ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಸೆಲ್ಫಿ, ರೀಲ್ಸ್ ಗೀಳಿನ ಸುತ್ತ

ಗಗನಚುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ಅಥವಾ ಶರವೇಗದಿಂದ ಸಾಗುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ಅಥವಾ ವನ್ಯಮೃಗದ ಜತೆಗೆ ಪೋಸು ಕೊಟ್ಟುಕೊಂಡು ಸೆಲ್ಫಿ ಚಿತ್ರವನ್ನು ಕ್ಲಿಕ್ಕಿಸಲು ಹೋಗಿ ಪ್ರಾಣಕ್ಕೇ ಸಂಚಕಾರ ತಂದುಕೊಂಡವರ ಸುದ್ದಿಗಳನ್ನು ಓದಿದ್ದೇವೆ. ಇಂಥ ಅತಿರೇಕದ ವರ್ತನೆಯಲ್ಲಿ ಸಾಕಷ್ಟು ವೈವಿಧ್ಯಗಳನ್ನೂ ಕಾಣಬಹುದು ಎಂಬುದು ಬೇರೆ ಪ್ರಶ್ನೆ.

Vishwavani Editorial: ಸೆಲ್ಫಿ, ರೀಲ್ಸ್ ಗೀಳಿನ ಸುತ್ತ

-

Ashok Nayak
Ashok Nayak Mar 17, 2026 10:04 AM

ಅತಿಯಾದರೆ ಅಮೃತವೂ ವಿಷವೇ ಎನ್ನುತ್ತಾರೆ ಬಲ್ಲವರು. ಆದರೆ ಈ ಮಾತಿನ ಒಳಾರ್ಥ ವನ್ನು ಗ್ರಹಿಸುವಷ್ಟರಲ್ಲೇ ಎಷ್ಟೋ ಜನರ ಆಯುಷ್ಯ ಮುಗಿಯುತ್ತಾ ಬಂದಿರುತ್ತದೆ ಅಥವಾ ಮುಗಿದುಹೋಗುತ್ತದೆ. ಗಗನಚುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ಅಥವಾ ಶರವೇಗದಿಂದ ಸಾಗುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ಅಥವಾ ವನ್ಯಮೃಗದ ಜತೆಗೆ ಪೋಸು ಕೊಟ್ಟುಕೊಂಡು ಸೆಲ್ಫಿ ಚಿತ್ರವನ್ನು ಕ್ಲಿಕ್ಕಿಸಲು ಹೋಗಿ ಪ್ರಾಣಕ್ಕೇ ಸಂಚಕಾರ ತಂದುಕೊಂಡವರ ಸುದ್ದಿಗಳನ್ನು ಓದಿದ್ದೇವೆ.

ಇಂಥ ಅತಿರೇಕದ ವರ್ತನೆಯಲ್ಲಿ ಸಾಕಷ್ಟು ವೈವಿಧ್ಯಗಳನ್ನೂ ಕಾಣಬಹುದು ಎಂಬುದು ಬೇರೆ ಪ್ರಶ್ನೆ. ಈ ರೀತಿಯ ಅಪಾಯಕಾರಿ ಗೀಳಿನ ಸಾಲಿಗೆ ಸೇರುವಂಥದ್ದು ‘ರೀಲ್ಸ್’ ಚಿತ್ರೀಕರಣದ ಹುಚ್ಚು. ರಾತ್ರಿಯ ಹೊತ್ತಿನಲ್ಲಿ ವೇಗವಾಗಿ ಕಾರು ಓಡಿಸಿಕೊಂಡು ಅದರ ರೀಲ್ಸ್ ಮಾಡುತ್ತಿದ್ದ ಇಬ್ಬರು ಯುವಕರು ಅಪಘಾ ತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನಿಂದ ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಬೇಕಾಗಿ ಬಂದಿದೆ.

ಇದನ್ನೂ ಓದಿ:Vishwavani Editorial: ಸಮಸ್ಯೆಯ ಎರಡು ಮುಖಗಳು

ಇತ್ತೀಚೆಗೆ ಅತಿಯಾಗುತ್ತಿರುವ ಇಂಥ ಮತ್ತೊಂದು ಚಾಳಿಯೆಂದರೆ, ಸರಿಸಬಹುದಾದ ಚಾವಣಿಯ ಸೌಲಭ್ಯವಿರುವ ಆಧುನಿಕ ಕಾರುಗಳಲ್ಲಿ, ಸಂಚಾರದ ವೇಳೆಯಲ್ಲಿ ಆ ಚಾವಣಿ ಯ ಕಿಂಡಿಯಿಂದ ತಲೆಯನ್ನು ಹೊರ ಹಾಕಿ ಹೊರದೃಶ್ಯವನ್ನು ನೋಡುವುದಕ್ಕೆ ತಮ್ಮ ಮಕ್ಕಳಿಗೆ ಅನುವು ಮಾಡಿಕೊಡುವ ಪೋಷಕರ ವರ್ತನೆ. ಇದು ಕೂಡ ಮಕ್ಕಳ ಪಾಲಿಗೆ ಎಷ್ಟೊಂದು ಅಪಾಯಕಾರಿಯಾಗಬಲ್ಲದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಆದರೆ, ಈ ಎಲ್ಲಾ ನಿದರ್ಶನಗಳಲ್ಲಿ ಏನಾದರೊಂದು ದುರಂತ ಸಂಭವಿಸುವವರೆಗೂ ಇಂಥವರಿಗೆ ಬುದ್ಧಿ ಬರುವುದಿಲ್ಲ ಎಂಬುದು ವಿಪರ್ಯಾಸ. ‘ಮಾನವ ಜನ್ಮ ದೊಡ್ಡದು, ಇದ ಹಾಳುಮಾಡಿಕೊಳಬೇಡಿರೋ ಹುಚ್ಚಪ್ಪಗಳಿರಾ’ ಎಂಬ ದಾಸವಾಣಿ ಇವರಿಗೆ ನಾಟುವುದೇ ಇಲ್ಲ. ಹೀಗಾಗಿ ದುರಂತಗಳು ತಪ್ಪಿದ್ದಲ್ಲ...