ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಎಪ್ರಿಲ್ 18, 2026: ಈ ರಾಶಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹತಾಶೆ ಉಂಟಾಗುವ ದಿನ!

Horoscope Today April 18: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಪ್ರತಿಪಾ ತಿಥಿ, ಅಶ್ವಿನಿ ನಕ್ಷತ್ರದ ಎಪ್ರಿಲ್ 18ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಈ ರಾಶಿಗೆ ಇಂದು ಧನಲಾಭದ ಸೂಚನೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Apr 18, 2026 6:00 AM

ಬೆಂಗಳೂರು: ಇಂದು ಪರಾಭವನಾಮ ಸಂವತ್ಸರದ ಉತ್ತರಾ ಯಣ,ವಸಂತ ಋತು ವೈಶಾಖ ಮಾಸೆ, ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಮೇಷ ರಾಶಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ರಾಶಿಯಲ್ಲೇ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅದೇ ರೀತಿ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಸಮಸ್ಯೆ ಎಲ್ಲವೂ ಇಂದು ಪರಿಹಾರವಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮಿತ್ರತ್ವದಲ್ಲಿ ಒಡಕು ಕಾಣುವ ಸಾಧ್ಯತೆಗಳು ಜಾಸ್ತಿ ಇರುತ್ತದೆ. ಕಾರ್ಯಕ್ಷೇತ್ರದಲ್ಲಿ ಕೂಡ ಹೆಚ್ಚಿನ ಹತಾಶೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಮಿತ್ರರಿಂದ ಧನ ಆಗಮನ ಆಗುವ ಸಾಧ್ಯತೆ ಕೂಡ ಇರುತ್ತದೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ದೊಡ್ಡ ಯಶಸ್ಸು ಸಿಗಬಹುದು. ಎಲ್ಲ ಕೆಲಸ ಕಾರ್ಯದಲ್ಲೂ ನೀವು ನೆಮ್ಮದಿಯನ್ನು ಕಾಣಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ.‌ ಎಲ್ಲ ವಿಚಾರದಲ್ಲೂ ಹೆಚ್ಚಿನ ಯಶಸ್ಸು ಪಡೆಯುವ ದಿನ ನಿಮ್ಮದು ಆಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಯಾವುದೇ ಮುಖ್ಯವಾದ ನಿರ್ಧಾರವನ್ನು ಇಂದು ಮಾಡಲು ಹೋಗಬೇಡಿ. ನಿಮ್ಮ ಪ್ರೀತಿ ಪಾತ್ರರಿಂದಲೇ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇರುತ್ತದೆ.

Vastu Tips: ಮನೆಯಲ್ಲಿ ಒಂಟೆಯ ಪ್ರತಿಮೆ ಇಟ್ಟರೆ ಶುಭವೇ? ವಾಸ್ತು-ಫೆಂಗ್ ಶೂಯಿ ಹೇಳೋದೇನು?

ತುಲಾ ರಾಶಿ: ತುಲಾ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ಪ್ರೀತಿ ಪಾತ್ರರ ಅತೀ ಹೆಚ್ಚಿನ ಸಹಾಯ ನಿಮಗೆ ಸಿಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಜಯ ಪ್ರಾಪ್ತಿಯಾಗುತ್ತದೆ. ಶತ್ರು ನಾಶ, ಶತ್ರು ದ್ವಂಸವಾಗಲಿದ್ದು ಉತ್ತಮ ಮಾರ್ಗದರ್ಶನ ಸಿಗುವ ದಿನ ನಿಮ್ಮದು ಆಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಕೆಲಸ ಕಾರ್ಯದಲ್ಲಿ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಯಶಸ್ಸು ಸಿಗದೇ ಇರಬಹುದು. ಹಣಕಾಸಿನ ವಿಚಾರವಾಗಿ ಜಾಗೃತಿ ವಹಿಸಿದರೆ ಒಳಿತು

ಮಕರ ರಾಶಿ: ಮಕರ ರಾಶಿಯವರು ಮನೆಯವರ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ತಾಯಿಯ ಆರೋಗ್ಯ ಬಗ್ಗೆ ನೀವು ಹೆಚ್ಚಿನ ಗಮನ ನೀಡಬೇಕು.

ಕುಂಭರಾಶಿ: ಈ ರಾಶಿಯವರಿಗೆ ಅತೀ ಉತ್ತಮವಾದ ದಿನ ವಾಗಿದೆ. ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ವ್ಯವಹಾರದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕ

ಮೀನ ರಾಶಿ: ಮೀನ ರಾಶಿಗೆ ಸಂಸಾರದ ತಾಪತ್ರಯಗಳು ಜಾಸ್ತಿಯಾಗಬಹುದು.ಹಾಗಾಗಿ ಮನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ.‌