ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Johor Cup 2025: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!

ಪಂದ್ಯವಾಡಲು ಅಂಕಣಕ್ಕೆ ಇಳಿಯುತ್ತಿದ್ದಂತೆ ಭಾರತೀಯ ಆಟಗಾರರೇ ಪಾಕಿಸ್ತಾನಿಯರಿಗೆ ಹೈ ಫೈವ್ ನೀಡಿ, ಕೈಕುಲುಕಿ ಶುಭ ಕೋರಿದರು. ಪಂದ್ಯದುದ್ದಕ್ಕೂ ಎರಡೂ ದೇಶಗಳ ಆಟಗಾರರ ನಡುವೆ ಮಾತುಕತೆ ಕಂಡುಬಂತು. ಪಂದ್ಯ ಮುಗಿದ ಬಳಿಕವೂ ಎರಡೂ ತಂಡದ ಆಟಗಾರರು ಪರಸ್ಪರ ಅಭಿನಂದಿಸಿದರು.

IND vs PAK: ಜೋಹರ್‌ ಕಪ್: ಕ್ರೀಡಾ ಸ್ಫೂರ್ತಿ ಮೆರೆದ ಭಾರತ-ಪಾಕ್‌ ಆಟಗಾರರು

-

Abhilash BC Abhilash BC Oct 15, 2025 12:25 PM

ಜೋಹರ್(ಮಲೇಷ್ಯಾ): ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಆಫ್ ಜೋಹರ್ ಕಪ್(Johor Cup 2025) ಕಿರಿಯರ ಹಾಕಿ ಟೂರ್ನಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ(IND vs PAK) ಆಟಗಾರರು ಪರಸ್ಪರ ಕೈಕುಲುಕಿ, ಹೈ-ಫೈವ್ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದರು. ಉಭಯ ತಂಡಗಳ ನಡುವಿನ ರೋಚಕ ಪಂದ್ಯವು 3-3 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು.

ಇತ್ತೀಚಿಗೆ ಏಷ್ಯಕಪ್ ಟಿ20, ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ. ಜೊತೆಗೆ ನೋ ಹ್ಯಾಂಡ್ ಶೇಕ್ ನಿಯಮವನ್ನು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಹೀಗಾಗಿ ಹಾಕಿ ಪಂದ್ಯದಲ್ಲಿಯೂ ಇದು ಮುಂದುವರಿಯುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ನಿಯಮ ಹಾಕಿ ತಂಡಕ್ಕೆ ಅನ್ವಯವಾಗಿಲ್ಲ.

ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್ ಎಫ್) ತನ್ನ ದೇಶದ ಆಟಗಾರರಿಗೆ ಹ್ಯಾಂಡ್ ಶೇಕ್ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಎಚ್ಚರಿಸಿತ್ತು. ಒಂದು ವೇಳೆ ಭಾರತೀಯರು ಹ್ಯಾಂಡ್ ಶೇಕ್ ಮಾಡದಿದ್ದರೆ ನಿರ್ಲಕ್ಷಿಸುವಂತೆ ಸೂಚಿಸಿತ್ತು.

ಇದನ್ನೂ ಓದಿ Women’s ODI World Cup 2025: ಮಹಿಳಾ ವಿಶ್ವಕಪ್‌ನಲ್ಲಿಯೂ ‘ನೋ ಶೇಕ್‌ ಹ್ಯಾಂಡ್‌’ ವಾರ್‌!

ಆದರೆ, ಪಂದ್ಯವಾಡಲು ಅಂಕಣಕ್ಕೆ ಇಳಿಯುತ್ತಿದ್ದಂತೆ ಭಾರತೀಯ ಆಟಗಾರರೇ ಪಾಕಿಸ್ತಾನಿಯರಿಗೆ ಹೈ ಫೈವ್ ನೀಡಿ, ಕೈಕುಲುಕಿ ಶುಭ ಕೋರಿದರು. ಪಂದ್ಯದುದ್ದಕ್ಕೂ ಎರಡೂ ದೇಶಗಳ ಆಟಗಾರರ ನಡುವೆ ಮಾತುಕತೆ ಕಂಡುಬಂತು. ಪಂದ್ಯ ಮುಗಿದ ಬಳಿಕವೂ ಎರಡೂ ತಂಡದ ಆಟಗಾರರು ಪರಸ್ಪರ ಅಭಿನಂದಿಸಿದರು. ಈ ಘಟನೆ ಬಳಿಕ ಕೆಲ ನೆಟ್ಟಿಗರು ಇದನ್ನು ವಿರೋಧಿಸಿದರೆ, ಇನ್ನು ಕೆಲವರು ಭಾರತೀಯ ಆಟಗಾರರ ಈ ನಡೆಯನ್ನು ಮೆಚ್ಚಿದರು.