ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಅಕ್ಟೋಬರ್ 12, 2026: ಇಂದು ನವರಾತ್ರಿಯ ಎರಡನೇ ದಿನ! ಯಾವ ರಾಶಿಗೆ ಶುಭ ಫಲ?

Horoscope Today October 12th: ಪರಾಭವ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ದ್ವೀತಿಯ ತಿಥಿ, ಸ್ವಾತಿ ನಕ್ಷತ್ರದ ಅಕ್ಟೋಬರ್‌ 12ನೇ ತಾರೀಕಿನ ಈ ದಿನ ನವರಾತ್ರಿಯ ಎರಡನೇ ದಿನ 12 ರಾಸಿಯವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ರಾಶಿಯವರು ಇಂದು ಯಶಸ್ಸು ಕಾಣುತ್ತೀರಿ

ಸಾಂದರ್ಭಿಕ ಚಿತ್ರ -

Profile
Pushpa Kumari Oct 12, 2026 6:02 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷದ, ಸ್ವಾತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರ ಭವಿಷ್ಯ ಇಲ್ಲಿದೆ.

ಮೇಷ ರಾಶಿ: ಇಂದು ಅತೀ ಉತ್ತಮವಾದ ದಿನವಾಗಿದೆ.  ಪಾರ್ಟನರ್‌ಶಿಪ್‌  ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ.  ಮನಸ್ಸಿಗೆ ನೆಮ್ಮದಿ ಇದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಅಭಿವೃದ್ಧಿ ಕಾಣುತ್ತೀರಿ.

ವೃಷಭ ರಾಶಿ: ಈ ರಾಶಿಯವರಿಗೆ ಇಂದು ಯಶಸ್ಸಿನ ದಿನವಾಗಲಿದೆ. ಶತ್ರುಗಳು  ಹಿಮ್ಮೆಟ್ಟಲಿದ್ದು, ನೀವು ಜಯವನ್ನು ಕಾಣುತ್ತೀರಿ. ಕಾರ್ಯಕ್ಷೇತ್ರದಲ್ಲೂ ಹೆಚ್ಚಿನ ಅಭಿವೃದ್ಧಿ ಕಾಣಬಹುದು.

ಮಿಥುನ ರಾಶಿ: ಇಂದು ಈ ರಾಶಿಯವರಿಗೆ  ಉತ್ತಮ ದಿನವಾಗಲಿದೆ. ಆದರೆ ಪ್ರೇಮ, ಪ್ರೀತಿ ವಿಚಾರದಲ್ಲಿ ಬೇಸರ. ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ.

ಕಟಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ‌. ಆದರೆ ಮಾಧ್ಯಮ ಹಾಗೂ ಮಾರ್ಕೆಂಟಿಗ್ ವ್ಯವಹಾರದಲ್ಲಿ ಇರೋರಿಗೆ ಯಶಸ್ಸು ಸಿಗುತ್ತದೆ.

‌ಸಿಂಹ ರಾಶಿ: ಇಂದು ಉತ್ತಮ ದಿನವಾಗಲಿದೆ. ಮನಸ್ಸಿನಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಬಂಧು-ಬಾಂಧವರ ಜತೆ ಸರಿಯಾದ ದಿನ ಕಳೆಯುತ್ತೀರಿ.

ವಾಸ್ತು ದೋಷ , ಆರೋಗ್ಯ: ಯಾವ ದಿಕ್ಕು ಯಾವ ಅನಾರೋಗ್ಯ ಸಮಸ್ಯೆಗೆ ಕಾರಣ?

ಕನ್ಯಾ ರಾಶಿ: ಈ ದಿನ ಉತ್ತಮ ದಿನವಾಗಲಿದೆ. ಸಂಸಾರದಲ್ಲಿ ನೆಮ್ಮದಿ ಸಿಗಲಿದ್ದು ಅಂದುಕೊಂಡಂತ ಕೆಲಸಗಳು ಕೈ ಹಿಡಿಯಲಿವೆ.

ತುಲಾ ರಾಶಿ: ಇಂದು ಉತ್ತಮ ದಿನವಾಗಲಿದೆ. ಹಿಂದಿನ ದಿನದಲ್ಲಿ ಇದ್ದ ತೊಂದರೆ ಮಾಯವಾಗುತ್ತದೆ. ಕೆಲಸ ಕಾರ್ಯದಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ.

ವೃಶ್ಚಿಕ ರಾಶಿ: ಇಂದು ಕಷ್ಟದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ‌. ನಾನಾ ರೀತಿಯ ಯೋಚನೆ ಕಾಡಬಹುದು.

ಧನು ರಾಶಿ: ಇಂದು ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದ ಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕ ಲಾಭ ಸಿಗಬಹುದು‌.

ಮಕರ ರಾಶಿ: ಇಂದು ಉತ್ತಮ ದಿನವಾಗಲಿದೆ.  ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ತೊಂದರೆ ಮಾಯವಾಗುತ್ತದೆ.

ಕುಂಭ ರಾಶಿ: ಇಂದು ಉತ್ತಮ ದಿನವಾಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ ಆಗುತ್ತದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.

ಮೀನ ರಾಶಿ: ಇಂದು ಕಷ್ಟದ ದಿನವಾಗಲಿದೆ. ಯಾರ ಸಹಕಾರ ಕೂಡ ಸಿಗದೇ ಇರಬಹುದು. ಮನಸ್ಸಿಗೆ ಅತೀ ಹೆಚ್ಚಿನ ಬೇಸರ ಉಂಟಾಗಬಹುದು.