ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಎಸ್‌ಆರ್‌ಎಚ್‌ ತಂಡವನ್ನು ಬಾಯ್ಕಟ್‌ ಮಾಡಿʼ:ದಿ ಹಂಡ್ರೆಡ್‌ ಟೂರ್ನಿಯಲ್ಲಿ ಪಾಕ್‌ ಆಟಗಾರನಿಗೆ ಅವಕಾಶ!

ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಅಬ್ರಾರ್ ಅಹ್ಮದ್ ಅವರನ್ನು ದಿ ಹಂಡ್ರೆಡ್‌ ಟೂರ್ನಿಯ ಸನ್‌ರೈಸರ್ಸ್ ಲೀಡ್ಸ್ ತಂಡವು ಖರೀದಿಸಿದೆ. ಈ ತಂಡವು ಚೆನ್ನೈನ ಸನ್ ಗ್ರೂಪ್‌ನ ಒಡೆತನದಲ್ಲಿದೆ. ಹಾಗಾಗಿ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಬಾಯ್ಕಟ್‌ ಮಾಡಿ ಎಂದು ಫ್ಯಾನ್ಸ್‌ ಆಗ್ರಹಿಸಿದ್ದಾರೆ.

SRH ಮಾಲೀಕತ್ವದ ದಿ ಹಂಡ್ರೆಡ್‌ ತಂಡದಲ್ಲಿ ಪಾಕ್‌ ಸ್ಪಿನ್ನರ್‌ಗೆ ಚಾನ್ಸ್‌!

ಸನ್‌ರೈಸರ್ಸ್‌ ಲೀಡ್ಸ್‌ ತಂಡಕ್ಕೆ ಸೇರಿದ ಪಾಕ್‌ ಸ್ಪಿನ್ನರ್‌! -

Profile
Ramesh Kote Mar 12, 2026 11:08 PM

ನವದೆಹಲಿ: ಚೆನ್ನೈ ಮೂಲದ ಮಾಧ್ಯಮ ಸಮೂಹ ಸನ್ ಗ್ರೂಪ್ ಒಡೆತನದ ಸನ್‌ರೈಸರ್ಸ್ ಲೀಡ್ಸ್‌ (Sunrisers Hyderabad), ಗುರುವಾರ ನಡೆದ 'ದಿ ಹಂಡ್ರೆಡ್' (The Hundred) ಆಟಗಾರರ ಹರಾಜಿನಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ (Abrar Ahmed) ಅವರನ್ನು ಖರೀದಿಸಿದೆ. ಇದರಿಂದಾಗಿ ಅವರು ಈ ಟೂರ್ನಿಯಲ್ಲಿ ಭಾರತೀಯ ಒಡೆತನದ ಫ್ರಾಂಚೈಸಿಯಿಂದ ಸಹಿ ಮಾಡಲ್ಪಟ್ಟ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ, ಇದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಸರಿ ಅನಿಸಲಿಲ್ಲ ಹಾಗೂ ಸನ್‌ರೈಸರ್ಸ್‌ ಒಡೆತನದ ಎಸ್‌ಆರ್‌ಎಚ್‌ ತಂಡದವನ್ನು ಟೀಕಿಸಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ತಂಡವನ್ನು ಬಾಯ್ಕಟ್‌ ಮಾಡಿ ಎಂದು ಫ್ಯಾನ್ಸ್‌ ಆಗ್ರಹಿಸಿದ್ದಾರೆ.

ಟ್ರೆಂಟ್ ರಾಕೆಟ್ಸ್ ಜೊತೆಗಿನ ಬಿಡ್ಡಿಂಗ್ ದ್ವಂದ್ವ ಯುದ್ಧದ ನಂತರ, ಸನ್‌ರೈಸರ್ಸ್ ಅಹ್ಮದ್ ಅವರನ್ನು ಸುಮಾರು 2.34 ಕೋಟಿ ರು. ಗಳಿಗೆ ಖರೀದಿಸಿತು. 'ದಿ ಹಂಡ್ರೆಡ್' ನಲ್ಲಿ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಬಿಡ್ ಮಾಡುವುದರಿಂದ ದೂರವಿರುತ್ತವೆ ಎಂಬ ಊಹಾಪೋಹಗಳನ್ನು ಸನ್‌ರೈಸರ್ಸ್‌ ಸಂಸ್ಥೆ ದೂರ ಮಾಡಿತು. ಎರಡು ನೆರೆಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದರಿಂದ 2009 ರಿಂದ ಐಪಿಎಲ್ ಫ್ರಾಂಚೈಸಿಗಳು ಅವರೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುತ್ತಿಲ್ಲ. ಈ ಕಾರಣದಿಂದ ಭಾರತೀಯ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತವಾಗಿದೆ.

IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್‌ ಕೊಹ್ಲಿ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಕಾವ್ಯ ಮಾರನ್ ಹರಾಜಿನಲ್ಲಿ ಉಪಸ್ಥಿತಿ

ಸನ್ ಗ್ರೂಪ್ ಸಂಸ್ಥೆಯು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡೆತನವನ್ನೂ ಹೊಂದಿದೆ. ಕಳೆದ ವರ್ಷ, ಈ ಗುಂಪು ಹಿಂದಿನ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್ ತಂಡವನ್ನು ಸ್ವಾಧೀನಪಡಿಸಿಕೊಂಡಿತು. ಸನ್‌ರೈಸರ್ಸ್‌ನ ಸಿಇಒ ಕಾವ್ಯ ಮಾರನ್ ಹರಾಜಿನಲ್ಲಿ ಭಾಗವಹಿಸಿದ್ದರು. ಅವರು SA20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಒಡೆತನವನ್ನೂ ಹೊಂದಿದ್ದಾರೆ; ಆದಾಗ್ಯೂ, ಆ ತಂಡದಲ್ಲಿ ಪ್ರಸ್ತುತ ಯಾವುದೇ ಪಾಕಿಸ್ತಾನಿ ಆಟಗಾರರಿಲ್ಲ. ಅಬ್ರಾರ್ ಅಹ್ಮದ್ ಅವರನ್ನು ಸ್ವಾಧೀನಪಡಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾವ್ಯ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.



ಉಸ್ಮಾನ್ ತಾರಿಕ್‌ಗಾಗಿ ಬಿಡ್‌

ಹರಾಜಿನ ಸಮಯದಲ್ಲಿ ಮಾರಾಟವಾದ ಎರಡನೇ ಪಾಕಿಸ್ತಾನಿ ಆಟಗಾರ ಅಬ್ರಾರ್. ಇದಕ್ಕೂ ಮೊದಲು, ಮತ್ತೊಬ್ಬ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಸುಮಾರು 1.72 ಕೋಟಿ ರು. ಗಳಿಗೆ ಖರೀದಿಸಿತ್ತು. ದಿ ಹಂಡ್ರೆಡ್‌ ಲೀಗ್ ಟೂರ್ನಿ ಜುಲೈ 21 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ.



ಕಾವ್ಯ ಮಾರನ್‌ ವಿರುದ್ಧ ಫ್ಯಾನ್ಸ್‌ ಆಕ್ರೋಶ

ಗುರುವಾರ ಲಂಡನ್‌ನಲ್ಲಿ ನಡೆದಿದ್ದ ಈ ಹರಾಜಿನಲ್ಲಿ ಅಬ್ರಾರ್ ಅಹ್ಮದ್‌ಗಾಗಿ ಆಕ್ರಮಣಕಾರಿ ಬಿಡ್ ಮಾಡಿದ ಹಿನ್ನೆಲೆಯಲ್ಲಿ, ಕೆಲವರು ಸನ್‌ರೈಸರ್ಸ್ ಓನರ್‌ ಕಾವ್ಯ ಮಾರನ್ ಅವರನ್ನೂ ಟೀಕಿಸಿದ್ದಾರೆ.

“ವರ್ಷಗಳ ಕಾಲ ಭಾರತೀಯ ತಂಡಗಳು ರಾಷ್ಟ್ರೀಯ ಭಾವನೆಗೆ ಗೌರವ ನೀಡುವ ಸಲುವಾಗಿ ಪಾಕಿಸ್ತಾನ ಆಟಗಾರರನ್ನು ಆಡಿಸುತ್ತಿರಲಿಲ್ಲ. ಆದರೆ ಹಣ ಮತ್ತು ವಿದೇಶಿ ಲೀಗ್‌ಗಳು ಮಧ್ಯೆ ಬಂದ ಕ್ಷಣವೇ ಆ ನಿಲುವು ಬದಲಾಗಿದೆ. ಭಾರತೀಯ ಮಾಲೀಕತ್ವ, ಭಾರತೀಯ ಬ್ರ್ಯಾಂಡ್ — ಆದರೆ ರಾಷ್ಟ್ರೀಯ ಮನೋಭಾವ ಶೂನ್ಯ. ಲಾಭವೇ ದೇಶಕ್ಕಿಂತ ಮುಖ್ಯವಾಗಿದ್ದರೆ ಭಾರತವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳುವುದನ್ನು ನಿಲ್ಲಿಸಿ,” ಎಂದು ಎಕ್ಸ್ (X) ಬಳಕೆದಾರರೊಬ್ಬರು ಬರೆದಿದ್ದಾರೆ.