ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varsha Bhavisya: 2026: ತುಲಾ ರಾಶಿಯವರಿಗೆ ದುಸ್ವಪ್ನಗಳ ಕಾಟ! ಮಕ್ಕಳ ಬಗ್ಗೆ ಎಚ್ಚರವಹಿಸಿ

Tula Rashi: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2026ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಿಸದೇ ಇದ್ದರೂ, ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವಾಗಲಿದೆ. ಗ್ರಹಗಳ ಈ ಸಂಚಾರದಿಂದಾಗಿ ಎಲ್ಲಾ ರಾಶಿಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರಲಿದೆ. ದ್ವಾದಶ ರಾಶಿಗಳಲ್ಲಿ ವಿಶೇಷವಾಗಿರುವ ತುಲಾ ರಾಶಿಯವರ ಜೀವನದಲ್ಲಿ ಈ ಹೊಸ ವರ್ಷ ಶುಭವಾಗಲಿದೆಯಾ? ಗೊಂದಗಳು ದೂರವಾಗಲಿದೆಯಾ ಎಂಬುವುದನ್ನು ತಿಳಿಯೋಣ ಬನ್ನಿ.

ಹೊಸವರ್ಷದಲ್ಲಿ ಈ ರಾಶಿಯವರಿಗೆ ನಷ್ಟವೇ ಜಾಸ್ತಿ

ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ -

Profile
Sushmitha Jain Jan 13, 2026 9:00 AM

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 2026ರಲ್ಲಿ ಶನಿಯು ತನ್ನ ರಾಶಿಯನ್ನು ಬದಲಿಸದೇ ಇದ್ದರೂ, ಸೂರ್ಯ, ಮಂಗಳ, ಬುಧ ಸೇರಿದಂತೆ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವಾಗಲಿದೆ. ಗ್ರಹಗಳ ಈ ಸಂಚಾರದಿಂದಾಗಿ ಎಲ್ಲಾ ರಾಶಿಚಕ್ರದ ಜನರ ಮೇಲೆ ವಿಶೇಷ ಪರಿಣಾಮ ಬೀರಲಿದೆ. ದ್ವಾದಶ ರಾಶಿಗಳಲ್ಲಿ ವಿಶೇಷವಾಗಿರುವ ತುಲಾ ರಾಶಿಯವರ ಜೀವನದಲ್ಲಿ ಈ ಹೊಸ ವರ್ಷ ಶುಭವಾಗಲಿದೆಯಾ? ಗೊಂದಗಳು ದೂರವಾಗಲಿದೆಯಾ ಎಂಬುವುದನ್ನು ತಿಳಿಯೋಣ ಬನ್ನಿ.


ಭಾರತೀಯ ಜೋತಿಷಿ ಹಾಗೂ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಪ್ರಕಾರ, ತುಲಾ ರಾಶಿಯವರ ಜೀವನದಲ್ಲಿ 2025ರಂತೆ ಈ ವರ್ಷವೂ ಕೂಡ ತೊಂದರೆಗಳು, ಶುಭಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಲಿವೆ.

ಮಕ್ಕಳ ಬಗ್ಗೆ ಎಚ್ಚರವಿರಲಿ

ಈ ರಾಶಿಯವರಿಗೆ ಜೂನ್ 2ರ ನಂತರ ಗುರುಬಲ ತಪ್ಪುವುದರಿಂದ ಚಂದ್ರ ಮತ್ತು ಸರ್ಪ ಹಾಗೂ ಶನೇಶ್ಚರ ವಕ್ರ ದೃಷ್ಟಿ ಬೀರಲಿದ್ದಾರೆ. ಹಾಗಾಗಿ ಇವರು ಮಕ್ಕಳ ಬಗ್ಗೆ ಹೆಚ್ಚನ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಕ್ಕಳ ವಿದ್ಯಾಭ್ಯಾಸ, ದೈನಂದಿನ ಚಟುವಟಿಕೆಗಳ ಬಗ್ಗೆ‌ ಹೆಚ್ಚನ ಗಮನಹರಿಸಬೇಕಿದ್ದು, ವಿದೇಶದಲ್ಲಿ ಉದ್ಯೋಗಿಯಾಗಿದ್ದರೆ ತೊಂದರೆ ಅನುಭವಿಸುವಂತಹ ಸಾಧ್ಯತೆಗಳಿವೆ.

ದುಸ್ವಪ್ನಗಳ ಕಾಟ

ಶನೇಶ್ಚರ, ಸರ್ಪ ಹಾಗೂ ಚಂದ್ರನ ಕೆಟ್ಟ ಪ್ರಭಾವದಿಂದ ಮಕ್ಕಳ ತೊಂದರೆ ಅನುಭವಿಸುತ್ತ ಭಯದಲ್ಲಿರುವ ಈ ರಾಶಿಯವರಿಗೆ ಗುರುಬಲದ ಶಕ್ತಿಯು ಇಲ್ಲದಿದ್ದಾಗ ದುಸ್ವಪ್ನಗಳ ಕಾಡಾಟ ಹೆಚ್ಚಲಿದೆ.

ಜಾತಕದಿಂದ ಸಮಸ್ಯೆ ನಿವಾರಣೆ

ಸರ್ಪ, ಚಂದ್ರ ಶನೇಶರನ ತೊಂದರೆಗಳನ್ನು ನಿಗ್ರಹಿಸಬಹುದಾದಂತ ಶಕ್ತಿ ಈ ತುಲಾ ರಾಶಿಯವರ ಜಾತಕದಲ್ಲಿ ಇದ್ದರೆ ಗುರುಬಲ ಇಲ್ಲದಿದ್ದರೂ ಕಷ್ಟಗಳಿಂದ ಪಾರಾಗುವರು.

Varsha Bhavisya: 2026: ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ, ಗುರುಬಲವಿದ್ದರೂ ತೊಂದರೆ ತಪ್ಪಿದ್ದಲ್ಲ

ವ್ಯಾಪಾರದಲ್ಲಿ ಲಾಭದ ನಿರೀಕ್ಷೆ ಬೇಡ

ತುಲಾ ಎಂಬುವುದೇ ತಕ್ಕಡಿಯ ಪ್ರತೀಕವಾಗಿದ್ದು, ಈ ರಾಶಿಯವರು ನೇರವಾಗಿ ವ್ಯಾಪಾರದಲ್ಲಿ ತೊಡಗಿರದಿದ್ದರು ಲಾಭ-ನಷ್ಟದ ತೊಳಲಾಟದಲ್ಲಿ ಇರುತ್ತಾರೆ. ಹಾಗಾಗಿ ಪ್ರತಿಯೊಂದು ವಿಷಯದಲ್ಲೂ ಲಾಭವನ್ನೇ ನಿರೀಕ್ಷಿಸಿದರೆ ನೋವು, ನಿರಾಶೆಗಳು ಉಂಟಾಗಲಿವೆ.

ಶನೇಶ್ಚರನ ಪ್ರಭಾವದಿಂದ ಯಶಸ್ಸು

ಈ ರಾಶಿಯವರ ಜಾತಕದಲ್ಲಿ ಶನೇಶ್ಚರ ಒಳಿತನ್ನು ಮಾಡುವುದಾದರೆ ಸರ್ಪವನ್ನಿ ನಿಗ್ರಹಿಸಬಹುದಾದ ಶಕ್ತಿ ದೊರಕಲಿದೆ. ಇವರು ಜೀವನದಲ್ಲಿ ಯಶಸ್ಸಿಗಾಗಿ ತೆಗೆದುಕೊಳ್ಳುವ ರಿಸ್ಕ್‌ಗಳು ಫಲಪ್ರದಾಯಕವಾಗಲಿವೆ.

ಕ್ಷುದ್ರ ದೇವತೆಗಳ ಆರಾಧನೆಯಿಂದ ಭಯ ನಿವಾರಣೆ

ಈ ರಾಶಿಯವರ ಜಾತಕದಲ್ಲಿ ಭಯವನ್ನು ನಿವಾರಣೆಯಾಗಲು ಶನೇಶ್ಚರನ ನೆರವೂ ಸಿಗದೇ ಇರುವಂತ ದುರ್ಬಲ ಸ್ಥಿತಿ ಇದ್ದಲ್ಲಿ, ಇವರು ಕ್ಷುದ್ರ ದೇವತೆಗಳ ಆರಾಧನೆ ಮಾಡುವ ಅವಶ್ಯಕತೆ ಇದೆ. ಕ್ಷುದ್ರ ದೇವತೆಗಳ ಆರಾಧನೆ, ಸ್ಮರಣೆ ಮೂಲಕ ದುಸ್ವಪ್ನಗಳು, ಯಾತನೆಗಳು ನಿವಾರಣೆಯಾಗಲಿವೆ.

ಧೈರ್ಯದಿಂದ ಗೆಲುವು

ಜೀವನದಲ್ಲಿ ದೊಡ್ಡ ಕೆಲಸ-ಕಾರ್ಯಗಳಲ್ಲಿ ಗೆಲುವು ಸಾಧಿಸಬೇಕಾದಾಗ ಭಯಪಡದೇ ಧೈರ್ಯದಿಂದ ಪ್ರದರ್ಶಿಸುವ ಅವಶ್ಯಕತೆ ಇದೆ. ಆಗ ಗುರುಬಲ ಇಲ್ಲದಿದ್ದರೂ ಯೋಗಕಾರಕನಾದ ಶನೇಶ್ಚರನ ಜೀವನದಲ್ಲಿ ಗೆಲುವು ದೊರಕಲಿದೆ.