ದಿನ ಭವಿಷ್ಯ ನವೆಂಬರ್ 12, 2026: ಹುಷಾರ್! ಯಾರಿಗೂ ಸಾಲ ಕೊಡಲು ಹೋಗಬೇಡಿ, ವಾಪಸ್ ಬರಲ್ಲ
Horoscope Today November 12, 2026: ಕಾರ್ತಿಕ ಮಾಸದ, ಪರಾಭವ ನಾಮ ಸಂವತ್ಸರದ, ದಕ್ಷಿಣಾಯನ, ಶರದೃತು, ಶುಕ್ಲ ಪಕ್ಷದ ಗುರುವಾರ 12 ರಾಶಿಯವರ ಭವಿಷ್ಯ ಹೇಗಿರಲಿದೆ? ಯಾರಿಗೆಲ್ಲ ಶುಭ ಫಲವಿದೆ? ಯಾರು ಎಚ್ಚರದಿಂದಿರಬೇಕು? ಇಲ್ಲಿದೆ ಸಂಪೂರ್ಣ ವಿವರ.
ಸಾಂದರ್ಭಿಕ ಚಿತ್ರ -
ಮೇಷ ರಾಶಿ: ಉದ್ಯೋಗದಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಳ್ತೀರಿ. ಸಂಜೆ ಒಳ್ಳೆಯ ಸುದ್ದಿ ಬರುತ್ತೆ.
ವೃಷಭ ರಾಶಿ: ಕುಟುಂಬದಲ್ಲಿ ಸಂತೋಷ. ಹೊಸ ಅವಕಾಶ ದೊರೆಯುವ ಸಾಧ್ಯತೆ. ಮನಸ್ಸಿಗೆ ತುಂಬಾ ಶಾಂತಿ ಸಿಗಲಿದೆ.
ಮಿಥುನ ರಾಶಿ: ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಸ್ನೇಹಿತ ನಿಮ್ಮ ಬಗ್ಗೆ ಒಳ್ಳೆಯ ಮಾತು ಹೇಳ್ತಾನೆ. ಮನಸ್ಸಿಗೆ ತುಂಬಾ ಖುಷಿ ಆಗುತ್ತೆ.
ಕರ್ಕಾಟಕ ರಾಶಿ: ಆರ್ಥಿಕವಾಗಿ ಶುಭದಿನ. ಆರೋಗ್ಯದ ಕಡೆ ಗಮನ ಕೊಡಿ. ಹಣದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಯಾರಿಗೂ ಸಾಲ ಕೊಡಬೇಡಿ. ಕೊಟ್ಟರೆ ವಾಪಸ್ ಬರಲ್ಲ.
ಸಿಂಹ ರಾಶಿ: ಗೌರವ ಮತ್ತು ಪ್ರಶಂಸೆ ಸಿಗುವ ಸಾಧ್ಯತೆ. ಇಂದು ನೀವು ತುಂಬಾ ಬ್ಯುಸಿ ಇರ್ತೀರಿ. ಒಂದರ ಮೇಲೊಂದರಂತೆ ಕಾಲ್ ಬರುತ್ತೆ.
ಕನ್ಯಾ ರಾಶಿ: ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ನಿಮ್ಮ ರಾಶಿಗೆ ಚಂದ್ರ ಬಂದಿದ್ದಾನೆ. ನೀವು ಅಂದುಕೊಂಡಿದ್ದೆಲ್ಲ ನಡೆಯುತ್ತೆ. ನಿಮ್ಮ ಮಾತಿಗೆ ಬೆಲೆ ಸಿಗಲಿದೆ.
ಗುರುವಾರ ಸಾಯಿಬಾಬಾ ಆಶೀರ್ವಾದ ಪಡೆಯಲು ಈ ಪೂಜೆ ಮಾಡಿ
ತುಲಾ ರಾಶಿ: ಪ್ರೀತಿ ಮತ್ತು ಕುಟುಂಬ ಜೀವನದಲ್ಲಿ ಸಂತೋಷ. ಲವರ್ ಜತೆ ದೇವಸ್ಥಾನಕ್ಕೆ ಹೋಗ್ತೀರಿ. ಇಬ್ಬರಿಗೂ ಒಳ್ಳೆಯ ಸಮಯ.
ವೃಶ್ಚಿಕ ರಾಶಿ: ಹೊಸ ಯೋಜನೆ ಆರಂಭಕ್ಕೆ ಉತ್ತಮ ಸಮಯ. ಆರೋಗ್ಯದಲ್ಲಿ ಸುಧಾರಣೆ. ಬಹಳ ದಿನದ ತಲೆನೋವು ಕಡಿಮೆ ಆಗಲಿದೆ. ಒಳ್ಳೆಯ ನಿದ್ದೆ ಬರಲಿದೆ.
ಧನು ರಾಶಿ: ಗುರು ಹಿರಿಯರ ಸಲಹೆಯಿಂದ ಲಾಭವಾಗಬಹುದು. ನಿಮ್ಮ ರಾಶಿಯ ಅಧಿಪತಿ ಗುರು. ಇಂದು ನಿಮ್ಮದೇ ದಿನ. ನಿಮ್ಮ ದೊಡ್ಡ ಆಸೆ ನೆರವೇರುವ ಸೂಚನೆ ಇದೆ.
ಮಕರ ರಾಶಿ: ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಕೆಲಸದಲ್ಲಿ ಪ್ರಮೋಷನ್ ಸುದ್ದಿ ಕೇಳಿ ಬರಲಿದೆ. ಬಾಸ್ ನಿಮ್ಮನ್ನು ಕರೆದು ಮಾತಾಡ್ತಾರೆ.
ಕುಂಭ ರಾಶಿ: ಹೊಸ ಪರಿಚಯ ಮತ್ತು ಅವಕಾಶ ದೊರೆಯಬಹುದು.
ಮೀನ ರಾಶಿ: ಮನಸ್ಸಿಗೆ ನೆಮ್ಮದಿ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಇಂದು ನೀವು ಯಾರಿಗೋ ಸಹಾಯ ಮಾಡಲಿದ್ದೀರಿ. ಅದಕ್ಕೆ ತಕ್ಕ ಪ್ರತಿಫಲ ಸಿಗಲಿದೆ.