ಸಿಗೆ ಕ್ಷೇಷ ಆಗುವ ಸಾಧ್ಯತೆ ಇದೆ. ಅನೇಕ ವಿಚಾರದಲ್ಲಿ ನಿಮಗೆ ಸಹಕಾರ ಪ್ರಾಪ್ತಿ ಆಗದೇ ಇರಬಹುದು. ಇದರಿಂದ ನಿಮಗೆ ಬಹಳಷ್ಟು ಬೇಸರ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ನಿಮ್ಮ ಪಾರ್ಟನರ್‌ಶಿಪ್‌ನಲ್ಲಿ, ಪ್ರೀತಿ ಪಾತ್ರರಲ್ಲಿ ಮನಸ್ತಾಪ ಮೂಡಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಈ ದಿನ ಉತ್ತಮವಾಗಿರಲಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಮುನ್ನಡೆ ಕಾಣುತ್ತೀರಿ.‌ ಕಾರ್ಯ ಕ್ಷೇತ್ರದಲ್ಲಿ ಕೂಡ ಯಶಸ್ಸು ಗಳಿಸುತ್ತೀರಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಅಷ್ಟೇನು ಉತ್ತಮವಾಗಿರುವುದಿಲ್ಲ.‌ ಹಣಕಾಸು ಹಾಗೂ ದಾಂಪತ್ಯ ವಿಚಾರದಲ್ಲಿ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರ, ಮನೆಯಲ್ಲಿ ಕೆಲವೊಂದು ವಿಚಾರದಲ್ಲಿ ನೆಮ್ಮದಿ ಸಿಗದೇ ಇರಬಹುದು. ಹಾಗಾಗಿ ಎಲ್ಲರ ಜತೆ ನೀವು ವಿನಯ ಪೂರ್ವಕವಾಗಿ ಇರಬೇಕಾಗುತ್ತದೆ.

ಸೋಮವಾರ ಬಂತೆಂದರೆ ಶಿವನ ಪೂಜಿಸಿ : ಪರಶಿವನನ್ನು ಅರ್ಚಿಸುವುದು ಹೇಗೆ ಗೊತ್ತಾ?

ತುಲಾ ರಾಶಿ: ತುಲಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಸಾಮಾಜಿಕ ‌ಚಟುವಟಿಕೆಯಲ್ಲಿ ಜಯ ಸಿಗುತ್ತದೆ. ಪತ್ರಿಕೋದ್ಯಮ ಮತ್ತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಇರುವವರಿಗೆ ಉತ್ತಮ ದಿನ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಕುಟುಂಬದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.‌ ಹಾಗಾಗಿ ಆರ್ಥಿಕತೆ ಸಂಬಂಧಿಸಿದಂತೆ ತೊಂದರೆ ಕಾಡಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ನಿಮ್ಮ ವೈಯಕ್ತಿಕ ಜೀವನ ಹಾಗೂ ವ್ಯಕ್ತಿತ್ವದಲ್ಲಿ ಅನೇಕ‌ ಬದಲಾವಣೆ ಕಂಡು ಬರಬಹುದು.‌ ಕೆಲಸ ಕಾರ್ಯದಲ್ಲಿ ಕೂಡ ಜಯ ಸಿಗಲಿದೆ.

ಮಕರ ರಾಶಿ: ಈ ದಿನ ಮಕರ ರಾಶಿಯವರಿಗೆ ಕಷ್ಟದ ದಿನವಾಗಿದೆ. ನಿಮಗೆ ಅಗತ್ಯ ಸಹಕಾರ ಇಂದು ಸಿಗದೇ ಇರಬಹುದು.

ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಧನಾಗಮನದ ಸೂಚನೆ ಇದೆ.

ಮೀನ ರಾಶಿ: ಮೀನ ರಾಶಿಯವರಿಗೆ ಅತೀ ಉತ್ತಮ ದಿನವಾಗಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಅದೇ ರೀತಿ ಬಹಳಷ್ಟು ಖುಷಿಯಿಂದ ಇಂದು ಸಮಯ ಕಳೆಯಲಿದ್ದೀರಿ.