ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ಗೆ ಪ್ರಾಥಮಿಕ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಕಮಿನ್ಸ್‌, ಹ್ಯಾಜಲ್‌ವುಡ್‌ಗೆ ಸ್ಥಾನ

T20 World Cup 2026: ಆಸ್ಟ್ರೇಲಿಯಾ ಎಡಗೈ ಸ್ಪಿನ್ನರ್‌ಗಳಾದ ಮ್ಯಾಟ್ ಕುಹ್ನೆಮನ್ ಮತ್ತು ಕೂಪರ್ ಕಾನೊಲಿ ಅವರಿಗೆ ಅನಿರೀಕ್ಷಿತ ಕರೆ ನೀಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮ್ಯಾಥ್ಯೂ ಶಾರ್ಟ್ ಹೆಚ್ಚುವರಿ ಸ್ಪಿನ್ ಬೆಂಬಲವ ನೀಡಲಿದ್ದಾರೆ.

ಟಿ20 ವಿಶ್ವಕಪ್‌ಗೆ ಪ್ರಾಥಮಿಕ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

Australia squad for T20 World Cup -

Abhilash BC
Abhilash BC Jan 1, 2026 2:16 PM

ಸಿಡ್ನಿ, ಜ.1: ಇದೇ ಫೆಬ್ರವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್(T20 World Cup 2026) ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ತನ್ನ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಪ್ಯಾಟ್ ಕಮ್ಮಿನ್ಸ್(Pat Cummins), ಜೋಶ್ ಹ್ಯಾಜಲ್‌ವುಡ್(Josh Hazlewood) ಮತ್ತು ಟಿಮ್ ಡೇವಿಡ್‌(Tim David)ಗೂ ಅವಕಾಶ ನೀಡಲಾಗಿದೆ. ಮಿಚೆಲ್‌ ಮಾರ್ಷ್‌ ತಂಡದ ನಾಯನಾಗಿದ್ದಾರೆ.

ಜೂನ್ 2024 ರಿಂದ ಯಾವುದೇ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಕಮ್ಮಿನ್ಸ್, ಬೆನ್ನು ನೋವನ್ನು ನಿಭಾಯಿಸಲು ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಆಶಸ್ ಪಂದ್ಯಗಳಿಂದ ವಿಶ್ರಾಂತಿ ಪಡೆದರು. ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮಾತ್ರ ಆಡಿದ್ದರು. ವಿಶ್ವಕಪ್‌ನಲ್ಲಿ ಅವರ ಭಾಗವಹಿಸುವಿಕೆಯನ್ನು ನಿರ್ಧರಿಸಲು ವೇಗಿ ಈ ತಿಂಗಳ ಕೊನೆಯಲ್ಲಿ ಅಂತಿಮ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ತಂಡಗಳು ತಮ್ಮ ಅಂತಿಮ ತಂಡಗಳನ್ನು ಹೆಸರಿಸಲು ಜನವರಿ 31 ರವರೆಗೆ ಸಮಯಾವಕಾಶವಿದೆ.

"ಕಮಿನ್ಸ್‌ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ವಿಶ್ವಕಪ್‌ಗೆ ಲಭ್ಯವಿರುತ್ತಾರೆ ಎಂಬ ವಿಶ್ವಾಸ ನಮಗಿದೆ" ಎಂದು ಆಸ್ಟ್ರೇಲಿಯಾದ ಆಯ್ಕೆದಾರರ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದರು. ಜತೆಗೆ, "ಇದು ಪ್ರಾಥಮಿಕ ತಂಡ, ಆದ್ದರಿಂದ ಬದಲಾವಣೆಗಳನ್ನು ಮಾಡಬೇಕಾದರೆ, ಅವಧಿಗೆ ಮುಂಚಿತವಾಗಿ ಅವುಗಳನ್ನು ಮಾಡಲಾಗುವುದು" ಎಂದು ಬೈಲಿ ಹೇಳಿದರು.



ಆಸ್ಟ್ರೇಲಿಯಾ ಎಡಗೈ ಸ್ಪಿನ್ನರ್‌ಗಳಾದ ಮ್ಯಾಟ್ ಕುಹ್ನೆಮನ್ ಮತ್ತು ಕೂಪರ್ ಕಾನೊಲಿ ಅವರಿಗೆ ಅನಿರೀಕ್ಷಿತ ಕರೆ ನೀಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮ್ಯಾಥ್ಯೂ ಶಾರ್ಟ್ ಹೆಚ್ಚುವರಿ ಸ್ಪಿನ್ ಬೆಂಬಲವ ನೀಡಲಿದ್ದಾರೆ.

ಇದನ್ನೂ ಓದಿ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಅಫಘಾನಿಸ್ತಾನ; ತಂಡಕ್ಕೆ ಮರಳಿದ ನವೀನ್‌, ಗುಲ್ಬದಿನ್

2024ರ ಟಿ20 ವಿಶ್ವಕಪ್‌ಗಳಲ್ಲಿ ನಾಕೌಟ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದ ಆಸ್ಟ್ರೇಲಿಯಾ, ಫೆಬ್ರವರಿ 11 ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ 2026 ರಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆಸೀಸ್‌ ಎಲ್ಲ ಲೀಗ್‌ ಪಂದ್ಯವನ್ನು ಲಂಕಾದಲ್ಲಿ ಆಡಲಿದೆ.

ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್,ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.