ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜೂನ್ 24, 2026: ಇಂದು ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ

Horoscope Today June 24th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ದಶಮಿ ತಿಥಿ, ಚಿತ್ತಾ ನಕ್ಷತ್ರದ, ಜೂನ್ 24ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಗೆ ಇಂದು ನೆಮ್ಮದಿಯ ದಿನವಾಗಲಿದೆ

ಇಂಟರ್‌ನೆಟ್ ಚಿತ್ರ -

Profile
Pushpa Kumari Jun 24, 2026 6:00 AM

ಬೆಂಗಳೂರು, ಜೂ. 24: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ, ಚಿತ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಈ ರಾಶಿಗೆ ಕಷ್ಟದ ದಿನವಾಗಲಿದೆ. ಪ್ರೀತಿ ಪಾತ್ರರ ಜತೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇದೆ. ಹಾಗಾಗಿ ನೀವು ವಿನಯದಿಂದ ನಡೆದುಕೊಳ್ಳಬೇಕಾಗುತ್ತದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಶತ್ರು ನಾಶ ಹಾಗೂ ಶತ್ರು ಧ್ವಂಸವಾಗಲಿದ್ದು, ಆರೋಗ್ಯ ಸುಧಾರಣೆಯಾಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಗಮನ ಹರಿಯುತ್ತದೆ. ಇಂದು ನಿಮ್ಮ ಪ್ರೀತಿ ಪಾತ್ರರ ಜತೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

ಕಟಕ ರಾಶಿ: ಕಟಕ ರಾಶಿಯವರಿಗೆ ಅತ್ಯುತ್ತದ ದಿನವಾಗಲಿದೆ. ಆದರೂ ಕೂಡ ತಾಯಿಯ ಆರೋಗ್ಯ ಬಗ್ಗೆ ನೀವು ಗಮನ ಹರಿಸಬೇಕಾಗುತ್ತದೆ. ಕೋರ್ಟ್, ಕಚೇರಿ ವ್ಯವಹಾರದಲ್ಲೂ ತೊಂದರೆ ಉಂಟಾಗಬಹುದು.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ವ್ಯವಹಾರ ಮಾಡೋರಿಗೆ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಇದ್ದು ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಕನ್ಯಾ ರಾಶಿ: ಕನ್ಯಾ ರಾಶಿಯವರು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಿ ಮನೆಯ ಬಗ್ಗೆ ಇಂದು ಜವಾಬ್ದಾರಿ ವಹಿಸುತ್ತೀರಿ. ಸಂಸಾರದಲ್ಲಿ ಇಂದು ಹೆಚ್ಚಿನ ಜಾಗೃತಿ ಆವಶ್ಯಕ.

ತುಲಾ ರಾಶಿ: ತುಲಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾವುದೇ ಮುಖ್ಯವಾದ ನಿರ್ಧಾರ ಇಂದು ಬೇಡ. ನಿಮ್ಮ ಪರವಾಗಿ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ‌.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರೆ ಮುಖ್ಯವಾದ ಸ್ನೇಹದಲ್ಲಿ ಒಡಕು ಉಂಟಾಗಬಹುದು.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು ಎಲ್ಲ ಕೆಲಸ ಕಾರ್ಯದಲ್ಲಿ ಜಯವನ್ನು ಕಾಣುತ್ತೀರಿ.

ಮಕರ ರಾಶಿ: ಮಕರ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಅಭಿವೃದ್ಧಿ ಕಾಣುತ್ತೀರಿ.

ಕುಂಭ ರಾಶಿ: ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಿತ್ರರಿಂದ ಹಾಗೂ ಪ್ರೀತಿ ಪಾತ್ರರಿಂದ ಅತ್ಯಂತ ದೊಡ್ಡ ಖುಷಿ ನಿಮಗೆ ಸಿಗುತ್ತದೆ.

ಮೀನ ರಾಶಿ: ಮೀನ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆರೋಗ್ಯದಲ್ಲಿ ಇಂದು ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕು..