Horoscope Today January 23rd: ಹಣಕಾಸಿನ ವಿಚಾರದಲ್ಲಿ ಇಂದು ಭಾರಿ ಏರಿಳಿತ
ನಿತ್ಯ ಭವಿಷ್ಯ ಜನವರಿ 23, 2026: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪಂಚಮಿ ತಿಥಿ, ಪೂರ್ವಭಾದ್ರಾಪದ ನಕ್ಷತ್ರದ ಜನವರಿ 23ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿದೆ ಎಂದು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶರದೃತು, ಮಘೆ ಮಾಸೆ, ಶುಕ್ಷ ಪಕ್ಷ, ಪೂರ್ವಭಾದ್ರಾ ಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಪೂರ್ವಭಾದ್ರ ನಕ್ಷತ್ರ ಇದ್ದು, ಇದರ ಅಧಿಪತಿ ಗುರು. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಅತ್ಯುತ್ತಮ ದಿನವಾಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ಏರಿಳಿತವಾಗಲಿದ್ದು ಮುಖ್ಯವಾದ ನಿರ್ಧಾರಗಳು ಇಂದು ಬೇಡ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಅದೃಷ್ಟದಲ್ಲಿ ಬದಲಾವಣೆ ಆಗುತ್ತಿದೆ ಎನ್ನುವ ನೋವು ಕಾಡಬಹುದು. ಆದರೆ ಮಧ್ಯಾಹ್ನ ಬಳಿಕ ಇಷ್ಟಾರ್ಥ ಸಿದ್ಧಿಯಾಗಲಿದ್ದು ಹೆಚ್ಚಿನ ಸಂತೋಷ ಸಿಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿಯರುವವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟದ ದಿನವಾಗಲಿದೆ. ಮಧ್ಯಾಹ್ನ ಬಳಿಕ ಕಾರ್ಯಕ್ಷೇತ್ರದಲ್ಲಿ ನೀವು ಯಶಸ್ಸು ಕಾಣಬಹುದು.
ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಸ್ವಲ್ಪ ಕ್ಷೇಷ ಇರುತ್ತದೆ. ಮಧ್ಯಾಹ್ನ ಬಳಿಕ ಒಂದು ತಿರುವು ಬರಲಿದ್ದು, ಅದೃಷ್ಟ ಖುಲಾಯಿಸುತ್ತದೆ.
ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ ದಿನ ಭವಿಷ್ಯ:
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಕೆಲಸಗಳು ಎಲ್ಲ ನಿಮ್ಮ ಪರವಾಗಿ ನಡೆಯುತ್ತಿರುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿಗೆ ಕ್ಷೇಷ ಉಂಟಾಗಲಿದ್ದು ಮುಖ್ಯ ನಿರ್ಧಾರಗಳು ಯಾವುದೇ ಬೇಡ.
ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು?
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಪೂರ್ತಿ ದಿನವೂ ಉತ್ತಮವಾಗಲಿದ್ದು, ಅನೂಕೂಲಕವಾಗಿದೆ. ಸಾಮಾಜಿಕ ವಿಚಾರದಲ್ಲಿ ಯಶಸ್ಸು ಸಿಗಲಿದ್ದು, ಶತ್ರುಗಳು ಹಿಮ್ಮೆಟ್ಟಬಹುದು.
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಇದ್ದು, ಆತ್ಮವಿಶ್ವಾಸ ಚೆನ್ನಾಗಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಕಾಣುತ್ತೀರಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಕಾಡಬಹುದು. ಆಸ್ತಿ ಪಾಸ್ತಿ ವಿಚಾರ, ತಾಯಿಯ ಆರೋಗ್ಯ ಬಗ್ಗೆ ತಲೆಕೆಡಿಸಿ ಕೊಳ್ಳುವ ದಿನ ಇದಾಗಲಿದೆ. ಮಧ್ಯಾಹ್ನ ಬಳಿಕ ಇದೆಲ್ಲ ಸರಿಯಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ನಿಮ್ಮ ಪ್ರಕಾರ ಎಲ್ಲವೂ ನಡೆಯುತ್ತಿರುತ್ತದೆ. ಅತ್ಯಂತ ಆತ್ಮವಿಶ್ವಾಸ ದಿಂದ ಕೆಲಸ ಮಾಡುತ್ತೀರಿ. ಮಧ್ಯಾಹ್ನ ಬಳಿಕ ಮನೆಯ ಜವಾಬ್ದಾರಿ, ಹಣಕಾಸಿನ ಜವಾಬ್ದಾರಿ ಹೆಚ್ಚಾಗಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಚಟುವಟಿಕೆಗಳಲ್ಲಿ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ಸ್ನೇಹಿತರ ಜತೆ ಖುಷಿಯಿಂದ ದಿನ ಕಳೆಯುತ್ತೀರಿ.
ಕುಂಭರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಧ್ಯಾಹ್ನ ಬಳಿಕ ಇದೇ ಖುಷಿಯನ್ನು ಕುಟುಂಬ ಜತೆ ಕಳೆಯುತ್ತೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟ ಕಂಡು ಬರುತ್ತದೆ. ಮಧ್ಯಾಹ್ನ ಬಳಿಕ ಮಾರ್ಗದರ್ಶನ ಪ್ರಾಪ್ತಿಯಾಗಲಿದ್ದು ಮನಸ್ಸು ತಿಳಿಯಾಗುತ್ತದೆ.